Site icon Vistara News

ICC Apology: ಟೀಮ್​ ಇಂಡಿಯಾ ಬಳಿ ಕ್ಷಮೆ ಕೇಳಿದ ಐಸಿಸಿ

ICC Issues Apology

#image_title

ದುಬೈ: ತಾಂತ್ರಿಕ ದೋಷದಿಂದಾಗಿ ಬುಧವಾರ(ಫೆ.15) ಮಧ್ಯಾಹ್ನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿ ಇತಿಹಾಸ ನಿರ್ಮಿಸಿದ್ದ ಟೀಮ್​ ಇಂಡಿಯಾ ಬಳಿ ಐಸಿಸಿ ಇದೀಗ ಕ್ಷಮೆ(ICC Apology) ಕೇಳಿದೆ.

ಭಾರತ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಯ ವೇಳೆ ಅಗ್ರಸ್ಥಾನಕ್ಕೆ ಏರಿತು. ಆಸ್ಟ್ರೇಲಿಯಾ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಈ ಬಡ್ತಿ ಲಭಿಸಿದೆ ಮತ್ತು ಭಾರತ ಐಸಿಸಿಯ ಎಲ್ಲ 3 ಪ್ರಕಾರದ ಶ್ರೇಯಾಂಕದಲ್ಲಿ ಏಕ ಕಾಲದಲ್ಲಿ ಅಗ್ರಸ್ಥಾನಕ್ಕೇರಿದ ಅಪರೂಪದ ಸಾಧನೆ ಮಾಡಿದೆ ಎಂದು ಕ್ರಿಕೆಟ್ ಪ್ರೇಮಿಗಳೆಲ್ಲರೂ ಸಂಭ್ರಮಿಸಿದರು. ಆದರೆ ಸಂಜೆ ಸುಮಾರು 7 ಗಂಟೆಯ ವೇಳೆಗೆ ಭಾರತ ತಂಡ ಮತ್ತೆ 2ನೇ ಸ್ಥಾನಕ್ಕೆ ಕುಸಿಯಿತು ಮತ್ತು ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೇರಿತು.

ಐಸಿಸಿ ಶ್ರೇಯಾಂಕ ಪದ್ಧತಿ ನಿರ್ವಹಿಸುವ ತಂಡದ ಅವಾಂತರದಿಂದಾಗಿ ಭಾರತ ತಂಡ ನಂ. 1 ಪಟ್ಟದಲ್ಲಿ ನೆಲೆಸುವಂತಾಗಿತ್ತು. ಈ ಪ್ರಮಾದ ಅರಿವಿಗೆ ಬಂದ ಬಳಿಕ ಐಸಿಸಿ ಮತ್ತೆ ಶ್ರೇಯಾಂಕ ಪಟ್ಟಿಯನ್ನು ಪರಿಷ್ಕರಣೆ ಮಾಡಿತ್ತು. ಬಳಿಕ ಇದು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿತ್ತು.

ಐಸಿಸಿಯ ಈ ಪ್ರಮಾದಕ್ಕೆ ಬಿಸಿಸಿಐ ಬೇಸರ ವ್ಯಕ್ತಪಡಿಸಿತ್ತು. ಇದೇ ವಿಚಾರವಾಗಿ ಐಸಿಸಿ ಗುರುವಾರ(ಫೆ.16) ಟೀಮ್​ ಇಂಡಿಯಾ ಮತ್ತು ಬಿಸಿಸಿಐ ಬಳಿ ಕ್ಷಮೆ ಕೇಳಿದೆ. ತಾಂತ್ರಿಕ ದೋಷದಿಂದಾಗಿ ಈ ತಪ್ಪು ಆಗಿದೆ ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳು ನಡೆಯದಂತೆ ಎಚ್ಚರವಹಿಸುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ IND VS AUS: ದ್ವಿತೀಯ ಟೆಸ್ಟ್​ನಿಂದ ರಾಹುಲ್​, ಸೂರ್ಯಕುಮಾರ್​ ಔಟ್​; ವಾಸಿಂ ಜಾಫರ್

ಭಾರತಕ್ಕೆ ಈಗಲೂ ನಂ. 1 ಪಟ್ಟಕ್ಕೇರುವ ಅವಕಾಶವಿದೆ. ಸರಣಿಯಲ್ಲಿ 2-0, 3-1 ಅಥವಾ ಇದಕ್ಕಿಂತ ಹೆಚ್ಚಿನ ಅಂತರದಿಂದ ಗೆದ್ದರೆ ಭಾರತ ಅಗ್ರಸ್ಥಾನಕ್ಕೇರಲಿದೆ.

Exit mobile version