Site icon Vistara News

IND vs AUS Final: ಮೋದಿ ಸ್ಟೇಡಿಯಂನಲ್ಲಿ ಜನಸಾಗರ; ಎಲ್ಲೆಲ್ಲೂ ಕಂಗೊಳಿಸಿದ ನೀಲ ವರ್ಣ

Guess which of the two teams the fans are rooting for

ಅಹಮದಾಬಾದ್​: ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೆಡಿಯಂ ಎಂಬ ಖ್ಯಾತಿ ಪಡೆದಿರುವ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ(India vs Australia Final) ಮತ್ತು ಭಾರತ ನಡುವಣ ವಿಶ್ವಕಪ್​ ಫೈನಲ್​ ಪಂದ್ಯವನ್ನು ನೋಡಲು ಜನಸಾಗರವೇ ಸೇರಿದೆ. ಸ್ಟಡಿಯಂನ ಎಲ್ಲ ಸೀಟ್​ಗಳು ಭರ್ತಿಗೊಂಡಿದೆ. ಎಲ್ಲೆಲ್ಲೂ ನೀಲಿ ಬಣ್ಣವೇ ರಾರಾಜಿಸುತ್ತಿದೆ. ಸ್ಟೇಡಿಯಂನಲ್ಲಿ ವಿಹಂಗಮ ನೋಟದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ದುಕೊಂಡಿದೆ. ಭಾರತ ಬ್ಯಾಟಿಂಗ್​ ಆಹ್ವಾನ ಪಡೆದು ಇನಿಂಗ್ಸ್​ ಆರಂಭಿಸಿದೆ.

ಆಸ್ಟ್ರೇಲಿಯಾ ವಿರುದ್ಧವೇ ಮೊದಲ ಪಂದ್ಯ…

ಮೊಟೆರಾ ಕ್ರೀಡಾಂಗಣ ನಿರ್ಮಾಣವಾಗಿದ್ದು 1982ರಲ್ಲಿ. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸ್ಟೇಡಿಯಂನ ಆಗಿನ ಹೆಸರು ಸರ್ದಾರ್ ಪಟೇಲ್ ಸ್ಟೇಡಿಯಂ. 1984ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಈ ಅಂಗಳದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ ಆ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.

ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿ

ಹಲವು ಐತಿಹಾಸಿಕ ಘಟನೆಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ. ಹಲವು ‘ಪ್ರಥಮ’ಗಳು ಈ ಮೊಟೆರಾ ಮೈದಾನದಲ್ಲಿ ದಾಖಲಾಗಿದೆ. 1987ರಲ್ಲಿ ಇದೇ ಮೈದಾನದಲ್ಲಿ ಭಾರತದ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿ ಬಂದಿದ್ದರು. ಏಳು ವರ್ಷದ ನಂತರ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಕಪಿಲ್ ದೇವ್ ಮಾಡಿದ್ದರು. ಅಂದು 432ನೇ ವಿಕೆಟ್ ಪಡೆದು ಸರ್ ರಿಚರ್ಡ್ ಹ್ಯಾಡ್ಲಿ ದಾಖಲೆಯನ್ನು ಮುರಿದಿದ್ದರು. 2011ರಲ್ಲಿ ಇದೇ ಮೊಟೆರಾ ಅಂಗಳದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 18 ಸಾವಿರ ರನ್ ಬಾರಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದರು.

ಇದನ್ನೂ ಓದಿ IND vs AUS Final: ‘ಆಲ್​ ದಿ ಬೆಸ್ಟ್​ ಟೀಮ್​ ಇಂಡಿಯಾ’; ಪ್ರಧಾನಿ ಮೋದಿಯಿಂದ ಹಾರೈಕೆ

ಯುವಿ ಬ್ಯಾಟಿಂಗ್​ ಸಾಹಸ…

2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಯಾವ ಭಾರತೀಯ ಅಭಿಮಾನಿಯೂ ಮರೆಯಲು ಅಸಾಧ್ಯ. ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ ವೀರೋಚಿತವಾಗಿ ಹೋರಾಡಿದ್ದ ಯುವರಾಜ್ ಸಿಂಗ್ ಭಾರತಕ್ಕೆ ಜಯ ತಂದಿತ್ತಿದ್ದರು.

