ಬೆಂಗಳೂರು : ಕ್ರಿಕೆಟ್ ನಿಯಮಗಳಿಗೆ ಬದಲಾವಣೆ ತರಲು ಐಸಿಸಿ (ICC Rules) ಮುಂದಾಗಿದೆ. ಇನ್ನು ಮುಂದೆ ವಿಕೆಟ್ ಹಿಂದೆ ಕ್ಯಾಚ್ ಹಿಡಿದರೂ ಬ್ಯಾಟರ್ ಔಟ್ ಆಗುವುದಿಲ್ಲ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಬೇಡಿ. ಇದು ಥರ್ಡ್ ಅಂಪೈರ್ ಪರಿಶೀಲನೆ ವೇಳೆ ಮಾತ್ರ ಅನ್ವಯವಾಗುತ್ತದೆ. ಅಂದರೆ ಸ್ಟಂಪ್ ಔಟ್ಗಾಗಿ ಏನಾದರೂ ಮನವಿ ಮಾಡಿದರೆ ಕ್ಯಾಚ್ ಆಗಿದೆಯೇ ಎಂದು ಪರಿಶಿಲನೆ ಮಾಡುವುದಿಲ್ಲ. ಈ ನಿಯಮ ಬದಲಾವಣೆ ಮಾಡಲು ಐಸಿಸಿ ಮುಂದಾಗಿದೆ ಎಂಬುದಾಗಿ ವರದಿಯಾಗಿದೆ.
ನಿಯಮ ಮಾರ್ಪಾಡು ಈಗ ಸೈಡ್-ಆನ್ ರಿಪ್ಲೇಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ ಸ್ಟಂಪ್ಗೆ ಮನವಿ ಮಾಡಿದಾಗ ಚೆಂಡು ಬ್ಯಾಟ್ಗೆ ತಗುಲಿದೆಯಾ ಎಂದು ಪರೀಕ್ಷೆ ನಡೆಸುವುದಿಲ್ಲ. ಇದನ್ನು ಮಾಡುವುದಕ್ಕೆ ಕಾರಣವಿದೆ. ಸ್ಟಂಪ್ಗೆ ಮನವಿ ಮಾಡಿದಾಗ ಕ್ಯಾಚ್ ಔಟ್ ಪರಿಶೀಲನೆಯನ್ನೂ ಮಾಡುವ ಕಾರಣ ಫೀಲ್ಡಿಂಗ್ ತಂಡವು ಅವಕಾಶವನ್ನು ದುರ್ಬಳಕೆ ಮಾಡುತ್ತಿತ್ತು. ಅದನ್ನು ತಪ್ಪಿಸಲು ಹೊಸ ನಿಯಮ ಮಾಡಲಾಗಿದೆ.
ಭಾರತವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಆಡಿದಾಗ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಹಲವಾರು ಬಾರಿ ಈ ಲೋಪದೋಷದ ಲಾಭವನ್ನು ಪಡೆದುಕೊಂಡಿದ್ದರು. ಹೊಸ ನಿಯಮದೊಂದಿಗೆ ಸ್ಟಂಪಿಂಗ್ ಮನವಿಯು ಸೈಡ್-ಆನ್ ಕ್ಯಾಮೆರಾಗಳ ಮೂಲಕ ರಿಪ್ಲೇಯನ್ನು ವೀಕ್ಷಿಸಲಾಗುತ್ತದೆ. ಒಂದು ವೇಳೆ ಕ್ಯಾಚ್ ಔಟ್ ಬಗ್ಗೆ ಅನುಮಾನ ಇದ್ದರೆ ಫೀಲ್ಡಿಂಗ್ ತಂಡ ಮತ್ತೊಂದು ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
ಹಲವು ನಿಯಮ ಬದಲಾವಣೆ
ಐಸಿಸಿ ತನ್ನ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಅವುಗಳಲ್ಲಿ ಒಂದು ಕನ್ಕಷನ್ ಬದಲಾವಣೆ. ಗಾಯಗೊಂಡ ಆಟಗಾರನನ್ನು ಬೌಲಿಂಗ್ ಮಾಡದಂತೆ ಅಮಾನತುಗೊಳಿಸಿದರೆ ಬದಲಿ ಆಟಗಾರರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: Virat kohli : ಎಲ್ಗರ್ ವಿಕೆಟ್ಗೆ ಸಂಭ್ರಮಿಸದಂತೆ ಹೇಳಿ ಮನಗೆದ್ದ ಕೊಹ್ಲಿ
