honda-unveils-new-suv-with-a-new-look Honda Motors : ಎಸ್​​ಯುವಿ ಸೆಗ್ಮೆಂಟ್​​ಗೂ ಹೋಂಡಾ ಎಂಟ್ರಿ, ಸ್ಟೈಲಿಸ್ಟ್​ ಕಾರು ಅನಾವರಣ - Vistara News

ಕ್ರಿಕೆಟ್

Honda Motors : ಎಸ್​​ಯುವಿ ಸೆಗ್ಮೆಂಟ್​​ಗೂ ಹೋಂಡಾ ಎಂಟ್ರಿ, ಸ್ಟೈಲಿಸ್ಟ್​ ಕಾರು ಅನಾವರಣ

ಜುಲೈನಲ್ಲಿ ಹೋಂಡಾ ಎಲಿವೇಟ್​ ಕಾರಿನ (Honda Elevate) ಬುಕಿಂಗ್ ಆರಂಭಗೊಳ್ಳಲಿದ್ದು ಹಬ್ಬದ ಋತುವಿನಲ್ಲಿ ವಿತರಣೆ ಆರಂಭಗೊಳ್ಳಲಿವೆ.

VISTARANEWS.COM


on

Honda Elevate
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಹೋಂಡಾ (Honda Motors) ತನ್ನ ಭಾರತ ಕೇಂದ್ರಿತ ಎಲಿವೇಟ್ ಎಸ್​ಯುವಿ (Honda Elevate) ಕಾರನ್ನು ಜೂನ್​ 6ರಂದು ಅನಾವರಣ ಮಾಡಿದೆ. ಇದೇ ವೇಳೆ 2030ರ ಒಳಗೆ ಭಾರತದಲ್ಲಿ ಐದು ಎಸ್​ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆಯ ಮೊದಲ ಕಾರು ಎಲಿವೇಟ್​. ಇದರ ಬುಕಿಂಗ್​ ಜುಲೈನಲ್ಲಿ ಪ್ರಾರಂಭವಾಗಲಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಬಿಡುಗಡೆಗೊಳ್ಳಲಿದೆ.

ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ತಕುಯಾ ಸುಮುರಾ ಎಲಿವೇಟ್​ ಕಾರನ್ನು ಅನಾವರಣಗೊಳಿಸಿ ಮಾತನಾಡಿ ನಾವು ಭಾರತಕ್ಕಾಗಿ ಅತ್ಯಂತ ಬಲಿಷ್ಠ ಉತ್ಪನ್ನ ಕಾರ್ಯತಂತ್ರ ರೂಪಿಸಿದ್ದೇವೆ. 2030ರ ವೇಳೆಗೆ ಐದು ಎಸ್ ಯುವಿಗಳನ್ನು ಹೊಂದಲು ಯೋಜಿಸಿದ್ದೇವೆ. ಎಲಿವೇಟ್​​​ಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದ್ದರೂ, ಭವಿಷ್ಯದಲ್ಲಿ ಮಾದರಿಗೆ ಭಾರತ ಪ್ರಮುಖ ರಫ್ತು ಕೇಂದ್ರವಾಗಲಿದೆ. ಹೋಂಡಾ ಕಾರ್ಸ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ಎಲಿವೇಟ್​್ನ ಎಲೆಕ್ಟ್ರಿಕ್ ಆವೃತ್ತಿಯನ್ನೂಐ ಮಾರುಕಟ್ಟೆಗೆ ತರಲು ಯೋಜಿಸಿದೆ ಎಂದು ಹೇಳಿದ್ದಾರೆ.

2023ರ ವರ್ಷಾರಂಭದಲ್ಲಿ ಹೋಂಡಾ ಕಾರ್ಸ್​​ ಭಾರತದಲ್ಲಿ ಪ್ರತಿ ವರ್ಷ ಒಂದು ಹೊಸ ಮಾದರಿ ಪರಿಚಯಿಸುವ ಯೋಜನೆಯನ್ನು ಹಂಚಿಕೊಂಡಿತ್ತು ಇದರಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳೂ ಸೇರಿವೆ. ದೇಶದಲ್ಲಿ ಹೋಂಡಾ ಬ್ರ್ಯಾಂಡ್ ಅನ್ನು ಬಲಪಡಿಸಲು ಪ್ರೀಮಿಯಂ ಮಾದರಿಗಳನ್ನು ಭಾರತಕ್ಕೆ ತರುವ ಪ್ರಯತ್ವನ್ನು ಮಾಡಲಾಗಿದೆ.

ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ

ಭಾರತದಲ್ಲಿ ಎಸ್​ಯುವಿ ಸೆಗ್ಮೆಂಟ್​​ ಪ್ರಬಲವಾಗುತ್ತಿರವು ಸಮದಲ್ಲಿ ಮಿಡ್​ಸೈಜ್​ ಎಸ್​ಯುವಿ ವಿಭಾಗಕ್ಕೆ ಹೋಂಡಾ ಪ್ರವೇಶ ಮಾಡಿದೆ. ಒಟ್ಟು ಕಾರು ಮಾರುಕಟ್ಟೆಯ ಶೇಕಾಡ 40ರಷ್ಟು ಎಸ್​​ಯುವಿಗಳ ಪಾಲಿದೆ. ಹೀಗಾಗಿ ಹೋಂಡಾ ಎಲಿವೇಟ್ ಅನ್ನು ಮಧ್ಯಮ ಗಾತ್ರದ ಎಸ್​​ಯುವಿ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಹೋಂಡಾ ಮುಂದಾಗಿದೆ. ಈ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೋಂಡಾ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಸಿಟಿ ಮತ್ತು ಅಮೇಜ್ ಮೂಲಕ ತನ್ನ ಇರುವಿಕೆಯನ್ನು ಗಟ್ಟಿ ಮಾಡಿಕೊಂಡಿದೆ. ಇದೀಗ ಆ ಪಟ್ಟೆಗೆ ಎಲಿವೇಟ್ ಸೇರ್ಪಡೆಗೊಂಡಿದೆ. ಇದು ಇದು ವೇಗವಾಗಿ ಬೆಳೆಯುತ್ತಿರುವ ಎಸ್​ಯುವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ : Maruti Suzuki : ಮಾರುತಿಯ 5 ಡೋರ್​ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್​ಗೆ ಪೈಪೋಟಿ ಖಚಿತ

ಸವಾಲುಗಳ ಹೊರತಾಗಿಯೂ, ಭಾರತೀಯ ಕಾರು ಮಾರುಕಟ್ಟೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿ ಮುಂದುವರಿದೆ. ನಾವು ಸೆಡಾನ್ ವಿಭಾಗದಲ್ಲಿ ಜನಪ್ರಿಯತೆ ಹೊಂದಿದ್ದೇವೆ ಮತ್ತು ಅದನ್ನು ಎಸ್​​ಯುವಿ ವಿಭಾಗಕ್ಕೆ ಕೊಂಡೊಯ್ಯಲು ಆಶಿಸಿದ್ದೇವೆ . ಎಲಿವೇಟ್ ಪರಿಪೂರ್ಣ ನಗರ ಕೇಂದ್ರಿತ ಎಸ್​ಯುವಿ ಎಂದು ತ್ಸುಮುರಾ ಹೇಳಿದರು.

ತಪುಕಾರಾ ಘಟಕದಲ್ಲಿ ನಿರ್ಮಾಣ

ಎಲಿವೇಟ್ ಮತ್ತು ಭವಿಷ್ಯದ ಉತ್ಪನ್ನಗಳಿಗೆ ಪೂರಕವಾಗಿ ಹೋಂಡಾ ಕಂಪನಿಯು ರಾಜಸ್ಥಾನದ ತಪುಕಾರದಲ್ಲಿರುವ ತನ್ನ ಘಟಕದಲ್ಲಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದೆ. ದೈನಂದಿನ ಉತ್ಪಾದನಾ ಸಾಮರ್ಥ್ಯವನ್ನು 2023ರ ಮೊದಲ ತ್ರೈಮಾಸಿಕದಲ್ಲಿ 540 ವಾಹನಗಳಿಂದ ದಿನಕ್ಕೆ 660 ವಾಹನಗಳಿಗೆ ವಿಸ್ತರಿಸಲಾಗಿದೆ.

ಎಲಿವೇಟ್ ಬಿಡುಗಡೆಗೆ ಮುಂಚಿತವಾಗಿ ಹೋಂಡಾ ಡೀಲರ್​​ಶಿಪ್​ ನೆಟ್​​ವರ್ಕ್ ಕೂಡ ನವೀಕರಿಸಲಾಗಿದೆ.
ಬ್ರ್ಯಾಂಡಿಂಗ್ ಮತ್ತು ರಿಟೇಲ್ ದೃಷ್ಟಿಕೋನದಿಂದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಶೋರೂಂಗಳ ಹೊಸ ಗ್ರಾಹಕ ಇಂಟರ್ಫೇಸ್​ಗಾಗಿ (ಸಿಐ) 260 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹೋಂಡಾ 238 ನಗರಗಳಲ್ಲಿ ಸುಮಾರು 326 ಮಳಿಗೆಗಳನ್ನು ಹೊಂದಿದೆ. ತನ್ನ ಒಟ್ಟಾರೆ ಮಾರಾಟದಲ್ಲಿ 3ನೇ ಶ್ರೇಣಿಯ ನಗರಗಳು ಸುಮಾರು 30 ಪ್ರತಿಶತದಷ್ಟು ಪಾಲನ್ನು ಹೊಂದಿವೆ ಎಂದು ಕಂಪನಿ ಹೇಳಿಕೊಂಡಿದೆ. ಹೋಂಡಾ ಎಲಿವೇಟ್ ಅನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ನಂತರ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಐಪಿಎಲ್ ವಿಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಡಿಸ್ನಿ ಹಾಟ್​​ಸ್ಟಾರ್​

