Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

ಆಸ್ಟ್ರೇಲಿಯಾದ 2ನೇ ವಿಕೆಟ್​ ಪತನ. ಡೇಂಜರಸ್​ ಬ್ಯಾಟರ್​ ಮಿಚೆಲ್ ಮಾರ್ಷ್ ವಿಕೆಟ್​ ಕಿತ್ತ ಜಸ್​ಪ್ರೀತ್​ ಬುಮ್ರಾ. ಮಾರ್ಷ್​ ಗಳಿಕೆ 15

Abhilash B C

ಮತ್ತೆ ಆಕ್ರಮಣಕಾರಿ ಬ್ಯಾಟಿಂಗ್​ಗೆ ಮುಂದಾದ ಆಸ್ಟ್ರೇಲಿಯಾ. ಶಮಿ ಓವರ್​ನಲ್ಲಿ ಸಿಕ್ಸರ್​ ಬಾರಿಸಿದ ಮಿಚೆಲ್ ಮಾರ್ಷ್​

Abhilash B C

2 ಓವರ್​ ಮುಕ್ತಾಯಕ್ಕೆ ಒಂದು ವಿಕೆಟ್​ಗೆ 28 ರನ್​ ಗಳಿಸಿದ ಆಸ್ಟ್ರೇಲಿಯಾ

Abhilash B C

ವಿರಾಟ್​ ಕೊಹ್ಲಿ ಅವರು ಬುಮ್ರಾ ಎಸೆತ ಮೊದಲ ಎಸೆತದಲ್ಲಿಯೇ ವಾರ್ನರ್​ ಅವರ ಕ್ಯಾಚ್​ ಒಂದನ್ನು ಹಿಡಿಯುವಲ್ಲಿ ಎಡವಿದ್ದರು. ಆದರೆ ಶಮಿ ಅವರ ಮುಂದಿನ ಓವರ್​ನಲ್ಲಿ ಕ್ಯಾಚ್​ ಹಿಡಿದು ವಾರ್ನರ್​ಗೆ ಪೆವಿಲಿಯನ್​ ದಾರಿ ತೋರಿದರು.

Abhilash B C

ಸ್ಲಿಪ್​ನಲ್ಲಿ ಮೊದಲ ಓವರ್​ನಲ್ಲಿ ಕ್ಯಾಚ್​ನಿಂದ ಪಾರಾಗಿದ್ದ ಡೇವಿಡ್​ ವಾರ್ನರ್​ ಅವರು ಮುಂದಿನ ಓವರ್​ನಲ್ಲಿ ಇದೇ ಜಾಗದಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು.

Exit mobile version