Site icon Vistara News

ICC World Cup 2023: ವಿಶ್ವಕಪ್​ ಟೂರ್ನಿಗೆ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

google doodle

ಬೆಂಗಳೂರು: 10 ಬಲಿಷ್ಠ ತಂಡಗಳು ಭಾಗವಹಿಸಲಿರುವ ಏಕದಿನ ವಿಶ್ವಕಪ್‌(ICC World Cup 2023) ಮಹಾ ಸಮರ ಇಂದಿನಿಂದ ಆರಂಭಗೊಳ್ಳಲಿದೆ. ನವೆಂಬರ್​ 19ಕ್ಕೆ ಫೈನಲ್​ ಪಂದ್ಯ ನಡೆಯಲಿದೆ. ಇದು ಮೊದಲ ಬಾರಿ ಪೂರ್ಣ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್‌ ಟೂರ್ನಿ. ಇಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ಆಡಲಿವೆ. ಈ ಟೂರ್ನಿಯ ಯಶಸ್ಸಿಗಾಗಿ ಗೂಗಲ್ ತನ್ನ ಅನಿಮೇಟೆಡ್ ಡೂಡಲ್‌ನಲ್ಲಿ(google doodle) ವಿಶೇಷವಾಗಿ ಶುಭಹಾರೈಸಿದೆ.

ವಿಶೇಷತೆ ಏನು?

ವಿಶ್ವಕಪ್‌ ಅನಿಮೇಟೆಡ್ ಡೂಡಲ್‌ನಲ್ಲಿ ಎರಡು ಬಾತುಕೋಳಿಗಳು ವಿಕೆಟ್‌ಗಳ ನಡುವೆ ಓಡುತ್ತಿರುವುದನ್ನು ತೋರಿಸುತ್ತದೆ. ಬಳಕೆದಾರರು ಗೂಗಲ್‌ ಮುಖಪುಟದಲ್ಲಿ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಇಡೀ ಪಂದ್ಯಾವಳಿಯ ವೇಳಾಪಟ್ಟಿಯನ್ನು ಇದು ತೋರಿಸುತ್ತದೆ.

ಕಿವೀಸ್​ಗೆ ಸೇಡಿನ ಪಂದ್ಯ

ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್​ ಅಪ್​ ನ್ಯೂಜಿಲ್ಯಾಂಡ್​ ತಂಡ ಇಂದಿನ ಪಂದ್ಯದಲ್ಲಿ ಸೆಣಸಾಡಲಿವೆ. 2019ರ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ ವಿರೋಚಿತ ಸೋಲನ್ನು ಅನುಭವಿಸಿದ್ದ ನ್ಯೂಜಿಲ್ಯಾಂಡ್​ ತಂಡ ಗೆಲುವಿನ ಮೂಲಕ ಹಳೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇತ್ತ ಇಂಗ್ಲೆಂಡ್ ತಂಡವೂ ಬಲಿಷ್ಠವಾಗಿದ್ದ ಮತ್ತೊಂದು ಕಪ್​ ಗೆಲ್ಲುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಸಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ಉದ್ದೇಶ ಹೊಂದಿದೆ.

ನಾಯಕ ಕೇನ್ ವಿಲಿಯಮ್ಸನ್ ಕೂಡ ಸಂಪೂರ್ಣ ಫಿಟ್ನೆಸ್ ತೋರಿಸುತ್ತಿರುವುದರಿಂದ, ನ್ಯೂಜಿಲೆಂಡ್ ಪ್ರಬಲವಾಗಿ ಕಾಣುತ್ತಿದೆ. ಟಿಮ್ ಸೌಥಿ ಕೂಡ ಆಡುವ ಸಾಧ್ಯತೆಗಳಿವೆ. ಇದು ಅಂತಿಮವಾಗಿ ತನ್ನ ಚೊಚ್ಚಲ ವಿಶ್ವಕಪ್ ಗೆಲ್ಲುವ ಗುರಿಯನ್ನು ಹೊಂದಿರುವ ತಂಡಕ್ಕೆ ಉತ್ತಮವಾಗಿದೆ.

ಇದನ್ನೂ ಓದಿ ICC World Cup 2023 : ನಾಯಕರ ದಿನದಂದು ತೂಕಡಿಸಿದ ದಕ್ಷಿಣ ಆಫ್ರಿಕಾ ನಾಯಕ ಫುಲ್ ಟ್ರೋಲ್​!

ಪಿಚ್​ ರಿಪೋರ್ಟ್​

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್​ ಸಂಪೂರ್ಣ ಬ್ಯಾಟಿಂಗ್​ ಸ್ನೇಹಿಯಾಗಿದೆ. ಹೀಗಾಗಿ ದೊಡ್ಡ ಮತ್ತವನ್ನು ಇಲ್ಲಿ ನಿರೀಕ್ಷೆ ಮಾಡಬಹುದು. ಉಭಯ ತಂಡಗಳಲ್ಲಿಯೂ ಸಮರ್ಥ ಆಟಗಾರರು ನೆಚ್ಚಿಕೊಂಡಿದ್ದಾರೆ. ಸ್ಲೋ ವೇಗಿಗಳಿಗೆ ಈ ಪಿಚ್​ ಹೆಚ್ಚಿನ ನೆರವು ನೀಡುತ್ತದೆ. ಸ್ಪಿನ್​ ಬೌಲಿಂಗ್​ ಅಷ್ಟರ ಮಟ್ಟಿಗೆ ಇಲ್ಲಿ ಯಶಸ್ಸು ಕಾಣುವುದು ಕಷ್ಟ.

ವಿಶ್ವಕಪ್​ ಮುಖಾಮುಖಿ

12 ಆವೃತ್ತಿಯ ವಿಶ್ವಕಪ್​ ಇತಿಹಾಸದಲ್ಲಿ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ 10 ಬಾರಿ ಮುಖಾಮುಖಿಯಾಗಿವೆ. ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಕಿವೀಸ್​ ಮತ್ತು ಇಂಗ್ಲೆಂಡ್​ ತಲಾ ಎರಡು ಪಂದ್ಯಗಳನ್ನು ಆಡಿದ್ದರು. ಇಂಗ್ಲೆಂಡ್​ 1 ಪಂದ್ಯ ಗೆದ್ದರೆ, ನ್ಯೂಜಿಲ್ಯಾಂಡ್​ 2 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆ ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು 95 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್​  45, ಕಿವೀಸ್​ 44 ಗೆಲುವು ಕಂಡಿದೆ. 4 ಪಂದ್ಯಗಳು ಫಲಿತಾಂಶ ಕಂಡಿಲ್ಲ.

ಹವಾಮಾನ ವರದಿ

ವಿಶ್ವಕಪ್​ ಅಭ್ಯಾಸ ಪಂದ್ಯಕ್ಕೆ ಮಳೆಯ ಭೀತಿ ಕಾಡಿತ್ತು. ಭಾರತದ ಎರಡೂ ಪಂದ್ಯಗಳು ಮಳೆಯಿಂದ ರದ್ದುಗೊಂಡಿತ್ತು. ಆದರೆ ಲೀಗ್​ನ ಉದ್ಘಾಟನ ಪಂದ್ಯಕ್ಕೆ ಮಳೆಯ ಯಾವುದೇ ಕಾಟ ಇರದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯವನ್ನು ಅಭಿಮಾನಿಗಳು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಮಧ್ಯಾಹ್ನ ಪಂದ್ಯ ಆರಂಭವಾಗುವ ಕಾರಣ ಇಲ್ಲಿ ಬಿಸಿಲ ಧಗೆ ಹೆಚ್ಚಾಗಿ ಇರರಲಿದೆ.ಹೀಗಾಗಿ ಮೊದಲು ಫಿಲ್ಡಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಆಯಾಸವಾಗಿ ಬ್ಯಾಟಿಂಗ್​ ನಡೆಸಲು ಕಷ್ಟವಾಗುವುದು ಖಚಿತ. ಹೀಗಾಗಿ ಟಾಸ್​ ಗೆದ್ದ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿದರೆ ಉತ್ತಮ.

Exit mobile version