IPL 2024 : ಮುಂಬಯಿ ಮತ್ತು ಸಿಎಸ್​ಕೆ ನಡುವಿನ ರೋಚಕ ಮುಖಾಮುಖಿಯು ಪಂದ್ಯಾವಳಿಯ ಅತಿದೊಡ್ಡ ಹೋರಾಟಗಳಲ್ಲಿ ಒಂದಾಗಿದೆ. ವಾಂಖೆಡೆಯಲ್ಲಿ ಸಿಎಸ್​​ಕೆ ಗೆದ್ದ ಪಂದ್ಯವು ಎಂಎಸ್ ಧೋನಿ ಅವರ ಅದ್ಭುತ ಬ್ಲಿಟ್ಜ್ (4 ಎಸೆತಗಳಲ್ಲಿ 20 ರನ್) ಸಮಯದಲ್ಲಿ ಟಿವಿಯಲ್ಲಿ 6.3 ಕೋಟಿ ಮಂದಿ ಏಕಕಾಲಕ್ಕೆ ವಿಕ್ಷಿಸಿದ್ದಾರೆ. ಇದು ಪ್ರಸ್ತುತ ಮತ್ತು ಹಿಂದಿನ ಋತುವಿನಲ್ಲಿ ಯಾವುದೇ ಲೀಗ್ ಪಂದ್ಯದಲ್ಲಿ ಅತಿ ದೊಡ್ಡ ದಾಖಲೆಯಾಗಿದೆ.

VISTARANEWS.COM


on

IPL 2024
Koo

ಮುಂಬೈ: ಐಪಿಎಲ್ 2024ರ (IPL 2024 ) ಆವೃತ್ತಿಯು ತನ್ನ ಅರ್ಧದ ಗಡಿ ದಾಟುತ್ತಿದೆ. 41 ಪಂದ್ಯ ಮುಗಿದಿರುವ ನಡುವೆ ಪಂದ್ಯಾವಳಿಯ ಅಧಿಕೃತ ಪ್ರಸಾರಕ ಡಿಸ್ನಿ ಸ್ಟಾರ್ ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆ ಮಾಡಿದೆ. ಟಿವಿ ಪ್ರಸಾರದ ವಿಚಾರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಬಾರ್ಕ್ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಡಿಸ್ನಿ ಸ್ಟಾರ್ 47.5 ಕೋಟಿ ವೀಕ್ಷಕರನ್ನು ತಲುಪಿದೆ. ಒಟ್ಟು ವೀಕ್ಷಣೆಯ ಸಮಯವು ಆಶ್ಚರ್ಯಕರ ರೀತಿಯಲ್ಲಿ 24,500 ಕೋಟಿ ನಿಮಿಷಗಳನ್ನು ಸಾಧಿಸಿದೆ. ಇದು ಹಿಂದಿನ ಆವೃತ್ತಿಗೆ ಹೋಲಿಸಿದರೆ ಬಳಕೆಯಲ್ಲಿ 18% ಹೆಚ್ಚಳವಾಗಿದೆ. 2019 ರಲ್ಲಿ ದಾಖಲಾದ ಹಿಂದಿನ ಗರಿಷ್ಠಕ್ಕೆ ಹೋಲಿಸಿದರೆ ಪ್ರಸಾರಕರು ಲೈವ್ ಬ್ರಾಡ್ಕಾಸ್ಟ್ಗಾಗಿ ಟಿವಿ ವ್ಯಾಪ್ತಿಯಲ್ಲಿ 5% ಬೆಳವಣಿಗೆ ದಾಖಲಿಸಿದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಡಿಸ್ನಿ ಸ್ಟಾರ್ ಮೊದಲ 34 ಪಂದ್ಯಗಳಲ್ಲಿ ಟಿವಿಆರ್​ನಲ್ಲಿ 19% ಬೆಳವಣಿಗೆಯನ್ನು ಕಂಡಿದೆ.

ವಾರದಲ್ಲಿ ನಡೆದ ಮುಂಬಯಿ ಮತ್ತು ಸಿಎಸ್​ಕೆ ನಡುವಿನ ರೋಚಕ ಮುಖಾಮುಖಿಯು ಪಂದ್ಯಾವಳಿಯ ಅತಿದೊಡ್ಡ ಹೋರಾಟಗಳಲ್ಲಿ ಒಂದಾಗಿದೆ. ವಾಂಖೆಡೆಯಲ್ಲಿ ಸಿಎಸ್​​ಕೆ ಗೆದ್ದ ಪಂದ್ಯವು ಎಂಎಸ್ ಧೋನಿ ಅವರ ಅದ್ಭುತ ಬ್ಲಿಟ್ಜ್ (4 ಎಸೆತಗಳಲ್ಲಿ 20 ರನ್) ಸಮಯದಲ್ಲಿ ಟಿವಿಯಲ್ಲಿ 6.3 ಕೋಟಿ ಮಂದಿ ಏಕಕಾಲಕ್ಕೆ ವಿಕ್ಷಿಸಿದ್ದಾರೆ. ಇದು ಪ್ರಸ್ತುತ ಮತ್ತು ಹಿಂದಿನ ಋತುವಿನಲ್ಲಿ ಯಾವುದೇ ಲೀಗ್ ಪಂದ್ಯದಲ್ಲಿ ಅತಿ ದೊಡ್ಡ ದಾಖಲೆಯಾಗಿದೆ. ಎಂಐ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಸಮಯದಲ್ಲಿ ಸ್ಟಾರ್ ಸ್ಪೋರ್ಟ್ಸ್ ಶೋರ್ ಮೀಟರ್ ಕ್ರೀಡಾಂಗಣದಲ್ಲಿ 131 ಡೆಸಿಬಲ್​ಗೆ ಏರಿತ್ತು. ಇದು ಈ ಋತುವಿನಲ್ಲಿ ನಡೆದ ಪಂದ್ಯಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಲೀಗ್ ಪಂದ್ಯವಾಗಿದೆ. ಈ ಪಂದ್ಯವು 2024 ರ ಏಪ್ರಿಲ್ 14 ರಂದು 1540 ಕೋಟಿ ನಿಮಿಷಗಳ ವೀಕ್ಷಣೆಯ ಸಮಯದೊಂದಿಗೆ ಟಿವಿಯಲ್ಲಿ 17.4 ಕೋಟಿ ವೀಕ್ಷಕರನ್ನು ಆಕರ್ಷಿಸಿತ್ತು.

