Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

ನಿಧಾನಗತಿಯ ಬ್ಯಾಟಿಂಗ್​ ಮೂಲಕ ಇನಿಂಗ್ಸ್​ ಬಳೆಸುತ್ತಿರುವ ಟ್ರಾವಿಸ್​ ಹಡ್​ ಮತ್ತು ಮಾರ್ನಸ್ ಲಬುಶೇನ್​.

Abhilash B C

ವಿಕೆಟ್​ ಬಿದ್ದಾಗ ಭಾರತದ ಬೌಲರ್​ಗಳ ಸಂಭ್ರಮದ ಕ್ಷಣ

Abhilash B C

19 ಓವರ್​ ಮುಕ್ತಾಯಕ್ಕೆ ಆಸ್ಟ್ರೇಲಿಯಾ ಮೂರು ವಿಕೆಟ್​ ನಷ್ಟಕ್ಕೆ 99 ರನ್ ಗಳಿಸಿದೆ. ಟ್ರಾವಿಸ್​ ಹೆಡ್​ ಅರ್ಧಶತಕ ಬಾರಿಸುವತ್ತ ಮುನ್ನುಗ್ಗುತ್ತಿದ್ದಾರೆ. ಗೆಲುವಿಗೆ ಇನ್ನು 142 ರನ್​ ಬೇಕಿದೆ.

Abhilash B C

ಸ್ಪಿನ್​ ದಾಳಿ ನಡೆಸುತ್ತಿದ್ದರೂ ವಿಕೆಟ್​ ಬೀಳುತ್ತಿಲ್ಲ. ಜಡೇಜಾ ಮತ್ತು ಕುಲ್​ದೀಪ್​ ಈಗಾಗಲೇ ತಲಾ ಮೂರು ಓವರ್​ ಎಸೆದಿದ್ದರೆ. ಸಿರಾಜ್​ ಅವರು ಇನ್ನೂ ಬೌಲಿಂಗ್​ ದಾಳಿಗೆ ಇಳಿದಿಲ್ಲ.

Abhilash B C

15 ಓವರ್​ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ಮೂರು ವಿಕೆಟ್​ ಕಳೆದುಕೊಂಡು 78 ರನ್​ ಗಳಿಸಿದೆ. ಸದ್ಯ ಟ್ರಾವಿಸ್​ ಹೆಟ್​ ಕ್ರೀಸ್​ನಲ್ಲಿ ಬೇರುರಿದಂತೆ ಕಾಣಿಸುತ್ತಿದೆ. ಇವರ ವಿಕೆಟ್​ ಬೇಗನೇ ಕೀಳಬೇಕು. ಇಲ್ಲವಾದಲ್ಲಿ ಉತ್ತಮ ಜತೆಯಾಟವೊಂದು ದಾಖಲಾಗಬಹುದು.

Exit mobile version