Site icon Vistara News

ICC World Cup 2023: ಏಕದಿನ ವಿಶ್ವ ಕಪ್​ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ; ಬೆಂಗಳೂರಿನಲ್ಲೂ ಇದೆ ಪ್ರಮುಖ ಪಂದ್ಯ

icc world cup trophy

ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್​ (ICC World Cup 2023) ಟೂರ್ನಿಯ ವೇಳಾಪಟ್ಟಿಯನ್ನು (icc world cup 2023 schedule) ಬಿಸಿಸಿಐ ಮತ್ತು ಐಸಿಸಿ ಮಂಗಳವಾರ ಮುಂಬೈಯಲ್ಲಿ ಪ್ರಕಟಿಸಿದೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್​ 5ರಿಂದ ನವೆಂಬರ್​ 19ರ ತನಕ ಈ ಟೂರ್ನಿ ಸಾಗಲಿದೆ. ಒಟ್ಟು 10 ತಂಡಗಳು ಪೈಪೋಟಿ ನಡೆಸಲಿವೆ. ಕೂಟದ ಉದ್ಘಾಟನಾ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡೂ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ(ahmedabad stadium) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂ ಒಟ್ಟು 5 ಪಂದ್ಯಗಳ ಆತಿಥ್ಯ ವಹಿಸಿಕೊಂಡಿದೆ.