ಪುನರ್ ನಿರ್ಮಾಣ

2015ರವರೆಗೆ ಮೊಟೆರಾ ಸರ್ದಾರ್ ಪಟೇಲ್ ಮೈದಾನದಲ್ಲಿ 12 ಟೆಸ್ಟ್, 23 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ. 2015ರಲ್ಲಿ ಈ ಮೈದಾನವನ್ನು ಸಂಪೂರ್ಣವಾಗಿ ಕೆಡವಲಾಯಿತು. ಬ್ಯಾಟಿಂಗ್​ ಟ್ರ್ಯಾಕ್​ ಆಗಿದ್ದ ಈ ಪಿಚ್​ ಈಗ ಬೌಲಿಂಗ್​ ಟ್ರ್ಯಾಕ್​ ಆಗಿ ಮಾರ್ಪಟ್ಟಿದೆ. ಇಲ್ಲಿ ಆಡಿದ ಈ ಬಾರಿಯ 4 ವಿಶ್ವಕಪ್​ ಪಂದ್ಯಗಳಲ್ಲಿ 286 ರನ್‌ಗಳೇ ಅತಿ ದೊಡ್ಡ ಸ್ಕೋರ್ ಆಗಿದೆ. ಯಾವ ಪಂದ್ಯದಲ್ಲೂ 300ರ ಗಡಿ ದಾಟಲು ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟಿಂಗ್​ನಿಂದ ಲಾಭ

ಟಾಸ್ ಸೋಲಿನಿಂದ ನಮಗೇನು ನಷ್ಟವಾಗಿಲ್ಲ ಎಂಬುದಾಗಿ ಭಾರತ ತಂಡ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ನಾವು ಟಾಸ್ ಗೆದ್ದಿದ್ದರೆ ನಮ್ಮದು ಬ್ಯಾಟಿಂಗ್ ಆಯ್ಕೆಯೇ ಆಗಿರುತ್ತಿತ್ತು ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಟಾಸ್​ ನಿರ್ಣಯದಲ್ಲಿ ಎರಡೂ ತಂಡಗಳು ಸಂತೋಷಗೊಂಡಿವೆ ಎಂದೇ ಹೇಳಬಹುದು. ರೋಹಿತ್ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ಭಾರತ ತಂಡ ದೊಡ್ಡ ಮೊತ್ತವನ್ನು ಪೇರಿಸಿಯೇ ಎದುರಾಳಿಯನ್ನು ನಿಯಂತ್ರಣ ಮಾಡುವ ಗುರಿಯನ್ನು ಹೊಂದಿರುವುದು ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಸ್ಪಷ್ಟವಾಗುತ್ತದೆ. ಪಿಚ್​ ಸ್ವಲ್ಪ ಮಟ್ಟಿಗೆ ಸ್ಪಿನ್​ಗೆ ನೆರವಾಗುತ್ತದೆ ಎಂಬ ಸುಳಿವು ಇರುವ ಹೊರತಾಗಿಯೂ ರೋಹಿತ್ ಶರ್ಮಾ ಅಶ್ವಿನ್ ಅವರನ್ನು 11ರ ಬಳಗಕ್ಕೆ ಸೇರಿಸದೇ ಸೂರ್ಯಕುಮಾರ್ ಅವರನ್ನು ಉಳಿಸಿಕೊಂಡಿದ್ದಾರೆ. ಅಂದರೆ ಭಾರತ ತಂಡದ ಗುರಿ ಸ್ಪಷ್ಟವಾಗಿದೆ. ಅಂದರೆ, ಮೊದಲು ಬ್ಯಾಟ್​ ಮಾಡಿದ ಒಡ್ಡ ಮೊತ್ತವನ್ನು ಪೇರಿಸಿ ಎದುರಾಳಿಯನ್ನು ನಿಯಂತ್ರಿಸುವುದೇ ಟೀಮ್ ಇಂಡಿಯಾದ ಗುರಿಯಾಗಿದೆ.

Exit mobile version