Site icon Vistara News

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Saurav Gangly

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿರಾಟ್ ಕೊಹ್ಲಿಯನ್ನು ಭಾರತದ ನಾಯಕತ್ವದಿಂದ ತೆಗೆದುಹಾಕಲಿಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ವಿಶೇಷವೆಂದರೆ 2021 ರ ಟಿ 20 ವಿಶ್ವಕಪ್​​ನಲ್ಲಿ ಭಾರತದ ಗುಂಪು ಹಂತದಲ್ಲಿಲ ನಿರ್ಗಮಿಸಿದ ಬಳಿಕ ಕೊಹ್ಲಿ ಟಿ 20 ಐ ನಾಯಕತ್ವವನ್ನು ತ್ಯಜಿಸಿದ್ದರ. ಆದರೆ ಏಕದಿನ ಮತ್ತು ಟೆಸ್ಟ್​ನಲ್ಲಿ ತಂಡವನ್ನು ಮುನ್ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದಾಗ್ಯೂ, ಏಕದಿನ ಪಂದ್ಯಗಳಲ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಈ ಪ್ರಸಂಗ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು.

2022ರ ಜನವರಿಯಲ್ಲಿ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಈ ಘಟನೆಯ ನಂತರ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಅವರು ಕೊಹ್ಲಿಯ ನಿರ್ಧಾರದಲ್ಲಿ ಅವರ ಪಾತ್ರವಿದೆ ಎಂದು ಹಲವರು ಆರೋಪಿಸಿದ್ದ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗಳಿಗೆ ಗುರಿಯಾದ್ದರು. ನಂತರ ರೋಹಿತ್ ಶರ್ಮಾ ಅವರನ್ನು ಭಾರತದ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕನನ್ನಾಗಿ ಮಾಡಲಾಗಿತ್ತು.

ಗಂಗೂಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಕೊಹ್ಲಿಯನ್ನು ಭಾರತದ ನಾಯಕ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಅವರನ್ನು ನೇಮಿಸಿದ ಕೀರ್ತಿ ಬಂಗಾಳದ ರಾಜಕುಮಾರನಿಗೆ ಸಲ್ಲುತ್ತದೆ ಎಂಬ ವೀಡಿಯೊವನ್ನು ಪ್ರದರ್ಶಿಸಲಾಯಿತು. ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ನಾಯಕ, ಅದರ ಒಂದು ಭಾಗ ಮಾತ್ರ ಸರಿಯಾಗಿದೆ ಎಂದು ಹೇಳಿದರು. ಕೊಹ್ಲಿಯನ್ನು ವಜಾ ಮಾಡುವಲ್ಲಿ ತಮ್ಮ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಕೊಹ್ಲಿ ಟಿ 20 ಐ ನಾಯಕತ್ವವನ್ನು ಮಾತ್ರ ಬಿಡಲು ಬಯಸಿದ್ದರು. ಆದರೆ, ಸೀಮಿತ ಓವರ್​ಗಳ ಮಾದರಿ ಹಾಗೂ ಟೆಸ್ಟ್​ ಮಾದರಿಗೆ ಪ್ರತ್ಯೇಕ ನಾಯಕರನ್ನು ಹೊಂದುವುದು ಹೆಚ್ಚು ಅನುಕೂಲ ಎಂದು ಕೊಹ್ಲಿಗೆ ಸಲಹೆ ಎಂದು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

“ನಾನು ವಿರಾಟ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಿಲ್ಲ. ನಾನು ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಅವರು ಟಿ 20 ಪಂದ್ಯಗಳಲ್ಲಿ ನಾಯಕತ್ವ ವಹಿಸಲು ಆಸಕ್ತಿ ಹೊಂದಿರಲಿಲ್ಲ. ಆದ್ದರಿಂದ, ಅವರು ಆ ನಿರ್ಧಾರವನ್ನು ತೆಗೆದುಕೊಂಡ ನಂತರ, ಟಿ 20 ಪಂದ್ಯಗಳಲ್ಲಿ ಮುನ್ನಡೆಸಲು ಆಸಕ್ತಿ ಹೊಂದಿಲ್ಲದಿದ್ದರೆ, ಸಂಪೂರ್ಣ ವೈಟ್-ಬಾಲ್ ಕ್ರಿಕೆಟ್​ ನಾಯಕತ್ವದಿಂದ ಕೆಳಗಿಳಿಯುವುದು ಉತ್ತ ಎಂದು ನಾನು ಹೇಳಿದ್ದೆ. ವೈಟ್ ಬಾಲ್ ಕ್ರಿಕೆಟ್​ಗೆ ಮತ್ತು ಕೆಂಪು ಚೆಂಡಿನ ತಂಡಕ್ಕೆ ಪ್ರತ್ಯೇಕ ನಾಯಕ ಇರಲಿ ಎಂಬುದೇ ನನ್ನ ಆಶಯವಾಗಿತ್ತು “ಎಂದು ಗಂಗೂಲಿ ರಿಯಾಲಿಟಿ ಶೋ ದಾದಾಗಿರಿ ಅನ್ಲಿಮಿಟೆಡ್ ಸೀಸನ್ 10 ರಲ್ಲಿ ಹೇಳಿದ್ದಾರೆ.

ರೋಹಿತ್​​ಗೂ ಆಸಕ್ತಿ ಇರಲಿಲ್ಲ

ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಲು ರೋಹಿತ್ ಕೂಡ ಆಸಕ್ತಿ ಹೊಂದಿರಲಿಲ್ಲ ಎಂದು 51 ವರ್ಷದ ಆಟಗಾರ ಹೇಳಿದ್ದಾರೆ. ಆದಾಗ್ಯೂ, ಮುಂಬೈ ಬ್ಯಾಟರ್​ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದೆ ಎಂದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ 2023 ರಲ್ಲಿ ಭಾರತವು ನಂಬಲಾಗದಷ್ಟು ಉತ್ತಮ ಪ್ರದರ್ಶನ ನೀಡಿತ/, ರೋಹಿತ್ ನಾಯಕತ್ವದಲ್ಲಿ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೊದಲು ಸತತ 10 ಪಂದ್ಯಗಳನ್ನು ಗೆದ್ದಿತ್ತು.

ಇದನ್ನೂ ಓದಿ : Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

“ನಾನು ರೋಹಿತ್ ಶರ್ಮಾ ಅವರನ್ನು ನಾಯಕತ್ವದ ಪಾತ್ರವನ್ನು ತೆಗೆದುಕೊಳ್ಳಲು ಸಾಕಷ್ಟು ಒತ್ತಾಯಿಸಿದೆ. ಏಕೆಂದರೆ ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವ ವಹಿಸಲು ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಬಹುಶಃ ನಾನು ಅವರಿಗೆ ಸ್ವಲ್ಪ ಕೊಡುಗೆ ನೀಡಿದ್ದೇನೆ. ಯಾರೇ ಆಡಳಿತ ನಡೆಸುತ್ತಿದ್ದರೂ, ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಆದ್ಯತೆ. ಭಾರತೀಯ ಕ್ರಿಕೆಟ್​​​ ಸುಧಾರಣೆಗಾಗಿ ಕೆಲಸ ಮಾಡಲು ನನ್ನನ್ನು ಬಿಸಿಸಿಐ ಅಧ್ಯಕ್ಷರಾಗಿ ನೇಮಿಸಿದ್ದು. ಈ ಘಟನೆ ಸಣ್ಣ ಭಾಗವಾಗಿದೆ, “ಎಂದು ಅವರು ಹೇಳಿದ್ದಾರೆ.

Exit mobile version