ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (Srilanka Cricket Team) ಮಂಡಳಿಯು ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಐಸಿಸಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯು ತನ್ನ ಸದಸ್ಯನಾಗಿ ಬಾಧ್ಯತೆಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ ಎಂದು ಹೇಳಲಾಗಿದೆ. ತನ್ನ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವಲ್ಲಿ ಮತ್ತು ದೇಶದಲ್ಲಿ (Srilanka Cricket Team) ಕ್ರಿಕೆಟ್ ಆಡಳಿತ, ನಿಯಂತ್ರಣ ಮತ್ತು ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವುದು ಐಸಿಸಿ ಕಾಳಜಿಯಾಗಿದೆ.
Sri Lanka Cricket suspended by ICC Board.
— ICC (@ICC) November 10, 2023
More here ⬇️https://t.co/3QcLinUPp0
ಲಂಕಾ ಕ್ರಿಕೆಟ್ ಮಂಡಳಿಯನ್ನು ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದ್ವೀಪ ರಾಷ್ಟ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅಮಾನತಿನ ದಂಡನೆಯನ್ನು ವಿಧಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ 9 ಪಂದ್ಯಗಳಲ್ಲಿ ಕೇವಲ 2 ಗೆಲುವುಗಳೊಂದಿಗೆ ಐಸಿಸಿ ಕ್ರಿಕೆಟ್ ವಿಶ್ವಕಪ್ನಿಂದ ಹೊರಗುಳಿದಿತ್ತು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವಲ್ಲಿಯೂ ವಿಫಲರಾಗಿದ್ದಾರೆ. ಐಸಿಸಿಟಿ 20 ವಿಶ್ವಕಪ್ 2024 ಕ್ಕೆ ಕೇವಲ 7 ತಿಂಗಳುಗಳು ಬಾಕಿ ಇರುವಾಗ ಅಮಾನತು ದಂಡನೆ ವಿಧಿಸಿರುವ ಕಾರಣ ಆ ದೇಶದ ಕ್ರಿಕೆಟ್ ತಂಡದ ಭವಿಷ್ಯ ಅಡಕತ್ತರಿಯಲ್ಲಿ ಸಿಗಲಿದೆ.
ಐಸಿಸಿ ನಿಷೇಧ ಮುಂದುವರಿದರೆ ಶ್ರೀಲಂಕಾ ಟಿ20 ವಿಶ್ವಕಪ್ನಲ್ಲಿ ಆಡುವುದಕ್ಕೆ ಸಾಧ್ಯವಿಲ್ಲ. ಕ್ರಿಕೆಟ್ ವಿಶ್ವಕಪ್ ಸೋಲಿನ ನಂತರ, ಶ್ರೀಲಂಕಾ ಸರ್ಕಾರವು ಇಡೀ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿತು. ಆದಾಗ್ಯೂ, ದ್ವೀಪ ರಾಷ್ಟ್ರದ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಅಧಿಕಾರಿಯನ್ನು ಪುನಃಸ್ಥಾಪಿಸಿತು. ಈ ಎಲ್ಲ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಐಸಿಸಿ ನಿಷೇಧ ಶಿಕ್ಷೆ ಜಾರಿ ಮಾಡಿದೆ.
ಇದನ್ನೂ ಓದಿ : Quinton de Kock : ವಿಕೆಟ್ ಕೀಪಿಂಗ್ನಲ್ಲೂ ಹೊಸ ಸಾಧನೆ ಮಾಡಿದ ಕ್ವಿಂಟನ್ ಡಿ ಕಾಕ್
“ಐಸಿಸಿ ಮಂಡಳಿಯು ಇಂದು ಸಭೆ ಸೇರಿ ಶ್ರೀಲಂಕಾ ಕ್ರಿಕೆಟ್ ತನ್ನ ಬಾಧ್ಯತೆಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ ಎಂದು ನಿರ್ಧರಿಸಿತು. ವಿಶೇಷವಾಗಿ, ತನ್ನ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅಗತ್ಯತೆ ಮತ್ತು ಶ್ರೀಲಂಕಾದಲ್ಲಿ ಕ್ರಿಕೆಟ್ ಆಡಳಿತ, ನಿಯಂತ್ರಣ ಅಥವಾ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಫಲಗೊಂಡಿತು ಎಂದು ಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ತೀರ್ಮಾನ
ಅಮಾನತಿನ ಷರತ್ತುಗಳು, ಅದರ ಅವಧಿ ಮತ್ತು ನಿರ್ದಿಷ್ಟ ನಿಯಮಗಳು ಮತ್ತಿತರ ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಐಸಿಸಿ ಮಂಡಳಿ ನಿರ್ಧರಿಸಲಿದೆ. ಈ ಕ್ರಮವು ಸದಸ್ಯ ರಾಷ್ಟ್ರಗಳ ಸ್ವಾಯತ್ತತೆಯ ಉಲ್ಲಂಘನೆ ಮತ್ತು ಕ್ರಿಕೆಟ್ ಆಡಳಿತದಲ್ಲಿ ಹಸ್ತಕ್ಷೇಪವನ್ನು ಐಸಿಸಿ ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಅಮಾನತಿನ ಪ್ರಕಾರ, ನಿಷೇಧವನ್ನು ತೆಗೆದುಹಾಕುವವರೆಗೂ ಶ್ರೀಲಂಕಾ ಯಾವುದೇ ಐಸಿಸಿ ಪಂದ್ಯಾವಳಿಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಅವರು ಐಸಿಸಿಯಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ.