ನವದೆಹಲಿ: 2024 ರ ಪುರುಷರ ಅಂಡರ್ 19 ವಿಶ್ವಕಪ್ (U-19 World Cup) ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲು ಐಸಿಸಿ ಮಂಡಳಿ ಮಂಗಳವಾರ ನಿರ್ಧರಿಸಿದೆ. ಮಂಡಳಿಯ ಆಡಳಿತದಲ್ಲಿ ಸರ್ಕಾರದ ವ್ಯಾಪಕ ಹಸ್ತಕ್ಷೇಪದಿಂದಾಗಿ ಐಸಿಸಿ (ICC) ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಪರಿಣಾಮವಾಗಿ ಮಂಡಳಿಯು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.
ಈ ಬೆಳವಣಿಗೆಯು ಕ್ರಿಕೆಟ್ ದೈನಂದಿನ ಕಾರ್ಯಾಚರಣೆ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಯಾವುದೇ ದ್ವಿಪಕ್ಷೀಯ ಮತ್ತು ದೇಶೀಯ ಸರಣಿಗಳು ಮತ್ತು ಪಂದ್ಯಾವಳಿಗಳು ಸೇರಿದಂತೆ ಎಲ್ಲಾ ಹಂತಗಳಲ್ಲಿ ಕ್ರಿಕೆಟ್ ಟೂರ್ನಿಗೆ ಅಮಾನತು ಪ್ರಕ್ರಿಯೆಯಿಂದ ಅಡ್ಡಿಯಾಗುವುದಿಲ್ಲ ಎಂದು ಐಸಿಸಿ ಮಂಡಳಿ ಒಪ್ಪಿಕೊಂಡಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಐಸಿಸಿ ವಾರ್ಷಿಕ ಧನಸಹಾಯಕ್ಕೆ ಸಂಬಂಧಿಸಿದಂತೆ, ಅಮಾನತು ತೆಗೆದುಹಾಕುವವರೆಗೆ ಈ ಟೂರ್ನಿಯನ್ನು ನಿರ್ವಹಣೆ ಮಾಡಲಿದೆ.
ಶ್ರೀಲಂಕಾ ಸರ್ಕಾರವು ಮಂಡಳಿಯ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಐಸಿಸಿ ತೃಪ್ತಿಪಡದಿದ್ದರೆ 2024 ರ ಜನವರಿಯಲ್ಲಿ ನಿಗದಿಯಾಗಿರುವ ದ್ವೈವಾರ್ಷಿಕ ಪಂದ್ಯಾವಳಿಯನ್ನು ದೇಶದಿಂದ ಸ್ಥಳಾಂತರಿಸುವ ಅಪಾಯವಿದೆ ಎಂದು ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಇತ್ತೀಚೆಗೆ ಎಚ್ಚರಿಸಿದ್ದರು. ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ದೇಶದ ಕ್ರೀಡಾ ಸಚಿವ ರೋಶನ್ ರಣಸಿಂಘೆ ನಡುವೆ ಕಳೆದ ಒಂದು ವರ್ಷದಿಂದ ಸಂಘರ್ಷ ನಡೆಯುತ್ತಿದೆ. ರಣಸಿಂಘೆ ಅವರು ಕ್ರಿಕೆಟ್ ಮಂಡಳಿಯಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳನ್ನು ಮಾಡುತ್ತಿದ್ದರೆ, ಸಿಲ್ವಾ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಹಸ್ತಕ್ಷೇಪದ ಬಗ್ಗೆ ಸಿಲ್ವಾ 2022 ರ ನವೆಂಬರ್ನಲ್ಲಿ ಐಸಿಸಿಗೆ ಸೂಚನೆ ನೀಡಿದ್ದರು. ಐಸಿಸಿ ಮಂಡಳಿಯು ತನ್ನ ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರನ್ನು ಶ್ರೀಲಂಕಾಕ್ಕೆ ಪ್ರಯಾಣಿಸುವಂತೆ ಹೇಳಿತ್ತು.
