ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್ ಫೈನಲ್ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.
ಐದು ಓವರ್ಗಳ ಮುಕ್ತಾಯಕ್ಕೆ ಭಾರತ 37 ರನ್ ಗಳಿಸಿದೆ. ಶುಭ್ಮನ್ ಗಿಲ್ ವಿಕೆಟ್ ಐದನೇ ಓವರ್ನಲ್ಲಿ ಪತನಗೊಂಡಿತು. ಅವರು ನಾಲ್ಕು ರನ್ ಬಾರಿಸಿದ್ದಾರೆ. ರೋಹಿತ್ 31 ರನ್ ಬಾರಿಸಿದ್ದಾರೆ.
ಭಾರತ ತಂಡದ ಮೊದಲ ವಿಕೆಟ್ ಪತನಗೊಂಡಿದೆ. ಶುಭ್ಮನ್ ಗಿಲ್ 4 ರನ್ ಬಾರಿಸಿ ಔಟ್ ಆಗಿದ್ದಾರೆ. ಸ್ಟಾರ್ಕ್ ಎಸೆತಕ್ಕೆ ಜಂಪಾಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದ್ದಾರೆ. ದೊಡ್ಡ ಮೊತ್ತ ಪೇರಿಸುವ ಗುರಿ ಹೊಂದಿದ್ದ ಭಾರತ ತಂಡಕ್ಕೆ ಮೊದಲ ಹಿನ್ನಡೆ.
ಇನಿಂಗ್ಸ್ನ ಮೊದಲ ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ. ಮತ್ತೊಂದು ಫೋರ್.. 4 ಓವರ್ ಮುಕ್ತಾಯಕ್ಕೆ ಭಾರತ 30 ರನ್.
ಸ್ಟಾರ್ಕ್ ಎಸೆದ ತಮ್ಮ ಎರಡನೇ ಓವರ್ನಲ್ಲಿ ಶುಭ್ಮನ್ ಗಿಲ್ ಬ್ಯಾಟ್ ಸವರಿದ ಚೆಂಡು ವಿಕೆಟ್ ಕೀಪರ್ ಬಳಿ ಹೋಯಿತು. ವಿಕೆಟ್ ಪತನದ ಭಯ ಸೃಷ್ಟಿಯಾಯಿತು. ಆದರೆ ಅದೃಷ್ಟ ಭಾರತದದ ಪಾಲಿಗಿತ್ತು. ಮೂರನೇ ಓವರ್ ಮುಕ್ತಾಯಕ್ಕೆ 18 ರನ್ ಬಾರಿಸಿದೆ.
ಬ್ಯಾಟಿಂಗ್ನಲ್ಲಿ ಅಬ್ಬರಿಸುತ್ತಿರುವ ರೋಹಿತ್ ಶರ್ಮಾ, ಮೊದಲ ಓವರ್ನಲ್ಲಿ ಎಚ್ಚರಿಕೆಯಿಂದ ಆಡಿರುವ ರೋಹಿತ್ ಹೇಜಲ್ವುಡ್ ಎಸೆದ ಎರಡನೇ ಓವರ್ನಲ್ಲಿ ಉತ್ತಮ ರನ್ ಗಳಿಕೆ ಮಾಡಿದ್ದಾರೆ. ಅವರು ಸತತವಾಗಿ ಎರಡು ಫೋರ್ಗಳನ್ನು ಬಾರಿಸಿದ್ದಾರೆ. ಎರಡು ಓವರ್ಗಳಿಗೆ ಭಾರತ ತಂಡದ ಸ್ಕೋರ್ 13.