ಬೆಂಗಳೂರು: ಎರಡು ವಿಶ್ವಕಪ್ ಟೂರ್ನಿ(ICC World Cup 2023) ಆಡಿರುವ ಅಫಘಾನಿಸ್ತಾನ ತಂಡ(Afghanistan World Cup Squad) ಮೂರನೇ ಬಾರಿಯ ಟೂರ್ನಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದೆ. ಕೇವಲ ಒಂದು ವಿಶ್ವಕಪ್ ಪಂದ್ಯ ಗೆದ್ದಿರುವ ಆಫ್ಘನ್ ಈ ಬಾರಿ ಹಲವು ಬದಲಾವಣೆಗಳೊಂದಿಗೆ ಬಲಿಷ್ಠ ತಂಡವನ್ನು ರೂಪಿಸಿದೆ. ಆದರೂ ತಂಡದ ಪ್ಲಸ್ ಮತ್ತು ಮೈನಸ್ ಈ ರೀತಿ ಇದೆ.
ಅಫಘಾನಿಸ್ತಾನ ತಂಡ
ಹಷ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.
ಅಗ್ರ ಶ್ರೇಯಾಂಕದ ಬ್ಯಾಟರ್: ಇಬ್ರಾಹಿಂ ಜದ್ರಾನ್
ಅಗ್ರ ಶ್ರೇಯಾಂಕದ ಬೌಲರ್: ಮುಜೀಬ್ ಉರ್ ರೆಹಮಾನ್
ಅಗ್ರ ಶ್ರೇಯಾಂಕದ ಆಲ್ ರೌಂಡರ್: ಮೊಹಮ್ಮದ್ ನಬಿ
ತಂಡದ ಪ್ಲಸ್ ಪಾಯಿಂಟ್: ಏಕದಿನ ಶ್ರೇಯಾಂಕದಲ್ಲಿ ಟಾಪ್ 5ರಲ್ಲಿ ಸ್ಥಾನ ಪಡೆದ ಮೂವರು ಆಟಗಾರರು ತಂಡದಲ್ಲಿರುವುದು ಅಫಘಾನಿಸ್ತಾನದ ಪ್ಲಸ್ ಪಾಯಿಂಟ್ ಎನ್ನಬಹುದು. ಮಾಜಿ ನಾಯಕ ಮೊಹಮ್ಮದ್ ನಬಿ ನಂ.2 ಶ್ರೇಯಾಂಕದ ಆಲ್ ರೌಂಡರ್ ಆಗಿದ್ದಾರೆ. ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬೌಲರ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದರೆ. ರಶೀದ್ ಖಾನ್ (ನಾಲ್ಕನೇ) ಸ್ಥಾನ ಪಡೆದಿದ್ದಾರೆ. ಇವರೆಲ್ಲ ತಂಡಕ್ಕೆ ಆಸರೆಯಾಗಬಲ್ಲರು.
ಇದನ್ನೂ ಓದಿ ICC World Cup 2023: ಚಾಂಪಿಯನ್ ಪಟ್ಟ ಉಳಿಸಿಕೊಂಡಿತೇ ಇಂಗ್ಲೆಂಡ್?; ಈ ಬಾರಿ ತಂಡದ ಸಾಮರ್ಥ್ಯ ಹೇಗಿದೆ?
ಮೈನಸ್ ಪಾಯಿಂಟ್: ತಂಡದ ಮೈನಸ್ ಪಾಯಿಂಟ್ ಎಂದರೆ ಆಸರೆಯಾಗಿ ನಿಂತು ಇನಿಂಗ್ಸ್ ಬೇಳೆಸುವ ಆಟಗಾರರ ಸಮಸ್ಯೆ ಎದ್ದು ಕಾಣಿಸುತ್ತಿದ್ದೆ. ಎಲ್ಲರೂ ಹೊಡಿಬಡಿ ದಾಂಡಿಗರೇ ಕೂಡಿಕೊಂಡಿದ್ದರೆ. ಬಾರಿಸಲು ಆರಂಭಿಸಿದರೇ 300 ರನ್ ಗಟಿ ದಾಟುವ ಸಾಮರ್ಥ್ಯವಿದೆ. ಆದರೆ ಒಮ್ಮೆ ಕುಸಿತ ಕಾಣಲಾರಂಭಿಸಿದರೆ 100 ಒಳಗಡೆ ಗಂಟು ಮೂಟೆ ಕಟ್ಟುತ್ತದೆ. ಇದು ತಂಡದ ವೀಕ್ನೆಸ್ ಆಗಿದೆ.