ಇದನ್ನೂ ಓದಿ: TCS World 10K Run : ಈ ದಿನದಂದು ಮೆಟ್ರೊ ರೈಲು ಸೇವೆ ಬೆಳಗ್ಗೆ 4.10ಕ್ಕೆ ಆರಂಭ

ಐಸಿಸಿ ಪುರುಷರ ಟಿ 20 ವಿಶ್ವಕಪ್​​​ನ ಅಧಿಕೃತ ಪ್ರಸಾರಕ ಡಿಸ್ನಿ ಸ್ಟಾರ್ ‘ವೀಸಾ ಟು ವಿಶ್ವಕಪ್’ ಸಪ್ತಾಹವನ್ನು ಪ್ರಾರಂಭಿಸಿದೆ. ಐಪಿಎಲ್​​ನಿಂದ ಹೊರಹೊಮ್ಮುವ ಪ್ರತಿಭಾವಂತ ಪ್ರತಿಭೆಗಳ ಮೇಲೆ ಇದು ಬೆಳಕು ಚೆಲ್ಲುತ್ತದೆ. ಭಾರತೀಯ ತಂಡದ ಸಂಯೋಜನೆಯ ಬಗ್ಗೆ ವೀಕ್ಷಕರಿಗೆ ಬಲವಾದ ಒಳನೋಟದ ವಿಶ್ಲೇಷಣೆಗಳು ಮತ್ತು ಕಾರ್ಯತಂತ್ರದ ಮುನ್ಸೂಚನೆಗಳನ್ನು ಒದಗಿಸಲು ಪ್ರಸಾರಕರು ತನ್ನ ಪರಿಣತಿಯನ್ನು ಬಳಸಿಕೊಂಡಿದೆ. ಪ್ರತಿ ಪಂದ್ಯ ಮತ್ತು ಪ್ರತಿಯೊಬ್ಬ ಆಟಗಾರನ ಕಾರ್ಯಕ್ಷಮತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ.

ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್​ ಬಗ್ಗೆ ಬೇಸರ ವ್ಯಕ್ತಪಡಿಸಿದ ಗವಾಸ್ಕರ್; ಏನಂದ್ರು ಅವರು?

ಬೆಂಗಳೂರು: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಏಪ್ರಿಲ್ 25) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಸನ್​ರೈರ್ಸ್​​ ಹೈದರಾಬಾದ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅರ್ಧ ಶತಕ ಬಾರಿಸಿದ್ದಾರೆ. ಟಾಸ್ ಗೆದ್ದ ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ, ಕೊಹ್ಲಿ ಎಸ್ಆರ್​ಎಚ್​​​ ಬೌಲರ್​ಗಳನ್ನು ಎದುರಿಸಿ ಉತ್ತಮ ಆರಂಭ ಪಡೆದರು. ಪವರ್​ಪ್ಲೇನಲ್ಲಿ ಕೇವಲ 18 ಎಸೆತಗಳಲ್ಲಿ 32 ರನ್ ಗಳಿಸಿದ ಮಾಜಿ ಆರ್​​ಸಿಬಿ ನಾಯಕ ದೊಡ್ಡ ಮೊತ್ತಕ್ಕೆ ಸಜ್ಜಾಗುತ್ತಿರುವಂತೆ ತೋರಿತು.

ಆದಾಗ್ಯೂ, ಎಸ್ಆರ್​​ಎಚ್​​ನ ಸ್ಪಿನ್ ಜೋಡಿ ಶಹಬಾಜ್ ಅಹ್ಮದ್ ಮತ್ತು ಮಯಾಂಕ್ ಮಾರ್ಕಂಡೆ ಗೆ ಕೊಹ್ಲಿ ಹೆದರಿದರು. ಹೀಗಾಗಿ ಅವರ ರನ್ ವೇಗ ಕಡಿಮೆಯಾಯಿತು. 15ನೇ ಓವರ್​ನಲ್ಲಿ ಜಯದೇವ್ ಉನಾದ್ಕಟ್ 43 ಎಸೆತಗಳಲ್ಲಿ 51 ರನ್ ಗಳಿಸಿ ಔಟಾಗುವ ಮೊದಲು ಕೊಹ್ಲಿ ತಮ್ಮ ಕೊನೆಯ 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು. ಇದು ಅವರ ಸ್ಟ್ರೈಕ್​ ರೇಟ್​​ ಕಡಿಮೆಯಾಗಲು ಕಾರಣವಾಯಿತು.

ಮಧ್ಯಮ ಓವರ್​ಗಳಲ್ಲಿ ರನ್​ ವೇಗವನ್ನು ಹೆಚ್ಚಿಸಲು ಕೊಹ್ಲಿಯ ಪರದಾಡಿರುವ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ ಅವರಿಂದ ತೀವ್ರ ಟೀಕೆ ಮಾಡಿದ್ದಾರೆ.

