ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್(Shoaib Malik) ಅವರು ಸನಾ ಜಾವೇದ್(Sana Javed) ಅವರನ್ನು ಮದುವೆಯಾಗಿದ್ದಾರೆ. ಇದು ಮಲಿಕ್ ಪಾಲಿಗೆ ಮೂರನೇ ಮದುವೆ. ಇದೇ ವಿಚಾರದಲ್ಲಿ ಪಾಕ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ(Shahid Afridi) ಅವರು ಮಲಿಕ್ ಕಾಲೆಳೆದಿದ್ದಾರೆ.
ಮಲಿಕ್ ಅವರು ಪಾಕ್ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗುವ ಮೂಲಕ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದರು. ಮೂರನೇ ಮದುವೆಯಾದ ಮಲಿಕ್‌ಗೆ ಪಾಕ್ ತಂಡದ ಹಾಲಿ ಮತ್ತು ಮಾಜಿ ಆಟಗಾರರು ಶುಭ ಕೋರಿದ್ದರು. ಆದರೆ, ಸಹ ಆಟಗಾರ ಶಾಹೀದ್ ಅಫ್ರಿದಿ ಕೊಂಚ ಭಿನ್ನವಾಗಿ ಶುಭ ಹಾರೈಸಿದ್ದಾರೆ.
“ಶೋಯೆಬ್ ಮಲಿಕ್‌ಗೆ ಅಭಿನಂದನೆಗಳು. ಇನ್ನಾದರೂ ದೇವರು ಈ ಹೊಸ ಪತ್ನಿಯ ಜತೆ ಅವರು ಸಂಪೂರ್ಣ ಜೀವನ ಕಳೆಯುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಹೇಳುವ ಮೂಲಕ ಅಫ್ರಿದಿ ಶುಭ ಕೋರಿದ್ದಾರೆ. ಇದು ವೈರಲ್ ಆಗಿದೆ.
ಇದನ್ನೂ ಓದಿ ಸಾನಿಯಾ ಜತೆ ಇರಲು ನಂಗೆ ಟೈಮ್ ಇಲ್ಲ, ಭಾರತ, ಪಾಕ್ ಒಂದು ಮಾಡುವುದು ಹೇಗೆ ಎಂದ ಶೋಯೆಬ್ ಮಲಿಕ್!
ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮುನ್ನವೇ ಶೋಯೆಬ್ ಮಲಿಕ್‌ಗೆ ಮದುವೆಯಾಗಿತ್ತು. ಅಚ್ಚರಿ ಎಂದರೆ ಅವರ ಮೊದಲ ಪತ್ನಿಯೂ ಕೂಡ ಭಾರತದವರೇ ಆಗಿದ್ದರು. ಅವರ ಹೆಸರು ಆಯೇಶಾ ಸಿದ್ದಿಕಿ(Ayesha Siddiqui). ಇವರು ಕೂಡ ಹೈದರಾಬಾದ್ ಮೂಲದವರಾಗಿದ್ದರು. ಆಯೇಶಾಗೆ 2010ರಲ್ಲಿ ವಿಚ್ಛೇದನ ನೀಡಿದ ಅದೇ ವರ್ಷ ಸಾನಿಯಾ ಮಿರ್ಜಾ ಅವರನ್ನು ಶೋಯೆಬ್ ಮಲಿಕ್ ಮದುವೆಯಾಗಿದ್ದರು. ಈ ಜೋಡಿಯ ವಿವಾಹ ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ನಡೆದಿತ್ತು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಇದೀಗ ಮಲಿಕ್ ಸಾನಿಯಾಗೂ ಕೈ ಕೊಟ್ಟು ಮೂರನೇ ಮದುವೆಯಾಗಿದ್ದಾರೆ.
– Alhamdullilah ♥️
— Shoaib Malik 🇵🇰 (@realshoaibmalik) January 20, 2024
"And We created you in pairs" وَخَلَقْنَاكُمْ أَزْوَاجًا pic.twitter.com/nPzKYYvTcV
ಕಳೆದ ಶನಿವಾರದಂದು ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹದ ಫೋಟೊ ಹಂಚಿಕೊಂಡು ಸಾನಿಯಾ ಮಿರ್ಜಾ ಜತೆಗಿನ ದಾಂಪತ್ಯ ಕೊನೆಗೊಂಡ ವಿಚಾರ ಬಹಿರಂಗವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಾನಿಯಾ–ಶೋಯೆಬ್ ದಾಂಪತ್ಯ ಜೀವನದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಬಗ್ಗೆ ಸಾನಿಯಾ ಮಿರ್ಜಾ ಅವರ ಕುಟುಂಬ ಸ್ಪಷ್ಟನೆ ನೀಡಿ ಶೋಯೆಬ್–ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿತ್ತು.
“ನನ್ನ ಮಗಳು ಮಲಿಕ್‌ಗೆ ಖುಲಾ ನೀಡಿದ್ದಾಳೆ. ಖುಲಾ ಎಂದರೆ ಸ್ತ್ರೀ ತನ್ನ ಪತಿಯಿಂದ ಬಿಡುಗಡೆ ಕೇಳುವ ಸ್ವಾತಂತ್ರ್ಯ. ಇದು ಸಮ್ಮತಿಯ ವಿಚ್ಛೇದನವಾಗಿದ್ದು, ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ” ಎಂದು ಹೇಳಿದ್ದರು.