ದಿನಾಂಕಪಂದ್ಯತಾಣ
ಅಕ್ಟೋಬರ್​ 5 ಗುರುವಾರಇಂಗ್ಲೆಂಡ್​vsನ್ಯೂಜಿಲ್ಯಾಂಡ್​ಅಹಮದಾಬಾದ್​
ಅಕ್ಟೋಬರ್​ 6 ಶುಕ್ರವಾರಪಾಕಿಸ್ತಾನvsಕ್ವಾಲಿಫೈಯರ್​-1ಹೈದರಾಬಾದ್​
ಅಕ್ಟೋಬರ್​ 7 ಶನಿವಾರಬಾಂಗ್ಲದೇಶ-ಅಫಘಾನಿಸ್ತಾನಧರ್ಮಶಾಲಾ
ಅಕ್ಟೋಬರ್​ 7 ಶನಿವಾರದಕ್ಷಿಣ ಆಫ್ರಿಕಾvsಕ್ವಾಲಿಫೈಯರ್​-2ದೆಹಲಿ
ಅಕ್ಟೋಬರ್​ 8 ಭಾನುವಾರಭಾರತvsಆಸ್ಟ್ರೇಲಿಯಾಚೆನ್ನೈ
ಅಕ್ಟೋಬರ್​ 9 ಸೋಮವಾರನ್ಯೂಜಿಲ್ಯಾಂಡ್​vsಕ್ವಾಲಿಫೈಯರ್​-1ಹೈದರಾಬಾದ್​
ಅಕ್ಟೋಬರ್​ 10 ಮಂಗಳವಾರಇಂಗ್ಲೆಂಡ್​vsಬಾಂಗ್ಲಾದೇಶಧರ್ಮಶಾಲಾ
ಅಕ್ಟೋಬರ್​ 11 ಬುಧವಾರಭಾರತvsಅಫಘಾನಿಸ್ತಾನದೆಹಲಿ
ಅಕ್ಟೋಬರ್​ 12 ಗುರುವಾರಪಾಕಿಸ್ತಾನvsಕ್ವಾಲಿಫೈಯರ್​-2ಹೈದರಾಬಾದ್
ಅಕ್ಟೋಬರ್​ 13 ಶುಕ್ರವಾರದಕ್ಷಿಣ ಆಫ್ರಿಕಾvsಆಸ್ಟ್ರೇಲಿಯಾಲಕ್ನೋ
ಅಕ್ಟೋಬರ್​ 14 ಶನಿವಾರಇಂಗ್ಲೆಂಡ್​vsಅಫಘಾನಿಸ್ತಾನದೆಹಲಿ
ಅಕ್ಟೋಬರ್​ 14 ಶನಿವಾರನ್ಯೂಜಿಲ್ಯಾಂಡ್​​vsಬಾಂಗ್ಲಾದೇಶಚೆನ್ನೈ
ಅಕ್ಟೋಬರ್​ 15 ಭಾನುವಾರಭಾರತvsಪಾಕಿಸ್ತಾನಅಹಮದಾಬಾದ್​
ಅಕ್ಟೋಬರ್​ 16 ಸೋಮವಾರಆಸ್ಟ್ರೇಲಿಯಾvsಕ್ವಾಲಿಫೈಯರ್​-2ಲಕ್ನೋ
ಅಕ್ಟೋಬರ್​ 17 ಮಂಗಳವಾರದಕ್ಷಿಣ ಆಫ್ರಿಕಾvsಕ್ವಾಲಿಫೈಯರ್​-1ಧರ್ಮಶಾಲಾ
ಅಕ್ಟೋಬರ್​ 18 ಬುಧವಾರನ್ಯೂಜಿಲ್ಯಾಂಡ್​​vsಅಫಘಾನಿಸ್ತಾನಚೆನ್ನೈ
ಅಕ್ಟೋಬರ್​ 19 ಗುರುವಾರಭಾರತvsಬಾಂಗ್ಲಾದೇಶಪುಣೆ
ಅಕ್ಟೋಬರ್​ 20 ಶುಕ್ರವಾರಆಸ್ಟ್ರೇಲಿಯಾvsಪಾಕಿಸ್ತಾನಬೆಂಗಳೂರು
ಅಕ್ಟೋಬರ್​ 21 ಶನಿವಾರಇಂಗ್ಲೆಂಡ್​vsದಕ್ಷಿಣ ಆಫ್ರಿಕಾಮುಂಬಯಿ
ಅಕ್ಟೋಬರ್​ 21 ಶನಿವಾರಕ್ವಾಲಿಫೈಯರ್​-1vsಕ್ವಾಲಿಫೈಯರ್​-2ಲಕ್ನೋ
ಅಕ್ಟೋಬರ್​ 22 ಭಾನುವಾರಭಾರತvsನ್ಯೂಜಿಲ್ಯಾಂಡ್​ಧರ್ಮಶಾಲ
ಅಕ್ಟೋಬರ್​ 23 ಸೋಮವಾರಪಾಕಿಸ್ತಾನvsಅಫಘಾನಿಸ್ತಾನಚೆನ್ನೈ
ಅಕ್ಟೋಬರ್​ 24 ಮಂಗಳವಾರದಕ್ಷಿಣ ಆಫ್ರಿಕಾvsಬಾಂಗ್ಲಾದೇಶಮುಂಬಯಿ
ಅಕ್ಟೋಬರ್​ 25 ಬುಧವಾರಆಸ್ಟ್ರೇಲಿಯಾvsಕ್ವಾಲಿಫೈಯರ್​-1ದೆಹಲಿ
ಅಕ್ಟೋಬರ್​ 26 ಗುರುವಾರಇಂಗ್ಲೆಂಡ್​vsಕ್ವಾಲಿಫೈಯರ್​-2ಬೆಂಗಳೂರು
ಅಕ್ಟೋಬರ್​ 27 ಶುಕ್ರವಾರಪಾಕಿಸ್ತಾನvsದಕ್ಷಿಣ ಆಫ್ರಿಕಾಚೆನ್ನೈ
ಅಕ್ಟೋಬರ್​ 28 ಶನಿವಾರಕ್ವಾಲಿಫೈಯರ್​-1vsಬಾಂಗ್ಲಾದೇಶಕೋಲ್ಕತ್ತಾ
