Site icon Vistara News

Cricket Coach : ಟೀಮ್​ ಬಸ್​ನಲ್ಲಿ ಎಣ್ಣೆ ಹೊಡೆದ ಮಹಿಳೆಯರ ಕ್ರಿಕೆಟ್ ತಂಡದ ಕೋಚ್ ಸಸ್ಪೆಂಡ್​!

Cricket Coach

ಹೈದರಾಬಾದ್: ಟೀಮ್​ ಬಸ್​​ನಲ್ಲಿಯೇ ಮದ್ಯಪಾನ ಮಾಡಿದ ಹೈದರಾಬಾದ್​ ಹಿರಿಯ ಮಹಿಳಾ ತಂಡದ ಮುಖ್ಯ ಕೋಚ್ (Cricket Coach ) ವಿದ್ಯುತ್ ಜೈಸಿಂಹ ಅವರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ ಜೈಸಿಂಹ ಅವರು ತಂಡದ ಬಸ್​ನಲ್ಲಿ ಮದ್ಯವನ್ನು ಸಾಗಿಸಿದ್ದಲ್ಲದೆ, ಸೇವಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಅಲ್ಲಿದೆ, ಆಟಗಾರ್ತಿಯರ ಜತೆ ಅನುಚಿತ ವರ್ತನೆ ತೋರಿದ್ದರು. ವಿಡಿಯೊ ವೈರಲ್​ ಆದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​ನ ಮೋಹನ್ ರಾವ್ ತಕ್ಷಣ ಮಧ್ಯಪ್ರವೇಶಿಸಿ, ಮುಂದಿನ ಸೂಚನೆ ಬರುವವರೆಗೆ ದೇಶದಲ್ಲಿ ಹಾಗೂ ಇನ್ನಿತರ ಎಲ್ಲ ಕಡೆ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಿಂದ ದೂರವಿರಲು ಜೈಸಿಂಹ ಅವರಿಗೆ ಸೂಚನೆ ನೀಡಿದ್ದಾರೆ. ಮುಂಬರುವ ವಾರಗಳಲ್ಲಿ ಹೈದರಾಬಾದ್ ಮಂಡಳಿಯು ಸಮಗ್ರ ತನಿಖೆಯನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ವಿದ್ಯುತ್ ಜೈಸಿಂಹ ಅವರು ತಂಡದ ಸಮ್ಮುಖದಲ್ಲಿ ಮದ್ಯ ಸೇವಿಸಿದ್ದಲ್ಲದೆ, ಆಟಗಾರರೊಂದಿಗೆ ಅನುಚಿತ ವರ್ತನೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿಲಾಗಿದೆ. ಈ ಬಗ್ಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ಗೆ ಅನಾಮಧೇಯ ಇಮೇಲ್ ಬಂದಿತ್ತು. ಬಳಿಕ ಕ್ರಮ ಕೈಗೊಳ್ಳಲಾಗಿದೆ. ಹೈದರಾಬಾದ್ ಹಿರಿಯ ಮಹಿಳಾ ತಂಡದ ಕ್ರಿಕೆಟಿಗರ ಪೋಷಕರು ಜೈಸಿಂಹ ಅವರ ದುರ್ನಡತೆಯ ನಿದರ್ಶನಗಳನ್ನು ವಿವರಿಸಿ ಪತ್ರ ಬರೆದಿದ್ದಾರೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸಾರವಾಗಲು ಪ್ರಾರಂಭಿಸಿದ ನಂತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸಂಘ ಹೇಳಿದೆ. ‘

ಘಟನೆ ಹೈದರಾಬಾದ್ ರಾಜ್ಯ ಅಸೋಸಿಯೇಷನ್​ ವರ್ಚಸ್ಸಿಗೆ ಕಳಂಕ ತಂದಿದೆ. ವಿದ್ಯುತ್ ಜೈಸಿಂಹ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಶಾಶ್ವತವಾಗಿ ವಜಾಗೊಳಿಸಬೇಕು. ಈ ಪ್ರಕರಣವನ್ನು ಪಕ್ಷಪಾತವಿಲ್ಲದೆ ಮತ್ತು ಪಾರದರ್ಶಕ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

ಇದು ಗಂಭೀರ ಕಾಳಜಿಯ ವಿಷಯ

ಹೈದರಾಬಾದ್ ಅಸೋಸಿಯೇಷನ್ ಅಧ್ಯಕ್ಷ ಜಗ್ ಮೋಹನ್ ರಾವ್ ಅವರು ಬರೆದಿರುವ ಪತ್ರದಲ್ಲಿ, ವಿದ್ಯುತ್ ಜೈಸಿಂಹ ಅವರು ತಂಡದ ಬಸ್ ಒಳಗೆ ಮದ್ಯ ಸೇವಿಸುತ್ತಿರುವುದನ್ನು ಕಾಣಬಹುದು. ತಂಡದ ಭಯಭೀತ ಆಟಗಾರರೊಬ್ಬರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : WPL 2024 : ಡೆಲ್ಲಿ ತಂಡದ ನೂತನ ಜೆರ್ಸಿ ಬಿಡುಗಡೆ, ಡಿಪಿ ವರ್ಲ್ಡ್​ ಟೈಟಲ್ ಪಾರ್ಟ್​​ನರ್​​

ಹೈದರಾಬಾದ್ ರಾಜ್ಯ ತಂಡದೊಂದಿಗೆ ಇರುವಾಗ ನೀವು ತಂಡದ ಬಸ್​ನಲ್ಲಿ ಮದ್ಯವನ್ನು ಸಾಗಿಸುವ ಮತ್ತು ಸೇವಿಸುವ ವೀಡಿಯೊಗಳೊಂದಿಗೆ ಎಚ್​ಸಿಎಗೆ ಅನಾಮಧೇಯ ಇಮೇಲ್ ಬಂದಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಇದಲ್ಲದೆ, ವೀಡಿಯೊಗಳನ್ನು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಪ್ರಸಾರ ಮಾಡಲಾಗಿದೆ.

ಇದು ಕಾಳಜಿಯ ವಿಷಯವಾಗಿದೆ .ಈ ವಿಷಯದಲ್ಲಿ ಸಮಗ್ರ ತನಿಖೆ ನಡೆಸುವಂತೆ ನಾನು ಕೇಳಿದ್ದೇನೆ ಮತ್ತು ತನಿಖೆಯ ಫಲಿತಾಂಶದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು. ತನಿಖೆ ನಡೆಯುತ್ತಿರುವಾಗ ಎಚ್ಸಿಎ ಪರವಾಗಿ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳದಂತೆ ನಾನು ನಿಮಗೆ ನಿರ್ದೇಶನ ನೀಡುತ್ತಿದ್ದೇನೆ ಎಂದು ಜಗ್ ಮೋಹನ್ ರಾವ್ ಸೂಚನೆ ನೀಡಿದ್ದಾರೆ.

Exit mobile version