Continue Reading

ಕ್ರೀಡೆ

Virat Kohli : ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್​ ಬಗ್ಗೆ ಬೇಸರ ವ್ಯಕ್ತಪಡಿಸಿದ ಗವಾಸ್ಕರ್; ಏನಂದ್ರು ಅವರು?

Virat Kohli: ಎಸ್ಆರ್​​ಎಚ್​​ನ ಸ್ಪಿನ್ ಜೋಡಿ ಶಹಬಾಜ್ ಅಹ್ಮದ್ ಮತ್ತು ಮಯಾಂಕ್ ಮಾರ್ಕಂಡೆ ಗೆ ಕೊಹ್ಲಿ ಹೆದರಿದರು. ಹೀಗಾಗಿ ಅವರ ರನ್ ವೇಗ ಕಡಿಮೆಯಾಯಿತು. 15ನೇ ಓವರ್​ನಲ್ಲಿ ಜಯದೇವ್ ಉನಾದ್ಕಟ್ 43 ಎಸೆತಗಳಲ್ಲಿ 51 ರನ್ ಗಳಿಸಿ ಔಟಾಗುವ ಮೊದಲು ಕೊಹ್ಲಿ ತಮ್ಮ ಕೊನೆಯ 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು. ಇದು ಅವರ ಸ್ಟ್ರೈಕ್​ ರೇಟ್​​ ಕಡಿಮೆಯಾಗಲು ಕಾರಣವಾಯಿತು.

VISTARANEWS.COM


on

Virat Kohli
Koo

ಬೆಂಗಳೂರು: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಏಪ್ರಿಲ್ 25) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಸನ್​ರೈರ್ಸ್​​ ಹೈದರಾಬಾದ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅರ್ಧ ಶತಕ ಬಾರಿಸಿದ್ದಾರೆ. ಟಾಸ್ ಗೆದ್ದ ಆರ್​​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ, ಕೊಹ್ಲಿ ಎಸ್ಆರ್​ಎಚ್​​​ ಬೌಲರ್​ಗಳನ್ನು ಎದುರಿಸಿ ಉತ್ತಮ ಆರಂಭ ಪಡೆದರು. ಪವರ್​ಪ್ಲೇನಲ್ಲಿ ಕೇವಲ 18 ಎಸೆತಗಳಲ್ಲಿ 32 ರನ್ ಗಳಿಸಿದ ಮಾಜಿ ಆರ್​​ಸಿಬಿ ನಾಯಕ ದೊಡ್ಡ ಮೊತ್ತಕ್ಕೆ ಸಜ್ಜಾಗುತ್ತಿರುವಂತೆ ತೋರಿತು.

ಆದಾಗ್ಯೂ, ಎಸ್ಆರ್​​ಎಚ್​​ನ ಸ್ಪಿನ್ ಜೋಡಿ ಶಹಬಾಜ್ ಅಹ್ಮದ್ ಮತ್ತು ಮಯಾಂಕ್ ಮಾರ್ಕಂಡೆ ಗೆ ಕೊಹ್ಲಿ ಹೆದರಿದರು. ಹೀಗಾಗಿ ಅವರ ರನ್ ವೇಗ ಕಡಿಮೆಯಾಯಿತು. 15ನೇ ಓವರ್​ನಲ್ಲಿ ಜಯದೇವ್ ಉನಾದ್ಕಟ್ 43 ಎಸೆತಗಳಲ್ಲಿ 51 ರನ್ ಗಳಿಸಿ ಔಟಾಗುವ ಮೊದಲು ಕೊಹ್ಲಿ ತಮ್ಮ ಕೊನೆಯ 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದರು. ಇದು ಅವರ ಸ್ಟ್ರೈಕ್​ ರೇಟ್​​ ಕಡಿಮೆಯಾಗಲು ಕಾರಣವಾಯಿತು.

ಮಧ್ಯಮ ಓವರ್​ಗಳಲ್ಲಿ ರನ್​ ವೇಗವನ್ನು ಹೆಚ್ಚಿಸಲು ಕೊಹ್ಲಿಯ ಪರದಾಡಿರುವ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ ಅವರಿಂದ ತೀವ್ರ ಟೀಕೆ ಮಾಡಿದ್ದಾರೆ.

“ಮಧ್ಯಂತರದಲ್ಲಿ ಅವರು ವೇಗ ಕಳೆದುಕೊಂಡಂತೆ ತೋರುತ್ತದೆ. ನಿಖರವಾದ ಸಂಖ್ಯೆಗಳ ಬಗ್ಗೆ ನನಗೆ ಖಚಿತವಿಲ್ಲ, ಆದರೆ 31-32 ರಿಂದ ಅವರು ಔಟ್ ಆಗುವವರೆಗೂ ಅವರು ಬೌಂಡರಿ ಹೊಡೆಯಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ದಿನದ ಕೊನೆಯಲ್ಲಿ, ನೀವು ಇನ್ನಿಂಗ್ಸ್​ನ ಮೊದಲ ಎಸೆತದಲ್ಲಿ ಸ್ಟ್ರೈಕ್ ಎದುರಿಸುತ್ತಿರುವಾಗ ಅವರು ಔಟಾದಾಗ ಮತ್ತು ನೀವು 14 ಅಥವಾ 15 ನೇ ಓವರ್​ನಲ್ಲಿ ಔಟಾದಾಗ, ಅವರಿಂದ 118 ಸ್ಟ್ರೈಕ್ ರೇಟ್ ದೊರಕಿದೆ. ನಿಮ್ಮ ತಂಡವು ನಿಮ್ಮಿಂದ ನಿರೀಕ್ಷಿಸುವುದು ಅದಲ್ಲ”ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಬಹುಶಃ ಅದನ್ನು ಮಾಡಬೇಕಾಗಿತ್ತು: ಸೈಮನ್ ಕ್ಯಾಟಿಚ್

