ಕೊಚ್ಚಿ : ಐಪಿಎಲ್ 16ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಗರಿಗೆದರಿದೆ. 405 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು ಫ್ರಾಂಚೈಸಿಗಳು ತಮ್ಮ ತಮ್ಮಲ್ಲಿ ಉಳಿದಿರುವ ಮೊತ್ತವನ್ನು ಹೇಗೆ ಖರ್ಚು ಮಾಡಬೇಕು ಎಂಬ ಯೋಜನೆ ರೂಪಿಸಿಕೊಂಡಿದೆ. ಸುಮಾರು 405 ಆಟಗಾರರು ಹರಾಜಿನ ಪಟ್ಟಿಯಲ್ಲಿದ್ದು ಗರಿಷ್ಠ 87 ಖಾಲಿ ಸ್ಥಾನಗಳಿವೆ.
10 ಫ್ರಾಂಚೈಸಿಗಳು ಈಗಾಗಲೇ ತಮಗೆ ಬೇಕಾಗಿರುವ ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ತಂಡದಿಂದ ಕೈಬಿಟ್ಟಿದೆ. ಕೆಲವು ಆಟಗಾರರನ್ನು ಟ್ರೇಡಿಂಗ್ ಮಾಡಿಕೊಂಡು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ಉಳಿದಿರುವ ಸ್ಥಾನಗಳಿಗೆ ಆಟಗಾರರನ್ನು ಆಯ್ಕೆ ಮಾಡುವುದಕ್ಕೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂದಾಗಿದೆ.
ಆರಂಭದಲ್ಲಿ 991 ಆಟಗಾರರು ಐಪಿಎಲ್ ಹರಾಜಿಗೆ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಆರಂಭದಲ್ಲಿ 369 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ 36 ಆಟಗಾರರನ್ನು ತಂಡಗಳ ಬೇಡಿಕೆಯಂತೆ ಸೇರಿಸಲಾಗಿತ್ತು. 87 ಆಟಗಾರರಲ್ಲಿ 30 ಸ್ಥಾನಗಳು ವಿದೇಶಿ ಆಟಗಾರದ್ದು.
ಈ ಕೆಳಗೆ ಫ್ರಾಂಚೈಸಿಗಳಲ್ಲಿ ಉಳಿದಿರುವ ಮೊತ್ತದ ವಿವರ ಇಲ್ಲಿದೆ
ಸನ್ ರೈಸರ್ಸ್ ಹೈದರಾಬಾದ್ | 42.25 |
ಪಂಜಾಬ್ ಕಿಂಗ್ಸ್ | 32.2 |
ಲಖನೌ ಸೂಪರ್ ಜಯಂಟ್ಸ್ | 23.35 |
ಮುಂಬಯಿ ಇಂಡಿಯನ್ಸ್ | 20.55 |
ಚೆನ್ನೈ ಸೂಪರ್ ಕಿಂಗ್ಸ್ | 20.45 |
ಡೆಲ್ಲಿ ಕ್ಯಾಪಿಟಲ್ಸ್ | 19.45 |
ಗುಜರಾತ್ ಟೈಟನ್ಸ್ | 19.25 |
ರಾಜಸ್ಥಾನ್ ರಾಯಲ್ಸ್ | 13.2 |
ರಾಯಲ್ ಚಾಲೆಂಜರ್ಸ್ ಬೆಂಗಳೂರು | 8.75 |
ಕೋಲ್ಕೊತಾ ನೈಟ್ ರೈಡರ್ಸ್ | 7.05 |