Site icon Vistara News

ICC Rankings: ಶುಭಮನ್​ ಗಿಲ್​ ನಂ.1 ಬ್ಯಾಟರ್​, ಸಿರಾಜ್​ ನಂ.1 ಬೌಲರ್​

ICC rankings

ದುಬೈ: ಐಸಿಸಿ ಏಕದಿನ ಬ್ಯಾಟಿಂಗ್​(ICC Rankings) ಮತ್ತು ಬೌಲಿಂಗ್​ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾ ಆಟಗಾರರು ಪ್ರಾಬಲ್ಯ ಸಾಧಿಸಿದ್ದಾರೆ. ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಅವರು ನಂ.1 ಬ್ಯಾಟರ್​ ಮತ್ತು ಮೊಹಮ್ಮದ್​ ಸಿರಾಜ್(Mohammed Siraj)​ ಅವರು ನಂ.1 ಬೌಲರ್​ ಆಗಿ ಹೊರಹೊಮ್ಮಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಅವರು ಇದುವರೆಗೆ ನಂ.1 ಸ್ಥಾನದಲ್ಲಿದ್ದರು. ಆದರೆ ವಿಶ್ವಕಪ್​ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್​ ನಡೆಸಿದ ಪರಿಣಾಮ ರೇಟಿಂಗ್​ ಅಂಕದಲ್ಲಿ ಕುಸಿತ ಕಾಣುತ್ತಲೇ ಸಾಗಿದ್ದರು. ಹೀಗಾಗಿ ಬಾಬರ್​ ಮತ್ತು ದ್ವಿತೀಯ ಸ್ಥಾನದಲ್ಲಿದ್ದ ಗಿಲ್​ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಅಂತಿಮವಾಗಿ ಶುಭಮನ್​ ಗಿಲ್​ ಅವರು ಬಾಬರ್​ ಅವರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ Glenn Maxwell : ದ್ವಿಶತಕದ ದಾಖಲೆಯ ಶೂರ ಮ್ಯಾಕ್ಸ್​ವೆಲ್​ ವಿಶ್ವ ಕಪ್​ನಿಂದ ಔಟ್​?

ಶುಭಮನ್ ಗಿಲ್ ನೂತನ ಶ್ರೇಯಾಂಕದಲ್ಲಿ 830 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ. ಬಾಬರ್ ಅಜಂ 824 ಅಂಕಗಳೊಂದಿಗೆ ನಂ.2 ಕ್ಕೆ ಕುಸಿದಿದ್ದಾರೆ. ಗಿಲ್​ ಅವರು 41 ಇನ್ನಿಂಗ್ಸ್‌ಗಳಲ್ಲಿ ನಂ.1 ರ‍್ಯಾಂಕಿಂಗ್‌ ಪಡೆಯುವ ಮೂಲಕ ಅತಿ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. ಕಡಿಮೆ ಇನಿಂಗ್ಸ್​ನಲ್ಲಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ದಾಖಲೆ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ಹೆಸರಿನಲ್ಲಿದೆ. ಅವರು 38 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲನ್ನು ನಿರ್ಮಿಸಿದ್ದಾರೆ. ಶುಭಮನ್​ ಗಿಲ್​ ಅವರು ಪ್ರಸ್ತುತ ಈ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಎರಡು ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದ್ದರು.

ವಿರಾಟ್​ ಕೊಹ್ಲಿ ಅವರು 770 ರೇಟಿಂಗ್​ ಅಂಕದೊಂದಿದೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಮ್​ ಇಂಡೊಯಾದ ನಾಯಕ ರೋಹಿತ್​ ಶರ್ಮ 739 ರೇಟಿಂಗ್​ ಅಂಕದೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಬ್ಯಾಟಿಂಗ್​ ಶ್ರೇಯಾಂಕದ ಅಗ್ರ 10ರಲ್ಲಿ ಮೂವರು ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ.

ಸಿರಾಜ್‌ ನಂ. 1 ಬೌಲರ್‌

ಟೀಮ್‌ ಇಂಡಿಯಾದ ವಿಕೆಟ್‌ ಟೇಕರ್‌ ಬೌಲರ್‌ ಮೊಹಮ್ಮದ್‌ ಸಿರಾಜ್‌ ಅವರು ವಿಶ್ವದ ನಂ.1 ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ ಅವರು ಮೂರನೇ ಸ್ಥಾನದಲ್ಲಿದ್ದರು. ಸದ್ಯ 709 ರೇಟಿಂಗ್‌ ಅಂಕ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ಸಿನ್ನರ್‌ ಕೇಶವ್‌ ಮಹಾರಾಜ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಕುಲ್‌ದೀಪ್‌ ಯಾದವ್‌ ಕೂಡ ಪ್ರಗತಿ ಕಂಡಿದ್ದು ನಾಲ್ಕನೇ ಸ್ಥಾನಕ್ಕೇರಿದ್ದಾರೆ. ವಿಶ್ವಕಪ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದಶನ ತೋರುವ ಮೂಲಕ ಒಟ್ಟು 15 ವಿಕೆಟ್‌ ಕಿತ್ತಿರುವ ಶಮಿ ಅವರು 10ನೇ ಸ್ಥಾನಕ್ಕೇರಿದ್ದಾರೆ. ಜಸ್​ಪ್ರೀತ್​ ಬುಮ್ರಾ ಅವರು ಒಂದು ಸ್ಥಾನ ಇಳಿಕೆ ಕಂಡು 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version