ದುಬೈ ಟಿ೨೦ ವಿಶ್ವ ಕಪ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು ೧೬ ತಂಡಗಳು ಸಮರಕ್ಕೆ ಸಜ್ಜಾಗಿವೆ. ಎಲ್ಲ ತಂಡಗಳೂ ಗೆಲುವಿಗೆ ಇರುವ ಅವಕಾಶಗಳನ್ನು ಎಣಿಸುತ್ತಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಪ್ರಮುಖ ತಂಡಗಳು ಹೇಗಾದರೂ ಮಾಡಿ ಕಪ್ ಗೆಲ್ಲಬೇಕು ಎಂಬುವ ಗುರಿಯೊಂದಿಗೆ ಸಿದ್ಥತೆ ನಡೆಸುತ್ತಿದೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಿಶ್ವ ಕಪ್ ವಿಜೇತರು, ರನ್ನರ್‌ಅಪ್ ಹಾಗೂ ಇನ್ನಿತರ ಬಹುಮಾನಗಳನ್ನು ಘೋಷಿಸಿದೆ. ಅವುಗಳ ಮೊತ್ತ ಇಂತಿವೆ…
ವಿಶ್ವ ಕಪ್‌ನ ಫೈನಲ್ ಪಂದ್ಯದಲ್ಲಿ ಗೆದ್ದ ಚಾಂಪಿಯನ್‌ಪಟ್ಟ ಅಲಂಕರಿಸುವ ತಂಡವು ಈ ಬಾರಿ ೧.೬ ಮಿಲಿಯನ್ ಡಾಲರ್ ಅಂದರೆ, ೧೩ ಕೋಟಿ ರೂಪಾಯಿ ಪಡೆದುಕೊಳ್ಳಲಿದೆ. ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಸ್ಥಾನ ಪಡೆಯುವ ತಂಡವೂ ದೊಡ್ಡ ಮೊತ್ತವನ್ನೇ ಪಡೆದುಕೊಳ್ಳಲಿದೆ. ಈ ತಂಡಕ್ಕೆ ೬.೫೨ ಕೋಟಿ ರೂಪಾಯಿ ಲಭಿಸಿದೆ.
ಸೆಮಿಫೈನಲ್‌ನಲ್ಲಿ ಸೋತು ತವರಿಗೆ ಮರಳುವ ಎರಡೂ ತಂಡಗಳಿಗೂ ಬಹುಮಾನ ನೀಡಲಾಗುತ್ತದೆ. ತಂಡಗಳು ತಲಾ ೩.೨೬ ಕೋಟಿ ರೂಪಾಯಿ ಬಹುಮಾನ ಪಡೆದುಕೊಳ್ಳಲಿದೆ. ಸೂಪರ್-೧೨ ಹಂತದ ಪ್ರತಿ ಗೆಲುವಿಗೆ ತಲಾ ೩೭ ಲಕ್ಷ ರೂಪಾಯಿ ಬಹುಮಾನ ನಿಗದಿ ಮಾಡಲಾಗಿದ್ದರೆ, ಈ ಹಂತದಲ್ಲಿ ನಿರ್ಗಮಿಸುವ ಎಂಟು ತಂಡಗಳು ತಲಾ ೫೬ ಲಕ್ಷ ರೂಪಾಯಿ ಪಡೆದುಕೊಳ್ಳಲಿದೆ. ಮೊದಲ ಹಂತದ ಪಂದ್ಯಗಳನ್ನು ಗೆಲ್ಲುವ ತಂಡ ತಲಾ ೩೨ ಲಕ್ಷ ಪಡೆದರೆ, ಸೋತ ತಂಡಗಳೂ ಅಷ್ಟೇ ಬಹುಮಾನದೊಂದಿಗೆ ತವರಿಗೆ ಮರಳಲಿದೆ.
ಇದನ್ನೂ ಓದಿ | T20 World Cup | ವಿಶ್ವ ಕಪ್‌ಗೆ ಮೊದಲು ಭಾರತ ತಂಡಕ್ಕೆ ಸಾಲು ಸಾಲು ಅಭ್ಯಾಸ ಪಂದ್ಯಗಳು