ಬೆಂಗಳೂರು: ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ತಂಡ ಎಲ್ಲ (12) ಆವೃತ್ತಿಯ ವಿಶ್ವಕಪ್ ಟೂರ್ನಿಯನ್ನು(ICC World Cup 2023) ಆಡಿದ ಖ್ಯಾತಿ ಹೊಂದಿದೆ. ಈ ಪಯಣದಲ್ಲಿ ಇಂಗ್ಲೆಂಡ್ ಒಂದು ಬಾರಿ ಚಾಂಪಿಯನ್ ಮೂರು ಬಾರಿ ರನ್ನರ್ ಅಪ್ ಸ್ಥಾನ ಪಡೆದಿದೆ. ಹಾಲಿ ಚಾಂಪಿಯನ್ ಆಗಿರುವ ಆಂಗ್ಲರ ಪಡೆ ಈ ಬಾರಿಯೂ ಕಪ್ ಉಳಿಸಿಕೊಂಡಿತೇ ಎನ್ನುವುದು ಈ ಬಾರಿಯ ಕೌತುಕ.
ಇಂಗ್ಲೆಂಡ್ ತಂಡ
ಜಾಸ್ ಬಟ್ಲರ್ (ನಾಯಕ), ಜಾನಿ ಬೆರ್ಸ್ಟೋ, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್ ಸ್ಟೋನ್, ಡೇವಿಡ್ ಮಾಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.
ಅಗ್ರ ಶ್ರೇಯಾಂಕದ ಬ್ಯಾಟರ್: ಡೇವಿಡ್ ಮಲಾನ್
ಅಗ್ರ ಶ್ರೇಯಾಂಕದ ಬೌಲರ್: ಕ್ರಿಸ್ ವೋಕ್ಸ್
ಅಗ್ರ ಶ್ರೇಯಾಂಕದ ಆಲ್ ರೌಂಡರ್: ಕ್ರಿಸ್ ವೋಕ್ಸ್
ತಂಡದ ಪ್ಲಸ್ ಪಾಯಿಂಟ್: ಯಾವಾಗಲೂ ಸ್ಥಿರವಾಗಿ ಬ್ಯಾಟ್ ಬೀಸುವ ಡೇವಿಡ್ ಮಲಾನ್ ಏಕದಿನದ ಅತ್ಯುನ್ನತ ಶ್ರೇಯಾಂಕದ ಬ್ಯಾಟರ್ ಆಗಿದ್ದಾರೆ. ನಾಯಕ ಜಾಸ್ ಬಟ್ಲರ್, ಬೇರ್ಸ್ಟೋ, ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.
ಇದನ್ನೂ ಓದಿ World Cup History: ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕರಿವರು
ಕಳೆದ ಬಾರಿಯ ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ ಅವರ ಆಗಮನವಂತೂ ತಂಡಕ್ಕೆ ಹೆಚ್ಚು ಬಲ ನೀಡಿದೆ. ಯಾವುದೇ ಕ್ಷಣದಲ್ಲಾದರೂ ಸಿಡಿದು ನಿಂತು ಪಂದ್ಯದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಅವರಿಗಿದೆ. ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಕೂಡ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಈ ಬಾರಿಯೂ ಕಪ್ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದ್ದಾರೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ಗೆ ಬಾಂಗ್ಲಾ ಸಜ್ಜು; ತಂಡದ ಪ್ಲಸ್-ಮೈನಸ್ ಏನು?
ಮೈನಸ್ ಪಾಯಿಂಟ್: ಇಂಗ್ಲೆಂಡ್ಗೆ ಇರುವ ಮೈನಸ್ ಪಾಯಿಂಟ್ ಎಂದರೆ ಅದು ಜೋಫ್ರಾ ಆರ್ಚರ್ ಅವರ ಅಲಭ್ಯತೆ. ಕಳೆದ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದ ಸೂಪರ್ ಓವರ್ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಹೆಚ್ಚಿನ ವಿಶ್ವಕಪ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಾಲ್ಕು ಆಟಗಾರರಿಗೆ ಕೊನೆಯ ವಿಶ್ವಕಪ್ ಸಾಧ್ಯತೆ
ನಿವೃತ್ತಿ ವಾಪಸ್ ಪಡೆದು ಬಂದ ಬೆನ್ ಸ್ಟೋಕ್ಸ್, ನಾಯಕ ಜಾಸ್ ಬಟ್ಲರ್, ಜೋ ರೂಟ್ ಮತ್ತು ಮೊಯಿನ್ ಅಲಿ ಅವರಿಗೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇದೆ. ಇವರೆಲ್ಲ ಕಳೆದ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರು
ಬಟ್ಲರ್ಗೆ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಒತ್ತಡ
ನಾಯಕ ಜಾಸ್ ಬಟ್ಲರ್ಗೆ ಈ ಬಾರಿಯೂ ಕಪ್ ಉಳಿಸಿಕೊಳ್ಳುವ ಒತ್ತಡವಿದೆ. ಕಳೆದ ಬಾರಿ ಮಾರ್ಗನ್ ಸಾರಥ್ಯದಲ್ಲಿ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಬಟ್ಲರ್ ನಾಯಕತ್ವದಲ್ಲಿ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಹೀಗಾಗಿ ಅವರ ನಾಯಕತ್ವದ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.