Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

8 ಓವರ್​ ಮುಕ್ತಾಯಕ್ಕೆ ಭಾರತ ಒಂದು ವಿಕೆಟ್​ ನಷ್ಟಕ್ಕೆ 61 ರನ್​ ಗಳಿಸಿದೆ. ರೋಹಿತ್​ ಶರ್ಮ 35 ಮತ್ತು ವಿರಾಟ್​ ಕೊಹ್ಲಿ 21 ರನ್​ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಉಭಯ ಆಟಗಾರರ ಜತೆಯಾಟ ರೋಚಕವಾಗಿ ಸಾಗುತ್ತಿದೆ.

Abhilash B C

ವೇಗಿಗಳ ಓವರ್​ನಲ್ಲಿ ರನ್​ ದುಬಾರಿಯಾದ ಕಾರಣ ಆಸ್ಟ್ರೇಲಿಯಾ ಸ್ಪಿನ್​ ಬೌಲಿಂಗ್​ ದಾಳಿ ಆರಂಭಿಸಿದೆ. ಮ್ಯಾಕ್ಸ್​ವೆಲ್​ ಅವರು ಓವರ್​ ನಡೆಸುತ್ತಿದ್ದಾರೆ.

Abhilash B C

7 ಓವರ್​ ಮುಕ್ತಾಯಕ್ಕೆ ಭಾರತ ಒಂದು ವಿಕೆಟ್​ ಕಳೆದುಕೊಂಡು ರನ್ 54​ ಗಳಿಸಿದೆ. ಸದ್ಯ 7ರ ಸರಾಸರಿಯಲ್ಲಿ ರನ್​ ಗಳಿಕೆ ಆಗುತ್ತಿದೆ.

Abhilash B C

ಮಿಚೆಲ್​ ಸ್ಟಾರ್ಕ್​ ಅವರ ಓವರ್​ನಲ್ಲಿ ಹ್ಯಾಟ್ರಿಕ್​​ ಬೌಂಡರಿ ಬಾರಿಸಿದ ಕಿಂಗ್​ ಕೊಹ್ಲಿ. ತಂಡದ ಮೊತ್ತ 50ರ ಗಡಿ ದಾಟಿತು.

Abhilash B C

ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ವಿರಾಟ್​ ಕೊಹ್ಲಿ ಅವರು ರೋಹಿತ್​ ಶರ್ಮ ಅವರಿಗೆ ಸಾಥ್​​ ನೀಡುತ್ತಿದ್ದಾರೆ.

Exit mobile version