Site icon Vistara News

IPL 2023 : ಚಾಂಪಿಯನ್​ ಸಿಎಸ್​ಕೆಗೆ, ರನ್ನರ್ ಅಪ್​ ಗುಜರಾತ್​​ಗೆ ಎಷ್ಟು ನಗದು ಬಹುಮಾನ ಸಿಕ್ಕಿತು?

IPL 2023 prize money detail

#image_title

ಅಹಮದಾಬಾದ್​: ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 2023ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಫೈನಲ್​​ನಲ್ಲಿ ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಸೆಣಿಸಿ ಐದು ವಿಕೆಟ್​ ಗೆಲುವು ಸಾಧಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಪಡೆ ಮುಂಬೈ ಇಂಡಿಯನ್ಸ್ ಹೊಂದಿದ್ದ ಐದು ಐಪಿಎಲ್ ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟಿದೆ.

14 ವರ್ಷಗಳ ಇತಿಹಾಸದಲ್ಲಿ ಐದನೇ ಬಾರಿಗೆ ಪ್ರಶಸ್ತಿ ಗೆದ್ದ ಸಿಎಸ್​​ಕೆ ತಂಡ 20 ಕೋಟಿ ರೂಪಾಯಿ, ರನ್ನರ್ ಅಪ್ ಸ್ಥಾನ ಪಡೆದ ಹಾರ್ದಿಕ್ ಪಾಂಡ್ಯ ಪಡೆಗೆ 12.5 ಕೋಟಿ ರೂ. ಕ್ವಾಲಿಫೈಯರ್ 2 ರಲ್ಲಿ ಜಿಟಿ ವಿರುದ್ಧ ಸೋತು ಮೂರನೇ ಸ್ಥಾನ ಪಡೆದ ಐದು ಬಾರಿಯ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 7 ಕೋಟಿ ರೂ., ಕೃನಾಲ್ ಪಾಂಡ್ಯ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಕ್ವಾಲಿಫೈಯರ್ 1 ರಲ್ಲಿ ಸೋತ ನಂತರ 4 ನೇ ಸ್ಥಾನ ಪಡೆದ ನಂತರ 6.5 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ.

ಇದನ್ನೂ ಓದಿ : IPL 2023: ʼʼರಿಟೈರ್‌ ಆಗೋಕೆ ಸೂಕ್ತ ಸಮಯ, ಆದ್ರೆ…ʼʼ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ ಧೋನಿ ಹೇಳಿದ್ದೇನು?

ಸೋಮವಾರ ನಡೆದ ಐಪಿಎಲ್ 2023 ರ ಫೈನಲ್​​ ಪಂದ್ಯದಲ್ಲಿ 39 ರನ್​ಗಳಿಗೆ ಔಟ್ ಆದ ಗುಜರಾತ್​ ತಂಡದ ಆರಂಭಿಕ ಬ್ಯಾಟರ್​ ಶುಭ್​ಮನ್​ ಗಿಲ್ 17 ಪಂದ್ಯಗಳಲ್ಲಿ 890 ರನ್ ಗಳಿಸುವ ಮೂಲಕ ಐಪಿಎಲ್ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಅವರು ಅದರಕ್ಕಾಗಿ 15 ಲಕ್ಷ ರೂಪಾಯಿ ಪಡೆದುಕೊಂಡರು. ಗುಜರಾತ್​​ ತಂಡದ ವೇಗಇ ಮೊಹಮ್ಮದ್ ಶಮಿ ಈ ಋತುವಿನ 17 ಪಂದ್ಯಗಳಲ್ಲಿ 28 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದರು. ಅವರಿಗೆ ೧೫ ಲಕ್ಷ ರೂಪಾಯಿ ದೊರೆಯಿತು. 21ನೇ ವಯಸ್ಸಿನಲ್ಲಿ 14 ಪಂದ್ಯಗಳಿಂದ 625 ರನ್ ಗಳಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ವ ರ್ಷದ ಉದಯೋನ್ಮುಖ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ 10 ಲಕ್ಷ ರೂಪಾಯಿ ದೊರಕಿತು.

ಐಪಿಎಲ್ 2023 ರ ಪ್ರಶಸ್ತಿ ವಿಜೇತರ ಪಟ್ಟಿ ಮತ್ತು ಬಹುಮಾನದ ಮೊತ್ತ

ಐಪಿಎಲ್ 2023ರ ಆವೃತ್ತಿಯ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

Exit mobile version