ಅಕ್ಟೋಬರ್​ 28 ಶನಿವಾರಆಸ್ಟ್ರೇಲಿಯಾvsನ್ಯೂಜಿಲ್ಯಾಂಡ್​ಧರ್ಮಶಾಲ
ಅಕ್ಟೋಬರ್​ 29 ಭಾನುವಾರಭಾರತvsಇಂಗ್ಲೆಂಡ್​ಲಕ್ನೋ
ಅಕ್ಟೋಬರ್​ 30 ಸೋಮವಾರಅಫಘಾನಿಸ್ತಾನvsಕ್ವಾಲಿಫೈಯರ್​-2ಪುಣೆ
ಅಕ್ಟೋಬರ್​ 31 ಮಂಗಳವಾರಪಾಕಿಸ್ತಾನvsಬಾಂಗ್ಲಾದೇಶಕೋಲ್ಕತ್ತಾ
ನವೆಂಬರ್​ 1 ಬುಧವಾರನ್ಯೂಜಿಲ್ಯಾಂಡ್​vsದಕ್ಷಿಣ ಆಫ್ರಿಕಾಪುಣೆ
ನವೆಂಬರ್​ 2 ಗುರುವಾರಭಾರತvsಕ್ವಾಲಿಫೈಯರ್​-2ಮುಂಬಯಿ
ನವೆಂಬರ್​ 3 ಶುಕ್ರವಾರಕ್ವಾಲಿಫೈಯರ್​-1vs ಅಫಘಾನಿಸ್ತಾನಲಕ್ನೋ
ನವೆಂಬರ್​ 4 ಶನಿವಾರಇಂಗ್ಲೆಂಡ್vsಆಸ್ಟ್ರೇಲಿಯಾಅಹಮದಾಬಾದ್​
ನವೆಂಬರ್​ 4 ಶನಿವಾರನ್ಯೂಜಿಲ್ಯಾಂಡ್​vsಪಾಕಿಸ್ತಾನಬೆಂಗಳೂರು
ನವೆಂಬರ್​ 5 ಭಾನುವಾರಭಾರತvsದಕ್ಷಿಣ ಆಫ್ರಿಕಾಕೋಲ್ಕತ್ತಾ
ನವೆಂಬರ್​ 6 ಸೋಮವಾರಬಾಂಗ್ಲಾದೇಶvsಕ್ವಾಲಿಫೈಯರ್​-2ದೆಹಲಿ
ನವೆಂಬರ್​ 7 ಮಂಗಳವಾರಆಸ್ಟ್ರೇಲಿಯಾvsಅಫಘಾನಿಸ್ತಾನಮುಂಬಯಿ
ನವೆಂಬರ್​ 8 ಬುಧವಾರಇಂಗ್ಲೆಂಡ್​vsಕ್ವಾಲಿಫೈಯರ್​-1ಪುಣೆ
ನವೆಂಬರ್​ 9 ಗುರುವಾರನ್ಯೂಜಿಲ್ಯಾಂಡ್​vsಕ್ವಾಲಿಫೈಯರ್​-2ಬೆಂಗಳೂರು
ನವೆಂಬರ್​ 10 ಶುಕ್ರವಾರದಕ್ಷಿಣ ಆಫ್ರಿಕಾvsಅಫಘಾನಿಸ್ತಾನಅಹಮದಾಬಾದ್​
ನವೆಂಬರ್​ 11 ಶನಿವಾರಭಾರತvsಕ್ವಾಲಿಫೈಯರ್​-1ಬೆಂಗಳೂರು
ನವೆಂಬರ್​ 12 ಭಾನುವಾರಇಂಗ್ಲೆಂಡ್​vsಪಾಕಿಸ್ತಾನಕೋಲ್ಕತ್ತಾ
ನವೆಂಬರ್​ 12 ಭಾನುವಾರಆಸ್ಟ್ರೇಲಿಯಾvsಬಾಂಗ್ಲಾದೇಶಪುಣೆ
ನವೆಂಬರ್​ 15 ಬುಧವಾರಸೆಮಿಫೈನಲ್​-1ಮುಂಬಯಿ
ನವೆಂಬರ್​ 16 ಗುರುವಾರಸೆಮಿಫೈನಲ್​-2ಕೋಲ್ಕತ್ತಾ
ನವೆಂಬರ್​ 19 ಭಾನುವಾರಫೈನಲ್​ಅಹಮದಾವಾದ್​

ಇದನ್ನೂ ಓದಿ ICC World Cup 2023: ಏಕದಿನ ವಿಶ್ವ ಕಪ್​ ವೇಳಾಪಟ್ಟಿ ಪ್ರಕಟಕ್ಕೆ ದಿನಾಂಕ ನಿಗದಿ!

ಭಾರತ ಹಾಗೂ ಪಾಕಿಸ್ತಾನ(IND vs PAK) ನಡುವಣ ಪಂದ್ಯವು ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲೇ ನಡೆಯಲಿದೆ. ಈ ಹಿಂದೆ ಪಾಕ್​ ಇಲ್ಲಿ ಪಂದ್ಯ ಆಡುವುದಿಲ್ಲ ಎಂದು ಪಟ್ಟು ಹಿಡಿತ್ತು. ಆದರೆ ಈಗ ಪಂದ್ಯ ಇದೇ ಮೈದಾನದಲ್ಲಿ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ಮುಖಾಮುಖಿಯಾಗಲಿದೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ.

Exit mobile version