ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್ ಫೈನಲ್ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.
ಆಸ್ಟ್ರೇಲಿಯಾದ ಆರಂಭಿಕ ಅಬ್ಬರ ನೋಡುವಾಗ ಈ ಮೊತ್ತವನ್ನು 25 ಓವರ್ನಲ್ಲಿ ಬೆ್ನಟ್ಟುವ ಸೂಚನೆ ಇತ್ತು. ಆದರೆ ಈಗ ರನ್ ಗಳಿಸಲು ಪರದಾಡುತ್ತಿದ್ದಾರೆ.
11 ಓವರ್ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು ಆಸ್ಟ್ರಲಿಯಾ 65 ರನ್ ಗಳಿಸಿದೆ. ಗೆಲುವಿಗೆ ಇನ್ನೂ 176 ರನ್ಗಳ ಅಗತ್ಯವಿದೆ.
9 ಓವರ್ ಮುಕ್ತಾಯಕ್ಕೆ 51 ರನ್ಗಳಿಸಿದ ಆಸ್ಟ್ರೇಲಿಯಾ. ಭಾರತ 9 ಓವರ್ ವೇಳೆಗೆ 81 ರನ್ ಗಳಿಸಿತ್ತು.
ಡೇಂಜಸರ್ ಬ್ಯಾಟರ್ ಸ್ಟೀವನ್ ಸ್ಮಿತ್ ಅವರು ಕೇವಲ 4 ರನ್ಗೆ ಔಟಾದರು. ಜಸ್ಪ್ರೀತ್ ಬುಮ್ರಾ ಅವರ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.
2 ವಿಕೆಟ್ ಪತನದ ಬಳಿಕ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ. ಸದ್ಯ 6 ಓವರ್ ಮುಕ್ತಾಯಕ್ಕೆ 42 ರನ್ ಗಳಿಕೆ.