ಬೆನೋನಿ, ಪೊಚೆಫ್ಸ್ಟ್ರೂಮ್ ಸಂಭವನೀಯ ತಾಣಗಳು
ದಕ್ಷಿಣ ಆಫ್ರಿಕಾ ಇತ್ತೀಚೆಗೆ ಅಂಡರ್ -19 ವಿಶ್ವಕಪ್ ಟೂರ್ನಿಗಳಿಗೆ ಆತಿಥ್ಯ ವಹಿಸುವ ನೆಚ್ಚಿನ ದೇಶವಾಗಿದೆ. 2023ರಲ್ಲಿ ಮಹಿಳಾ ಅಂಡರ್-19 ವಿಶ್ವಕಪ್ ಹಾಗೂ 2020ರಲ್ಲಿ ಪುರುಷರ ಅಂಡರ್-19 ವಿಶ್ವಕಪ್ಗೆ ಭಾರತ ಆತಿಥ್ಯ ವಹಿಸಿತ್ತು. ಹೀಗಾಗ ಭಾರತಕ್ಕೆ ಮತ್ತೆ ಬರುವ ಸಾಧ್ಯತೆಗಳು ಇಲ್ಲ. ಹೀಗಾಗಿ 2024 ರಆವೃತ್ತಿಯ ವರ್ಷದ ಆರಂಭದಲ್ಲಿ ಮಹಿಳಾ ಟೂರ್ನಿಗೆ ಆತಿಥ್ಯ ವಹಿಸಿದ್ದ ಬೆನೋನಿ (ವಿಲ್ಲೋಮೂರ್ ಪಾರ್ಕ್ ಎ ಮತ್ತು ಬಿ) ಮತ್ತು ಪೊಚೆ್ಪ್ಸ್ಟ್ರೂಮ್ (ಅಬ್ಸಾ ಪುಕ್ ಓವಲ್ ಮತ್ತು ಸೆನ್ವೆಸ್ ಪಾರ್ಕ್) ನಲ್ಲಿ ನಡೆಯಬಹುದು ಎನ್ನಲಾಗಿದೆ. ಜನವರಿ 13 ರಿಂದ ಫೆಬ್ರವರಿ 4 ರವರೆಗೆ ಶ್ರೀಲಂಕಾದಲ್ಲಿ ನಿಗದಿಯಾಗಿದ್ದ ಪಂದ್ಯಾವಳಿಯನ್ನು ಅದೇ ವಿಂಡೋಗೆ ಹತ್ತಿರದಲ್ಲಿ ಆಡುವ ಸಾಧ್ಯತೆಯಿದೆ.
ಇದನ್ನೂ ಓದಿ : IND vs AUS T20: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸೀಸ್
ಜನವರಿ 10 ರಿಂದ ಫೆಬ್ರವರಿ 10 ರವರೆಗೆ ನಡೆಯುವ ಎಸ್ಎ 20 ಫ್ರ್ಯಾಂಚೈಸ್ ಕ್ರಿಕೆಟ್ ಜತೆಗೆ ಮುಖಾಮುಖಿಯಾಗುತ್ತದೆ. ಬೆನೋನಿ ಮತ್ತು ಪೊಚೆಫ್ಸ್ಟ್ರೂಮ್ನಲ್ಲಿ ಎಸ್ಎ 20 ಪಂದ್ಯಗಳನ್ನು ಆಯೋಜಿಸಲಾಗಿಲ್ಲ. ಹೀಗಾಗಿ ಅಲ್ಲಿಯ ತಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಹೊಸ ರೂಪದಲ್ಲಿ ಟೂರ್ನಿ
2022 ರ ಆವೃತ್ತಿಯ ಅಗ್ರ 11 ಪೂರ್ಣ ಸದಸ್ಯ ತಂಡಗಳು ನೇರವಾಗಿ ಅರ್ಹತೆ ಪಡೆದಿವೆ ಮತ್ತು ಐದು ತಂಡಗಳು – ನಮೀಬಿಯಾ, ನೇಪಾಳ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ಯುಎಸ್ಎ – ಪ್ರಾದೇಶಿಕ ಅರ್ಹತಾ ಸ್ಪರ್ಧೆಗಳ ಮೂಲಕ ತಮ್ಮ ಸ್ಥಾನಗಳನ್ನು ಗಳಿಸಿವೆ. 2024 ರ ಆವೃತ್ತಿಯನ್ನು ಹೊಸ ಸ್ವರೂಪದಲ್ಲಿ ಆಡಲಾಗುವುದು – ಈವೆಂಟ್ನ ಎರಡನೇ ಹಂತದಲ್ಲಿ ‘ಸೂಪರ್ ಸಿಕ್ಸರ್ಸ್’ ಮಾದರಿಯಲ್ಲಿ ನಡೆಯಲಿದೆ.
ಐದು ಪ್ರಶಸ್ತಿಗಳನ್ನು ಗೆದ್ದಿರುವ ಭಾರತ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡು ಬಾರಿ ಗೆದ್ದರೆ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಕಿರೀಟವನ್ನು ಎತ್ತಿ ಹಿಡಿದಿವೆ.