Site icon Vistara News

ICC World Cup 2023: ವಿಶ್ವಕಪ್​ಗೆ ಬಾಂಗ್ಲಾ ಸಜ್ಜು; ತಂಡದ ಪ್ಲಸ್​-ಮೈನಸ್​ ಏನು?

world-cup-2023-bangladesh-squad

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್​(ICC World Cup 2023) ಟೂರ್ನಿ ಆರಂಭಗೊಳ್ಳಲು ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ. ಈ ಬಾರಿಯ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುವ ಇರಾದೆಯೊಂದಿಗೆ ಆಡಲಿಳಿಯಲಿದೆ. ತಂಡದ ಪ್ಲಸ್ ಮತ್ತು ಮೈನಸ್​ ಪಾಯಿಂಟ್​ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಂಗ್ಲಾದೇಶ ತಂಡ

ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ಕುಮರ್ ದಾಸ್, ತಂಝೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.

ಅಗ್ರ ಶ್ರೇಯಾಂಕದ ಬ್ಯಾಟರ್: ಮುಶ್ಫಿಕರ್ ರಹೀಮ್

ಅಗ್ರ ಶ್ರೇಯಾಂಕದ ಬೌಲರ್: ಶಕೀಬ್ ಅಲ್ ಹಸನ್

ಅಗ್ರ ಶ್ರೇಯಾಂಕದ ಆಲ್ ರೌಂಡರ್: ಶಕೀಬ್ ಅಲ್ ಹಸನ್

ತಂಡದ ಪ್ಲಸ್​ ಪಾಯಿಂಟ್​: ವಿಶ್ವಕಪ್​ನ ಅತ್ಯಂತ ಯಶಸ್ವಿ ಆಲ್​ರೌಂಡರ್​ಗಳಲ್ಲಿ ಶಕೀಬ್​ ಅಗ್ರಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಅವರು ತಂಡಕ್ಕೆ ನೆರವಾಗಬಲ್ಲರು. ಮುಶ್ಫಿಕರ್ ರಹೀಮ್ ಕೂಡ ಬ್ಯಾಟಿಂಗ್​ ಸ್ಟಾರ್​ ಆಗಿ ಕಾಣಿಸಿಕೊಂಡಿದ್ದಾರೆ.

ತಂಡದ ಮೈನಸ್​ ಪಾಯಿಂಟ್: ಸ್ಟಾರ್‌ ಅನುಭವಿ ಎಡಗೈ ಬ್ಯಾಟರ್‌ ತಮಿಮ್ ಇಕ್ಬಾಲ್‌ ಫಿಟ್ನೆಸ್‌ ಸಮಸ್ಯೆಯಿಂದಾಗಿ ವಿಶ್ವಕಪ್ನಿಂದ ಹೊರಗುಳಿದದ್ದು ತಂಡಕ್ಕೆ ಹಿನ್ನಡೆಯಾಗಿದೆ. ಏಷ್ಯಾ ಕಪ್ 2023 ಟೂರ್ನಿಯಿಂದಲೂ ಅವರು ಹೊರಗುಳಿದಿದ್ದರು. ಇಲ್ಲಿಯೂ ತಂಡಕ್ಕೆ ಹಿನ್ನಡೆಯಾಗಿತ್ತು.

ಶಕೀಬ್​ಗೆ ಕೊನೆಯ ವಿಶ್ವಕಪ್​

ಇದು ಶಕೀಬ್​ಗೆ 5ನೇ ವಿಶ್ವಕಪ್​. ಶಕೀಬ್ ಈ ಹಿಂದೆ 2007, 2011, 2015 ಮತ್ತು 2019 ರ ಆವೃತ್ತಿಗಳಲ್ಲಿ ಬಾಂಗ್ಲಾ ಪರ ಆಡಿದ್ದರು. ಈ ಬಾರಿಯ ವಿಶ್ವಕಪ್​ ಅವರಿಗೆ ಕೊನೆಯ ಟೂರ್ನಿಯಾಗುವ ಸಾಧ್ಯತೆ ಅಧಿಕವಾಗಿದೆ. ಸದ್ಯ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಆಲ್‌ರೌಂಡರ್‌ಗಳ ವಿಭಾಗದಲ್ಲಿ ನಂ.1 ಶ್ರೇಯಾಂಕವನ್ನು ಹೊಂದಿದ್ದಾರೆ.

ಕಳೆದ ಬಾರಿಯ ವಿಶ್ವಕಪ್​ ಸಾಧನೆ

ಲಂಡನ್​ನಲ್ಲಿ ನಡೆದಿದ್ದ ಕಳೆದ ಬಾರಿ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ 9 ಪಂದ್ಯಗಳನ್ನು ಆಡಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಅಂಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿತ್ತು. ಬಾಂಗ್ಲಾಶದೇಶ ತಂಡ ಮೊದಲ ಬಾರಿಗೆ ವಿಶ್ವಕಪ್​ ಆಡಿದ್ದು 1999ರಲ್ಲಿ. ಆದರೆ ಇದುವರೆಗೂ ಚಾಂಪಿಯನ್​ ಪಟ್ಟ ಅಲಂಕರಿಸಿಲ್ಲ.

ಇದನ್ನೂ ಓದಿ ICC World Cup 2023: 9 ಭಾಷೆಗಳಲ್ಲಿ ನೇರ ಪ್ರಸಾರಗೊಳ್ಳಲಿದೆ ವಿಶ್ವಕಪ್​ ಟೂರ್ನಿ

ಅಫಘಾನಿಸ್ತಾನ ಮೊದಲ ಎದುರಾಳಿ

ಈ ಬಾರಿಯ ಕೂಟದಲ್ಲಿ ಬಾಂಗ್ಲಾದೇಶ ತಂಡ ತನ್ನ ಅಭಿಯಾನವನ್ನು ಅಫಘಾನಿಸ್ತಾನ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್​ 7 ರಂದು ಧರ್ಮಶಾಲದಲ್ಲಿ ನಡೆಯಲಿದೆ. ಭಾರತ ವಿರುದ್ಧ ಅಕ್ಟೋಬರ್​ 19ರಂದು ಪುಣೆಯಲ್ಲಿ ಪಂದ್ಯ ಆಡಲಿದೆ.

ಟೂರ್ನಿ ಆರಂಭ

ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ಆರಂಭಗೊಂಡು ನವೆಂಬರ್​ 19ರ ತನಕ ನಡೆಯಲಿದೆ. ರೌಂಡ್​ ರಾಬೀನ್​ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಗಿತ್ತದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ಹೆಚ್ಚಿನ ವಿಶ್ವಕಪ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Exit mobile version