Site icon Vistara News

ICC Test Rankings: ಅಗ್ರಸ್ಥಾನ ಉಳಿಸಿಕೊಂಡ ಅಶ್ವಿನ್​, ಪ್ರಗತಿ ಸಾಧಿಸಿದ ರಹಾನೆ

ICC Test Rankings

ದುಬೈ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಮುಕ್ತಾಯದ ಬೆನ್ನಲ್ಲೇ ಟೆಸ್ಟ್​ ಶ್ರೇಯಾಂಕ(ICC Test Rankings) ಪಟ್ಟಿ ಬಿಡುಗಡೆಯಾಗಿದೆ. 2 ವರ್ಷಗಳ ಬಳಿಕ ಟೆಸ್ಟ್​ ಪಂದ್ಯವನ್ನಾಡಿದ ಅಜಿಂಕ್ಯ ರಹಾನೆ(Ajinkya Rahane) ಉತ್ತಮ ಪ್ರಗತಿ ಸಾಧಿಸಿ 37ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್​ ಶ್ರೇಯಾಂಕದಲ್ಲಿ ಆರ್​.ಅಶ್ವಿನ್​(R Ashwin) ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

ಬುಧವಾರ ಬಿಡುಗಡೆಗೊಂಡ ಈ ಶ್ರೇಯಾಂಕ ಪಟ್ಟಿಯಲ್ಲಿ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಮೊದಲ ಮೂರು ಸ್ಥಾನಗಳು ಆಸ್ಟ್ರೇಲಿಯಾ ತಂಡದ ಆಟಗಾರರ ಪಾಲಾಗಿದೆ. ಮಾರ್ನಸ್​ ಲಬುಶೇನ್​(903), ವಿಶ್ವ ಟೆಸ್ಟ್ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ದ ಸ್ಟೀವನ್​ ಸ್ಮಿತ್(885)​ ಮತ್ತು ಟ್ರಾವಿಸ್​ ಹೆಡ್​(884) ರೇಟಿಂಗ್​ ಅಂಕದೊಂದಿಗೆ​ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ​

ಆಸೀಸ್​ ವಿರುದ್ಧದ ಟೆಸ್ಟ್​ ಫೈನಲ್​ನಲ್ಲಿ ಆಡಲು ಅವಕಾಶ ಸಿಗದಿದ್ದರೂ ಆರ್​. ಅಶ್ವಿನ್​ ಅವರು ಬೌಲಿಂಗ್​ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸರಿ ಸುಮಾರು ಎರಡು ವರ್ಷಗಳ ಬಳಿಕ ಟೆಸ್ಟ್​ ಕ್ರಿಕೆಟ್​ ಆಡಿದ ಅಜಿಂಕ್ಯ ರಹಾನೆ ಉತ್ತಮ ಪ್ರಗತಿ ಸಾಧಿಸಿ ಸದ್ಯ 37ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಸೀಸ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಅವರು ಮೊದಲ ಇನಿಂಗ್ಸ್​ನಲ್ಲಿ 89 ಮತ್ತು ದ್ವಿತೀಯ ಇನಿಂಗ್ಸ್​ನಲ್ಲಿ 46 ರನ್​ ಗಳಿಸಿ ಒಟ್ಟು 209 ರನ್​ ಬಾರಿಸಿದ್ದರು. ಅವರ ಈ ಸಾಧನೆಯಿಂದ ಶ್ರೇಯಾಂಕದಲ್ಲಿ ವೃದ್ಧಿ ಕಾಣುವಂತಾಗಿದೆ.

ಅಚ್ಚರಿ ಎಂದರೆ ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್​ನಿಂದ ದೂರ ಉಳಿದಿರುವ ರಿಷಭ್​ ಪಂತ್(Rishabh Pant)​ ಅವರು ಟಾಪ್​ ಟೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 758 ರೇಟಿಂಗ್​ ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಸದ್ಯ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಪಂತ್​ ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ವರ್ಷಾರಂಭದಲ್ಲಿ ಅವರು ಮತ್ತೆ ಕ್ರಿಕೆಟ್​ಗೆ ಮರಳುವ ಸಾಧ್ಯತೆ ಇದೆ.

ಇದನ್ನೂ ಓದಿ ICC Rankings: ಅಗ್ರ ಸ್ಥಾನ ಕಳೆದುಕೊಂಡ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್

ಉಳಿದಂತೆ ಭಾರತ ತಂಡದ ನಾಯಕ ರೋಹಿತ್​ ಶರ್ಮ(12), ವಿರಾಟ್​ ಕೊಹ್ಲಿ(13) ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್​ ರೌಂಡರ್​ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(Ravindra Jadeja) ಅಗ್ರ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಬೌಲಿಂಗ್​ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದ್ದಾರೆ.

Exit mobile version