ಕೊಹ್ಲಿ ರನ್​​ ವೇಗದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಹೊಗಳಿದ್ದಾರೆ. ಅವರ ಅರ್ಧ ಶತಕವು ಬೆಂಗಳೂರು ಮೂಲದ ಫ್ರಾಂಚೈಸಿಗೆ ಭಾರಿ ನೆರವು ನೀಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಉತ್ತಮ ಆರಂಭವನ್ನು ಪಡೆಯಲು ಮತ್ತು ಅಪಾಯಕಾರಿ ಎಸ್​ಆರ್​​ಎಚ್​​​ ಬ್ಯಾಟಿಂಗ್ ಲೈನ್ಅಪ್ ವಿರುದ್ಧ ರನ್​ ಗಳಿಸಲ ನೆರವಾಯಿತು ಎಂದು ಹೇಳಿದರು.

ಇದನ್ನೂ ಓದಿ: World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

ಅವರಿಂದಾಗಿ ರಜತ್ ಪಾಟಿದಾರ್ ಸುಂದರವಾಗಿ ಆಡಿದರು ಎಂದು ನಾನು ಭಾವಿಸುತ್ತೇನೆ. ಅವರು ಬೌಂಡರಿ ಮತ್ತು ಸಿಕ್ಸರ್​ಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದರು. ವಿರಾಟ್ ಕೊಹ್ಲಿ ಬಹುಶಃ ಅದನ್ನು ಮಾಡಬೇಕಾಗಿತ್ತು. ಸನ್​ರೈಸರ್ಸ್​ ವಿರುದ್ಧ ಆರ್​​ಸಿಬಿಗೆ ಸ್ಟ್ರೈಕ್ ರೇಟ್ ನಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಎಸ್ಆರ್​ಎಚ್​​​ ವಿರುದ್ಧ 206 ರನ್ ಗಳಿಸಿದರೆ ಸಾಕಾಗುವುದಿಲ್ಲ “ಎಂದು ಕ್ಯಾಟಿಚ್ ಹೇಳಿದರು.

ರಜತ್ ಪಾಟಿದಾರ್ ಅವರ 20 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಕಳೆದ ಕೆಲವು ಪಂದ್ಯಗಳಲ್ಲಿ ಕೊಹ್ಲಿ ತಮ್ಮ ಇನ್ನಿಂಗ್ಸ್ ಅನ್ನು ವೇಗಗೊಳಿಸಲು ವಿಫಲರಾಗಿದ್ದರೂ ಐಪಿಎಲ್ 2024 ರಲ್ಲಿ 430 ರನ್​​ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಆರ್​​ಸಿಬಿ ಪ್ರಸ್ತುತ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಏಪ್ರಿಲ್ 28ರಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

Continue Reading

ಐಪಿಎಲ್ 2024

IPL 2024: ಎಸ್‌ಆರ್‌ಎಚ್‌ ಫ್ಯಾನ್ಸ್‌ ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡ ಆರ್‌ಸಿಬಿ ಫ್ಯಾನ್ಸ್;‌ ವಿಡಿಯೊ ವೈರಲ್

IPL 2024: IPL 2024: ಹೈದರಾಬಾದ್‌ನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಇದರ ಮಧ್ಯೆಯೇ, ಹೈದರಾಬಾದ್‌ ಫ್ಯಾನ್ಸ್‌ಗೆ ಆರ್‌ಸಿಬಿ ಫ್ಯಾನ್ಸ್‌ ತಿರುಗೇಟು ನೀಡಿದ್ದಾರೆ.

VISTARANEWS.COM


on

IPL 2024
Koo

ಹೈದರಾಬಾದ್:‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ಎಂದರೆ, ಅದು ಸ್ಟೇಡಿಯಂನಲ್ಲಿ ಕೇವಲ ಆಟಗಾರರ ನಡುವಿನ ಕಾಳಗ ಅಲ್ಲ. ಮೈದಾನದಲ್ಲಿ ಪಂದ್ಯ ಕುತೂಹಲ ಹಂತ ತಲುಪಿದಾಗ, ಯಾವುದೇ ತಂಡ ಸೋತಾಗ ಎದುರಾಳಿ ತಂಡದ ಅಭಿಮಾನಿಗಳು ಕೂಡ ತಿರುಗೇಟು ನೀಡುತ್ತಾರೆ. ಅದರಲ್ಲೂ, ಆರ್‌ಸಿಬಿ ಅಭಿಮಾನಿಗಳ ಅಬ್ಬರ ಮೈದಾನದಲ್ಲೂ ಅಥವಾ ಹೊರಗೂ ಜೋರಾಗಿರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳು (RCB Fans) ಎಸ್‌ಆರ್‌ಎಚ್‌ ಅಭಿಮಾನಿಗಳ (SRH Fans) ಬಾಯಿಮುಚ್ಚಿಸಿ ಸೇಡು ತೀರಿಸಿಕೊಂಡಿದ್ದಾರೆ.

