Site icon Vistara News

Virat kohli : ಮನ್ನಿಸಿ; ಕೊಹ್ಲಿಯ ಆಟದ ಬಗ್ಗೆ ಹೇಳಿಕೆ ನೀಡಿ ಕ್ಷಮೆ ಕೋರಿದ ಇಯಾನ್ ಬಿಷಪ್​

Ion bishop

Ian Bishop wins hearts after apologising for Kohli remark

ನವದೆಹಲಿ: ಏಪ್ರಿಲ್ 6 ರಂದು ನಡೆದ ರಾಜಸ್ಥಾನ್​ ರಾಯಲ್ಸ್​ (Rajasthan Royals) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ​​ ಪಂದ್ಯದ ವೇಳೆ ವಿರಾಟ್ ಕೊಹ್ಲಿ (Virat kohli) ಅವರ ಶತಕದ ಬಗ್ಗೆ ನೀಡಿದ ಹೇಳಿಕೆಗಾಗಿ ವೆಸ್ಟ್ ಇಂಡೀಸ್ ದಂತಕಥೆ ಮತ್ತು ಸುಪ್ರಸಿದ್ಧ ಕ್ರಿಕೆಟ್​ ವೀಕ್ಷಕವಿವರಣೆಗಾರ ಇಯಾನ್ ಬಿಷಪ್ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ತಮ್ಮ 8 ನೇ ಐಪಿಎಲ್ ಶತಕವನ್ನು ಗಳಿಸಿದ್ದರು.. ಆದಾಗ್ಯೂ, ಇದು ಸ್ಪರ್ಧೆಯ ಇತಿಹಾಸದಲ್ಲಿ ಜಂಟಿ ನಿಧಾನಗತಿಯ ಶತಕವಾಗಿದೆ. ಆರ್​ಸಿಬಿ 20 ಓವರ್​​ಗಳಲ್ಲಿ ಕೇವಲ 183 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್​ಆರ್​​ 5 ಎಸೆತಗಳು ಮತ್ತು 6 ವಿಕೆಟ್​​ಗ ಳು ಬಾಕಿ ಇರುವಾಗ ಗುರಿ ಬೆನ್ನಟ್ಟಿ ಆರ್​​ಸಿಬಿಗೆ ಋತುವಿನ 4 ನೇ ಸೋಲನ್ನು ನೀಡಿತು. ಆದಾಗ್ಯೂ, ಆರ್​​ಸಿಬಿ ಇನ್ನಿಂಗ್ಸ್ ಸಮಯದಲ್ಲಿ, ಕೊಹ್ಲಿಯ ಅರ್ಧಶತಕವನ್ನು ವಿವರಿಸಲು ಬಿಷಪ್ ಬಳಸಿದ ಪದಗಳಿಗಾಗಿ ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದರು. ಕೊಹ್ಲಿ ಕೇವಲ 39 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದು ನಿಧಾನಗತಿಯ ಆಟ ಎಂಬರ್ಥದಲ್ಲಿ ಬಿಷಪ್ ಕಾಮೆಂಟ್ ಮಾಡಿದ್ದರು. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈ ಬಗ್ಗೆ ಸ್ಟಾಟ್​ಸಿಯಾಲಾಜಿಸ್ಟ್​ ಎಂಬ ಟ್ವೀಟ್​ ಖಾತೆಯಿಂದ ಬೇಸರ ವ್ಯಕ್ತಪಡಿಸಿಲಾಗಿತ್ತು.

ವಿಷಾಧ ವ್ಯಕ್ತಪಡಿಸಿದ ಬಿಷಪ್​

ಹೆಸರಾಂತ ವೀಕ್ಷಕವಿವರಣೆಗಾರ ಅವರು ‘ಜಸ್ಟ್’ ಎಂಬ ಪದದ ಬಳಕೆಯು ಆ ಸಂದರ್ಭದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅವರ ಆಟವನ್ನು ವಿಮರ್ಶೆ ಮಾಡುವಾಗ ಹೆಚ್ಚು ನಿಖರವಾಗಿರುವುದಾಗಿ ಭರವಸೆ ನೀಡಿದರು.

“ನಾನು ಅದರ ಮೇಲೆ ಕ್ಷಮೆ ಕೋರುತ್ತೇನೆ. ಟಿ 20 ಬ್ಯಾಟಿಂಗ್ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಅದರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಾನು ಆ ಪದವನ್ನು ಸೇರಿಸಿದ್ದು ತಪ್ಪಾಗಿತ್ತು. ಆಟದ ಸ್ವರೂಪಕ್ಕೆ ಅನುಗುಣವಾಗಿ ನನ್ನ ಪದಗಳು ಮತ್ತು ಭಾಷೆಯ ಆಯ್ಕೆ ಹೆಚ್ಚು ನಿಖರವಾಗಿರಬೇಕು. ಅದು ಮುಂದುವರಿಯುತ್ತದೆ. ಕ್ಷಮೆಯಾಚಿಸುತ್ತೇನೆ” ಎಂದು ಬಿಷಪ್ ಹೇಳಿದ್ದಾರೆ.

ಇದನ್ನೂ ಓದಿ: Rohit Sharma : ಟೀಮ್ ಇಂಡಿಯಾದ ಕೊಳಕು ಆಟಗಾರರು ಯಾರೆಂದು ತಿಳಿಸಿದ ರೋಹಿತ್​ ಶರ್ಮಾ!

ತನ್ನ ತಪ್ಪನ್ನು ಒಪ್ಪಿಕೊಂಡ ಬಿಷಪ್ ಅವರ ಈ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಹೃದಯಗಳನ್ನು ಗೆದ್ದದೆ ಏಕೆಂದರೆ ಅಭಿಮಾನಿಯೇ ಇದಕ್ಕೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಈ ಶತಕವು ಕೊಹ್ಲಿಗೆ ಆರೆಂಜ್ ಕ್ಯಾಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ವಿಸ್ತರಿಸಲು ಸಹಾಯ ಮಾಡಿದರೆ, ಆರ್ಸಿಬಿ ಪ್ರಸ್ತುತ ಪಾಯಿಂಟ್ಸ್ ಟ್ಯಾಬ್ನಲ್ಲಿ 8 ನೇ ಸ್ಥಾನದಲ್ಲಿದೆ

Exit mobile version