ಬೆಂಗಳೂರು: ವಿಶ್ವ ಕಪ್ 2023ರ ಫೈನಲ್ ಪಂದ್ಯವೊಂದು ಬಾಕಿ ಉಳಿದಿದೆ. ನ್ಯೂಜಿಲ್ಯಾಂಡ್ ತಂಡ ಭಾರತ ವಿರುದ್ಧ ಹಾಗೂ ದಕ್ಷಿನ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ಸ್ ಪಂದ್ಯಗಳಲ್ಲಿ ಸೋತಿವೆ. ಗೆದ್ದ ತಂಡಗಳು ನವೆಂಬರ್ 19ರಂದು ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ತಂಡಗಳು ಟ್ರೋಫಿ ಹಾಗೂ ಬಹುಮಾನ ಮೊತ್ತಕ್ಕಾಗಿ ಸೆಣಸಾಡಲಿವೆ. ಏತನ್ಮಧ್ಯೆ, ಐಸಿಸಿ ಸೆಮಿ ಫೈನಲ್ಸ್ನಲ್ಲಿ ಸೋತಿರುವ ತಂಡಗಳಿಗೂ ಬಹುಮಾನ ಮೊತ್ತ ನೀಡುತ್ತದೆ.
ಸೆಮಿ ಫೈನಲ್ ಪಂದ್ಯಗಳಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳು 6.65 ಕೋಟಿ ರೂಪಾಯಿ ಬಹುಮಾನ ಪಡೆಯಲಿವೆ. ಲೀಗ್ ಹಂತದಲ್ಲಿ ಗೆದ್ದು ನಾಕೌಟ್ ಹಂತ ಪ್ರವೇಶಿಸಿರುವ ಈ ತಂಡಗಳು ಸೂಕ್ತ ಸಮ್ಮಾನ ಪಡೆದುಕೊಳ್ಳಲಿವೆ. ಇನ್ನು ಟ್ರೋಫಿ ಗೆಲ್ಲುವ ತಂಡ 33. 28 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡರೆ, ರನ್ನರ್ ಅಪ್ ತಂಡ 16.64 ಲಕ್ಷ ರೂಪಾಯಿ ಬಹುಮಾನ ಪಡೆದುಕೊಳ್ಳಲಿದೆ.
ಇದನ್ನೂ ಓದಿ : ICC World Cup 2023 : ಫೈನಲ್ ಮ್ಯಾಚ್ ನೋಡಲು ಮೋದಿ ಬರ್ತಾರಾ?
ಲೀಗ್ ಹಂತದಲ್ಲಿ ಹೊರಕ್ಕೆ ನಡೆದ ತಂಡಗಳು 83. 21 ಲಕ್ಷ ರೂಪಾಯಿ ಪಡೆದುಕೊಂಡರೆ, ಗುಂಪು ಹಂತದ ಪಂದ್ಯಗಳ ಗೆಲುವಿಗೆ 33.28 ಲಕ್ಷ ರೂಪಾಯಿ ಪಡೆದುಕೊಳ್ಳಲಿದೆ.
ಸಮಾರೋಪಕ್ಕೆ ಅಹಮದಾಬಾದ್ ಸಜ್ಜು
ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಸಮಾರೋಪ ಸಮಾರಂಭದ ಬಗ್ಗೆ ಬಿಸಿಸಿಐ ಮತ್ತು ಐಸಿಸಿ ಮೌನ ವಹಿಸಿವೆ. ಆದರೆ 2023 ರ ವಿಶ್ವಕಪ್ ಮುಕ್ತಾಯ ಸಮಾರಂಭಕ್ಕಾಗಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಸೋಷಿಯಲ್ ಮೀಡಿಯಾ ಬಝ್ ಮತ್ತು ವೀಡಿಯೊಗಳ ಪ್ರಕಾರ, ಬಾಲಿವುಡ್ ತಾರೆಯರು ಭಾಗವಹಿಸಲಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಸೂರ್ಯ ಕಿರಣ್ ತಂಡವು ಪಂದ್ಯಕ್ಕೆ ಮುಂಚಿತವಾಗಿ ಸ್ಥಳದಲ್ಲಿ ಏರ್ ಶೋ ನಡೆಸಲು ಸಜ್ಜಾಗಿದೆ.
ನವೆಂಬರ್ 19 ರಂದು ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು 10 ನಿಮಿಷಗಳ ಏರ್ ಶೋ ನಡೆಸಲಿದೆ ಎಂದು ಗುಜರಾತ್ನ ರಕ್ಷಣಾ ಪಿಆರ್ಒ ಗುರುವಾರ ಪ್ರಕಟಿಸಿದ್ದಾರೆ. ಏರ್ ಶೋನ ಪೂರ್ವಾಭ್ಯಾಸ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ ಎಂದು ಪಿಆ್ಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ನೃತ್ಯ ಗುಂಪುಗಳು ಭಾನುವಾರ ಒಂದು ರೀತಿಯ ಸಮಾರಂಭಕ್ಕಾಗಿ ಕ್ರೀಡಾಂಗಣದ ಆವರಣದಲ್ಲಿ ಪೂರ್ವಾಭ್ಯಾಸ ನಡೆಸುತ್ತಿವೆ. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್ಗಳಿಂದ ಸೋಲಿಸಿದ ಭಾರತ ಫೈನಲ್ಗೇರಿದೆ. ಇದೇ ವೇಳೆ ಎರಡನೇ ಸೆಮಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್ಗಳಿಂದ ಮಣಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.
ವಿಶ್ವಕಪ್ 2023 ಸಮಾರೋಪ ಸಮಾರಂಭ ನಡೆಯಲಿದೆಯೇ?
ಅಹ್ಮದಾಬಾದ್ನಲ್ಲಿ ಕ್ರಿಕೆಟ್ ವಿಶ್ವಕಪ್ನ ಉದ್ಘಾಟನಾ ಸಮಾರಂಭವೂ ಇರಲಿಲ್ಲ. ಬದಲಿಗೆ, ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೊದಲು ಮತ್ತು ಪಂದ್ಯದ ಮಧ್ಯದಲ್ಲಿ ಪ್ರದರ್ಶನ ನಡೆಯಿತು. ವಿಶ್ವಕಪ್ 2023 ರ ಸಮಾರೋಪ ಸಮಾರಂಭದ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಲಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ, ಎರಡು ಜೆಟ್ಗಳು ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ಹಾರುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಇದು ವಿಶ್ವಕಪ್ ಫೈನಲ್ ಗೆ ಏರ್ ಶೋನ ಸೂಚನೆಯಾಗಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 70 ರನ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆಡಿರುವ 10 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಭಾರತ ಟೂರ್ನಿಯಲ್ಲಿ ಅಜೇಯವಾಗಿದೆ. ಈಗ, ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಅವರಿಗೆ ಇನ್ನೂ ಒಂದು ಜಯದ ಅಗತ್ಯವಿದೆ.