ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತು ತನ್ನ ಅಂತ್ಯ ತಲುಪುತ್ತಿದ್ದಂತೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಪ್ಲೇಆಫ್ಗೆ ಕೊಂಡೊಯ್ಯುವ ಪ್ರಮುಖ ಜವಾಬ್ದಾರಿ ಅವರ ಮೇಲಿದೆ. ಪ್ರಸ್ತುತ 13 ಪಂದ್ಯಗಳಲ್ಲಿ 661 ರನ್ಗಳೊಂದಿಗೆ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸುವ ಕೊಹ್ಲಿ ಅವರ ನಿಶ್ಚಯ ದೃಢವಾಗಿದೆ.
35 ವರ್ಷದ ಆಟಗಾರ ಇತ್ತೀಚೆಗೆ ತಮ್ಮನ್ನು ಇಂದಿಗೂ ಕಾಡುತ್ತಿರುವ ಎರಡು ಕ್ರಿಕೆಟ್ ವೃತ್ತಿ ಜೀವನದ ಆಘಾತಕಾರಿ ಘಟನೆಗಳ ಬಗ್ಗೆ ವಿವರಿಸಿದ್ದಾರೆ. ಮೊದಲನೆಯದು ಐಪಿಎಲ್ 2016 ಋತುವಿನಲ್ಲಿ, ಅಲ್ಲಿ 973 ರನ್ಗಳೊಂದಿಗೆ ಅಗ್ರ ರನ್ ಸ್ಕೋರರ್ ಆಗಿದ್ದರೂ, ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್ ) ವಿರುದ್ಧದ ಫೈನಲ್ನಲ್ಲಿ ಹೃದಯ ವಿದ್ರಾವಕ ಸೋಲು ಅವರಿಗೆ ಸಾಕಷ್ಟು ಬೇಸರ ಉಂಟು ಮಾಡಿತ್ತು.
2016ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ 273 ರನ್ ಬಾರಿಸಿದ್ದರು. ಆದಾಗ್ಯೂ, ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತದ ಭರವಸೆಗಳು ಭಗ್ನಗೊಂಡಿದ್ದರು. ಇದು ಕೊಹ್ಲಿಗೆ ಆಘಾತವನ್ನುಂಟು ಮಾಡಿದ ಎರಡನೇ ಘಟನೆ.
“2016 ರಲ್ಲಿ ನನ್ನ ಜೀವನದಲ್ಲಿ ಎರಡು ಸಂದರ್ಭಗಳು ಇದ್ದವು. ಮೊದಲನೆಯದು ವಿಶ್ವ ಟಿ 20 ಮತ್ತು ನಂತರ ಐಪಿಎಲ್ ಫೈನಲ್. ವಿಶ್ವ ಟಿ 20 ಸೋಲಿನಿಂದ ಹೊರಬರಲು ನನಗೆ ಕೆಲವು ದಿನಗಳು ಬೇಕಾಯಿತು ಏಕೆಂದರೆ ನಾನು ಭಾರತಕ್ಕಾಗಿ ಈ ಸಾಧನೆ ಮಾಡಬಹುದು ಎಂದು ಭಾವಿಸಿದ್ದೆ”ಎಂದು ಕೊಹ್ಲಿ ಜಿಯೋ ಸಿನೆಮಾಗೆ ತಿಳಿಸಿದರು.
ಗವಾಸ್ಕರ್ಗೆ ವಿರಾಟ್ ಕೊಹ್ಲಿಯನ್ನು ಬೈಯುವುದೇ ಕೆಲಸ, ಇದೀಗ ಮತ್ತೊಂದು ಬಾರಿ ಟೀಕೆ
ಟಿ20 ಸ್ವರೂಪದಲ್ಲಿ (T20 Cricket) ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಹೇಳಿಕೆ ನೀಡಿದ್ದವರಿಗೆ ವಿರಾಟ್ ಕೊಹ್ಲಿ (Virat kohli) ಪ್ರತ್ಯುತ್ತರ ನೀಡಿದ್ದರು. ಅದರಲ್ಲಿ ಮುಖ್ಯವಾಗಿ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರ ಹೇಳಿಕೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಇದೀಗ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ್ರಮುಖ ಪಂದ್ಯಕ್ಕೆ ಮುಂಚಿತವಾಗಿ ಮತ್ತೊಂದು ಬಾರಿ ಕೊಹ್ಲಿಯನ್ನು ತೆಗಳಿದ್ದಾರೆ. ಕೊಹ್ಲಿಯನ್ನು ಆಧುನಿಕ ಯುಗದ ದಂತಕಥೆಯಾಗಿ ಪರಿವರ್ತಿಸುವಲ್ಲಿ ಎಂಎಸ್ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗವಾಸ್ಕರ್ ಹೇಳಿಕೆ ನೀಡಿದ್ದಾರೆ. ಇದೀಗ ನೇರ ಟೀಕೆಯ ಬದಲು ಹೋಲಿಕೆ ಮಾಡಿ ಟೀಕೆ ಮಾಡಲು ಶುರು ಮಾಡಿದ್ದಾರೆ.
ಇದನ್ನೂ ಓದಿ: IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ
ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್ ತಂಡದ ಅಂತಿಮ ಲೀಗ್ ಪಂದ್ಯದ ನಡುವೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಆ ವೇಳೆ ಮಾತನಾಡಿದ ಗವಾಸ್ಕರ್, ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ “ಸ್ಟಾರ್ಟ್-ಸ್ಟಾಪ್” (ಅಡೆ ತಡೆಯಿಂದ ತುಂಬಿದ) ವೃತ್ತಿಜೀವನ ಹೊಂದಿದ್ದರು. ಧೋನಿ ಅವರ ಮೇಲೆ ಇಟ್ಟಿರುವ ನಂಬಿಕೆಯಿಂದಾಗಿಯೇ ವೃತ್ತಿಜೀವನ ರೂಪುಗೊಂಡಿತು ಎಂದು ಹೇಳಿದರು.
“ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅದು ಸ್ಟಾಪ್-ಸ್ಟಾರ್ಟ್ ವೃತ್ತಿಜೀವನವಾಗಿತ್ತು. ಎಂಎಸ್ ಧೋನಿ ಅವರಿಗೆ ಸ್ವಲ್ಪ ಹೆಚ್ಚುವರಿ ಅವಕಾಶ ನೀಡಿದ್ದು. ಅದರಿಂದಾಗಿ ಇಂದು ನಾವು ನೋಡುವ ಕೊಹ್ಲಿ ಇದ್ದಾರೆ ಎಂದು ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.‘ಟಿ 20 ಕ್ರಿಕೆಟ್ನಲ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕಾಕಾರರಿಗೆ ತಿರುಗೇಟು ನೀಡಲು ಆರ್ಸಿಬಿಯ ಮಾಜಿ ಬ್ಯಾಟರ್ ನಿರ್ಧರಿಸಿದ ನಂತರ ಅವರಿಬ್ಬರ ನಡುವೆ ವಕೆಲವು ದಿನಗಳ ಹಿಂದೆ ವಾಕ್ಸಮರ ನಡೆಸಿದ್ದರು.