ನಬಿಗೆ ಕೊನೆಯ ವಿಶ್ವಕಪ್
38 ವರ್ಷದ ಆಲ್ರೌಂಡರ್ ಮೊಹಮ್ಮದ್ ನಬಿ ಅವರಿಗೆ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ. 2019ರಲ್ಲಿ ಇವರ ನಾಯಕತ್ವದಲ್ಲೇ ತಂಡ ಕಣಕ್ಕಿಳಿದಿತ್ತು. ಆದರೆ ಒಂದೂ ಪಂದ್ಯವನ್ನು ಗೆಲ್ಲಲಾಗದ ಸಂಕಟಕ್ಕೆ ಸಿಲುಕಿದ್ದರು. ಒಟ್ಟಾರೆ 147 ಏಕದಿನ ಪಂದ್ಯ ಆಡಿರುವ ಅವರು 3141 ರನ್ ಬಾರಿಸಿದ್ದಾರೆ. 154 ವಿಕೆಟ್ ಉರುಳಿಸಿದ್ದಾರೆ.
ನವೀನ್ ಉಲ್ ಹಕ್ ನಿವೃತ್ತಿ
16ನೇ ಆವೃತ್ತಿಯ ಐಪಿಎಲ್ ವೇಳೆ ವಿರಾಟ್ ಕೊಹ್ಲಿ(Naveen-ul-Haq and virat kohli) ಜತೆ ಕಿರಿಕ್ ಮಾಡಿದ್ದ ಅಫಘಾನಿಸ್ತಾನ ಕ್ರಿಕೆಟ್ ತಂಡದ ಯುವ ವೇಗಿ ನವೀನ್ ಉಲ್ ಹಕ್(Naveen-ul-Haq) ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗಲಿದ್ದಾರೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ಗೆ ಬಾಂಗ್ಲಾ ಸಜ್ಜು; ತಂಡದ ಪ್ಲಸ್-ಮೈನಸ್ ಏನು?
ಒಂದೇ ಗೆಲುವು
ಅಫಘಾನಿಸ್ತಾನ ತಂಡಕ್ಕೆ ಇದು ಮೂರನೇ ಏಕದಿನ ವಿಶ್ವಕಪ್ ಟೂರ್ನಿಯಾಗಿದೆ. 2015ರ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ವಿಶ್ವಕಪ್ ಪಂದ್ಯವನ್ನು ಆಡಿತ್ತು. ಎರಡು ಆವೃತ್ತಿಯನ್ನು ಆಡಿರುವ ಅಫ್ಘಾನ್ಗೆ ಒಲಿದದ್ದು ಮಾತ್ರ ಒಂದೇ ಗೆಲುವು. ಕಳೆದ ಬಾರಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಆಫ್ಘನ್ ಆಡಿದ 9 ಪಂದ್ಯಗಳಲ್ಲಿಯೂ ಸೋಲು ಕಂಡಿತ್ತು. ಈ ಬಾರಿ ಬಲಿಷ್ಠ ತಂಡವನ್ನು ರಚಿಸಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.
ಬಾಂಗ್ಲಾ ಎದರುರಾಳಿ
ಅಫಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಇತ್ತಂಡಗಳ ಈ ಮುಖಾಮುಖಿ ಅಕ್ಟೋಬರ್ 7ರಂದು ಧರ್ಮಶಾಲದಲ್ಲಿ ನಡೆಯಲಿದೆ. ಆತಿಥೇಯ ಭಾರತ ವಿರುದ್ದ ಅಕ್ಟೋಬರ್ 11ರಂದು ದಿಲ್ಲಿಯಲ್ಲಿ ಆಡಲಿದೆ.
ಹೆಚ್ಚಿನ ವಿಶ್ವಕಪ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