ಮೂರನೇ ಅಂಪೈರ್ ಮುಂದಿನ ಪಾದದ ನೊ ಬಾಲ್ ಪರಿಶೀಲನೆ ನಡೆಸುವ ಅವಕಾಶ ಪಡೆದುಕೊಂಡಿತ್ತು. ಗಾಯದ ಸಂದರ್ಭದಲ್ಲಿ ಆನ್-ಫೀಲ್ಡ್ ಮೌಲ್ಯಮಾಪನಕ್ಕೆ ಸಮಯ ಮಿತಿ ನಿಗದಿಪಡಿಸಲಾಗಿದೆ. “ಮೈದಾನದಲ್ಲಿ ಮೌಲ್ಯಮಾಪನ ಅಥವಾ ಗಾಯದ ಚಿಕಿತ್ಸೆಗೆ ಅನುಮತಿಸಲಾದ ಸಮಯ ಮಿತಿಯನ್ನು (ಗರಿಷ್ಠ ನಾಲ್ಕು ನಿಮಿಷಗಳು) ನಿಗದಿ ಮಾಡಲಾಗಿದೆ ” ಎಂದು ನಿಯಮದಲ್ಲಿ ತಿಳಿಸಲಾಗಿದೆ.
ಕೊಹ್ಲಿಯನ್ನು ಕೆಣಕಿದ್ರೆ ಹುಷಾರ್
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ನಾಂಡ್ರೆ ಬರ್ಗರ್ ಅವರು ಪ್ರವಾಸಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ವಿರುದ್ಧ ಸ್ಲೆಡ್ಜಿಂಗ್ ತಂತ್ರಗಳನ್ನು ಬಳಸುತ್ತಿರುವುದು ಕಂಡುಬಂದ ನಂತರ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕೇಪ್ಟೌನ್ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಮತ್ತು ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ ನಂತರ ಕೊಹ್ಲಿ ಕ್ರೀಸ್ಗೆ ತೆರಳಿದರು. ಆಟದ ನಡುವೆ ಅವರು ಕೊಹ್ಲಿಯನ್ನು ದಕ್ಷಿಣ ಆಫ್ರಿಕಾದ ಬೌಲರ್ ನಾಂಡ್ರೆ ಬರ್ಗರ್ ಕೆಣಕ್ಕಿದ್ದರು. ಪ್ರತಿಬಾರಿಯೂ ತಿಕ್ಷ್ಣ ಪ್ರತಿಕ್ರಿಯೆ ಕೊಡುವ ಕೊಹ್ಲಿ ಈ ಬಾರಿ ನಗುವಿನ ಪ್ರತಿಕ್ರಿಯೆ ಕೊಟ್ಟಿದ್ದರು.
ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಮೂರನೇ ಸ್ಲಿಪ್ ಪ್ರದೇಶವನ್ನು ಖಾಲಿ ಬಿಟ್ಟಿದ್ದರು. ಹೀಗಾಗಿ ಕೊಹ್ಲಿ ಬ್ಯಾಟ್ ತಗುಲಿದ್ದ ಚೆಂಡು ಬೌಂಡರಿಗೆ ಹೋಯಿತು. ಕೊಹ್ಲಿಗೆ ಆರಂಭಿಕ ಜೀವದಾನ ಸಿಕ್ಕಿರುವುದಕ್ಕೆ ಕೆರಳಿದ ಬರ್ಗರ್ ಫುಲ್ ಲೆಂತ್ ಎಸೆತಗಳನ್ನು ಹಾಕಲು ಶುರು ಮಾಡಿದರು. ಭಾರತೀಯ ಬ್ಯಾಟ್ಸ್ಮನ್ ತಂತ್ರಗಾರಿಕೆಯನ್ನು ಬಳಸುತ್ತಲೇ ಇದ್ದರು.