Site icon Vistara News

Team India | ಹನಿಮೂನ್ ನಡಿತಿದ್ಯಾ ಇಲ್ಲಿ? ರೋಹಿತ್‌ ಶರ್ಮ ಬಗ್ಗೆ ನೆಟ್ಟಿಗರು ಈ ರೀತಿ ಹೇಳಿದ್ದು ಯಾಕೆ?

rohit sharma

ಹೈದರಾಬಾದ್‌ : ಇಲ್ಲೇನು ಹನಿಮೂನ್‌ ನಡಿತಾ ಇದೆಯಾ? ಎಲ್‌ಜಿಬಿಟಿ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದೀರಾ? ಟೀಮ್‌ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರನ್ನು ಈ ರೀತಿ ಕಾಲೆಳೆದಿದ್ದಾರೆ ನೆಟ್ಟಿಗರು. ಈ ರೀತಿ ಎಲ್ಲ ಕಾಮೆಂಟ್‌ ಮಾಡಿದ್ದು ಯಾಕೆ ಗೊತ್ತೇ? ಅವರು ದಿನೇಶ್‌ ಕಾರ್ತಿಕ್‌ ಅವರಿಗೆ ಮೈದಾನದಲ್ಲೇ ಕಿಸ್ ಕೊಟ್ಟಿದ್ದಕ್ಕೆ.

ಅಕ್ಷರ್ ಪಟೇಲ್‌ ಅವರು ಬೌಂಡರಿ ಲೈನ್‌ನಿಂದ ಫೀಲ್ಡ್‌ ಮಾಡಿದ ಎಸೆದ ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿದ್ದ ಕಾರಣ ಆಸೀಸ್‌ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗಿದ್ದರು. ಆದರೆ ಚೆಂಡು ವಿಕೆಟ್‌ಗೆ ಬಡಿಯುವ ಮೊದಲು ದಿನೇಶ್‌ ಕಾರ್ತಿಕ್‌ ಅವರ ಗ್ಲವ್ಸ್‌ ಕೂಡ ತಾಗಿತ್ತು. ಚೆಂಡು ದಿನೇಶ್‌ ಕಾರ್ತಿಕ್ ಅವರ ಕೈ ತಾಗಿದ ವಿಕೆಟ್‌ ಬಿಟ್ಟು ಮತ್ತೊಂದು ಬದಿಯ ವಿಕೆಟ್‌ಗೆ ತಾಗಿದ ಕಾರಣ ಮೂರನೇ ಅಂಪೈರ್‌ ಔಟ್‌ ಕೊಟ್ಟರು. ಈ ವೇಳೆ ಖುಷಿ ತಾಳಲಾರದ ನಾಯಕ ರೋಹಿತ್‌ ಶರ್ಮ ದಿನೇಶ್‌ ಕಾರ್ತಿಕ್‌ ಅವರ ತಲೆಗೆ ಮುತ್ತು ಕೊಟ್ಟರು.

ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಕ್ರಿಕೆಟ್‌ ಅಭಿಮಾನಿಯೊಬ್ಬರು ಇಲ್ಲೇನು ಹನಿಮೂನ್‌ ನಡೆಯುತ್ತಿದೆಯಾ ಎಂಬುದಾಗಿ ಪ್ರಶ್ನಸಿದ್ದಾರೆ. ಇನ್ನೊಬ್ಬರು ಇದೇನು ಮೈದಾನದಲ್ಲಿ ಇವರ ಚೆಲ್ಲಾಟ ಎಂಬುದಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | IND vs AUS | ಭಾರತ ತಂಡಕ್ಕೆ 6 ವಿಕೆಟ್‌ ಜಯ, ಸರಣಿ ರೋಹಿತ್‌ ಶರ್ಮ ಬಳಗದ ಕೈವಶ

Exit mobile version