ಹೌದು, ಪ್ರಸಕ್ತ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಎಸ್‌ಆರ್‌ಎಚ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲನುಭವಿಸಿದ್ದಾಗ ಎಸ್‌ಆರ್‌ಎಚ್‌ ಅಭಿಮಾನಿಗಳು ಸುಮ್ಮನಿರಿ, ಬಾಯಿಮುಚ್ಚಿ ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದರು. ಇದು ಸಹಜವಾಗಿಯೇ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ, ಗುರುವಾರ (ಏಪ್ರಿಲ್‌ 25) ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದಾದ ಬಳಿಕ ಆರ್‌ಸಿಬಿ ಅಭಿಮಾನಿಗಳು ಕೂಡ ಗಪ್‌ ಚುಪ್‌ ಎಂಬ ಸನ್ನೆ ಮಾಡುವ ಮೂಲಕ ಎಸ್‌ಆರ್‌ಎಚ್‌ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು. ಬೌಲಿಂಗ್‌ನಲ್ಲಿ ಪರಾಕ್ರಮ ತೋರಿದ ಆರ್‌ಸಿಬಿ ಬೌಲರ್‌ಗಳು ತಂಡಕ್ಕೆ 35 ರನ್‌ಗಳ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Continue Reading

ಪ್ರಮುಖ ಸುದ್ದಿ

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

IPL 2024: ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು.

VISTARANEWS.COM


on

IPL 2024
Koo

ಹೈದರಾಬಾದ್​: ಆರ್​ಸಿಬಿ ತಂಡದ ದುರ್ಬಲ ಬೌಲಿಂಗ್ ವಿಭಾಗ ಕೊನೆಗೂ ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ತನ್ನ ಪ್ರತಾಪ ತೋರಿಸಿತು. ಹೀಗಾಗಿ ಬೆಂಗಳೂರು ಮೂಲದ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ 2ನೇ ವಿಜಯಕ್ಕೆ ಪಾತ್ರವಾಯಿತು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 35 ರನ್​ಗಳ ಭರ್ಜರಿ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು. ಇದು ಆರ್​ಸಿಬಿ ತಂಡಕ್ಕೆ ಸತತ ಆರು ಸೋಲುಗಳ ಬಳಿಕ ಸಿಕ್ಕ ಗೆಲುವಿನ ಓಯಸಿಸ್​. ಗೆದ್ದ ಆರ್​​ಸಿಬಿ ತಂಡದ ಆಟಗಾರರ ಮುಖದಲ್ಲಿ ನಗು ಮೂಡಿರಲಿಲ್ಲ. ಆದರೆ, ಆರ್​​ಸಿಬಿಯನ್ನೇ ನೆಚ್ಚಿನ ತಂಡವಾಗಿ ಆಯ್ಕೆ ಮಾಡಿಕೊಂಡಿದ್ದ ಲಕ್ಷಾಂತರ ಅಭಿಮಾನಿಗಳ ಮುಖಯದಲ್ಲಿ ಖುಷಿಯ ಛಾಯೆ ಕಂಡು ಬಂತು.

ಇಲ್ಲಿನ ರಾಜೀವ್​ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹೈದರಾಬಾದ್ ಬಳಗ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 181 ರನ್ ಬಾರಿಸಿ ಸೋತಿತು. ಈ ಗೆಲುವಿನೊಂದಿಗೆ ಆರ್​ಸಿಬಿಗೆ ಒಟ್ಟು ನಾಲ್ಕು ಅಂಕಗಳು ದೊರಕಿದವು. ಆದಾಗ್ಯೂ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ 10ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಎಸ್​ಆರ್​ಎಚ್​ ಟೂರ್ನಿಯಲ್ಲಿ 3ನೇ ಸೋಲಿಗೆ ಒಳಗಾಯಿತು ಹಾಗೂ ಮೂರನೇ ಸ್ಥಾನದಲ್ಲಿ ಉಳಿಯಿತು.

ಕೊಹ್ಲಿ, ಪಾಟೀದಾರ್ ಅರ್ಧ ಶತಕ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿಯ ಪ್ರದರ್ಶನವೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ಸ್ಟ್ರೈಕ್​ ರೇಟ್​ ಟೀಕೆಯನ್ನು ಮರೆತು 43 ಎಸೆತಕ್ಕೆ 51 ರನ್ ಬಾರಿಸಿದರು. ಅದಕ್ಕೆ ಅವರು ಟೀಕೆಯನ್ನೂ ಎದುರಿಸಿದರು. ಆದರೆ, ರಜತ್ ಪಾಟೀದಾರ್​ 20 ಎಸೆತಕ್ಕೆ 50 ರನ್ ಬಾರಿಸಿ ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾದರು. ಕ್ಯಾಮೆರೂನ್ ಗ್ರೀನ್​ 37 ರನ್ ಬಾರಿಸಿದರೆ ಫಾಫ್​​ ಡು ಪ್ಲೆಸಿಸ್​ 25 ಕೊಡುಗೆ ಕೊಟ್ಟರು. ಹೀಗಾಗಿ ಪೇಚಾಡಿ 200 ರನ್​ಗಳ ಗಡಿ ದಾಟಿತು.

ಇದನ್ನೂ ಓದಿ: World Record : ಒಂದೇ ಒಂದು ರನ್​ ನೀಡದೇ 7 ವಿಕೆಟ್​ ಉರುಳಿಸಿದ ಬೌಲರ್​​; ಕ್ರಿಕೆಟ್​ ಕ್ಷೇತ್ರದಲ್ಲಿ ವಿಶ್ವ ದಾಖಲೆ

ಬ್ಯಾಟಿಂಗ್​ನಲ್ಲಿ ಭರ್ಜರಿ ಶಕ್ತಿ ಹೊಂದಿದ್ದ ಎಸ್​ಆರ್​ಎಚ್​ ತಂಡಕ್ಕೆ ಈ ಮೊತ್ತ ಸವಾಲು ಆಗಿರಲಿಲ್ಲ. ಆದಾಗ್ಯೂ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆರ್​ಸಿಬಿ ಬೌಲರ್​ಗಳಾದ ಸ್ವಪ್ನಿಲ್​ ಸಿಂಗ್​, ಕರಣ್​ ಶರ್ಮಾ ಹಾಗೂ ಕ್ಯಾಮೆರಾನ್​ ಗ್ರೀನ್​ ಅವರ ತಲಾ 2 ವಿಕೆಟ್​ಗಳ ಬಲದಿಂದಾಗಿ ಆರ್​​ಸಿಬಿ ಎದುರಾಳಿ ತಂಡದ ಬಲವನ್ನು ಕುಗ್ಗಿಸಿರು. ಶಹಬಾಜ್​ ಅಹಮದ್​ 40 ರನ್ ಬಾರಿಸಿ ಎಸ್ಆರ್​ಎಚ್​ ಪರ ಗರಿಷ್ಠ ಸ್ಕೋರರ್​​ ಎನಿಸಿಕೊಂಡರು.

Continue Reading
Advertisement
Rekha kisses Richa Chadha baby bump at Heeramandi event
ಬಾಲಿವುಡ್2 mins ago

Richa Chadda:  ರಿಚಾ ಚಡ್ಡಾ ಬೇಬಿ ಬಂಪ್‌ಗೆ ಮುತ್ತಿಟ್ಟ ನಟಿ ರೇಖಾ!

Lok sabha election 2024
Lok Sabha Election 20248 mins ago

Lok Sabha Election 2024 : ಟೇಬಲ್ ಕಿತ್ತೆಸೆದು ಬಿಜೆಪಿ ಕಾರ್ಯಕರ್ತನ ಎದೆಗೆ ಒದ್ದ ರೌಡಿಶೀಟರ್‌ ಕಟ್ಟಿಂಗ್ ಸೀನ

Lok Sabha Election 2024
ಕರ್ನಾಟಕ12 mins ago

Lok Sabha Election 2024: ಮೂರು ಗಂಟೆವರೆಗೆ ಶೇ.50.93 ವೋಟಿಂಗ್‌; ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗುತ್ತಾ?

IPL 2024
ಪ್ರಮುಖ ಸುದ್ದಿ24 mins ago

IPL 2024 : ಐಪಿಎಲ್ ವಿಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಡಿಸ್ನಿ ಹಾಟ್​​ಸ್ಟಾರ್​

Mangoes for Health
ಆರೋಗ್ಯ33 mins ago

Mangoes for Health: ದಿನಕ್ಕೆ ಎಷ್ಟು ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?

Lok Sabha Election 2024 union minister pralhad joshi statement
ಕರ್ನಾಟಕ35 mins ago

Lok Sabha Election 2024 ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಸತ್ಯ; ನಮ್ಮ ಬಳಿ ದಾಖಲೆ ಇದೆ ಎಂದ ಪ್ರಲ್ಹಾದ್‌ ಜೋಶಿ

Lok Sabha Election 2024
Lok Sabha Election 202441 mins ago

Lok Sabha Election 2024 : ತುಮಕೂರಲ್ಲಿ ಕುದುರೆ ಏರಿ ಬಂದು ಮತದಾನ ಮಾಡಿದ ಡಾಕ್ಟರ್‌

Rahul Dravid
ಕರ್ನಾಟಕ42 mins ago

Rahul Dravid: ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮತದಾನ ಮಾಡಿದ ರಾಹುಲ್‌ ದ್ರಾವಿಡ್;‌ ವಿಡಿಯೊ ಇಲ್ಲಿದೆ

Raj B Shetty entry in duniya Vijay Movie
ಸ್ಯಾಂಡಲ್ ವುಡ್42 mins ago

Raj B Shetty: ದುನಿಯಾ ವಿಜಯ್‌ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ ರಾಜ್ ಬಿ ಶೆಟ್ಟಿ!

ದೇಶ43 mins ago

Congress Manifesto: ಮುಸಲ್ಮಾನರಿಗೆ ಸಂಪತ್ತು ಹಂಚಿಕೆ; ಮನಮೋಹನ್‌ ಸಿಂಗ್‌ ಹಳೆಯ ವಿಡಿಯೋ ಶೇರ್‌ ಮಾಡಿದ ಬಿಜೆಪಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ5 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20245 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20246 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ12 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