Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

ಒಂದು ಓವರ್​ ಮುಕ್ತಾಯಕ್ಕೆ 15 ರನ್​ ಗಳಿಸಿದ ಆಸ್ಟ್ರೇಲಿಯಾ. ಬುಮ್ರಾ ಎಸೆದ ಓವರ್​ ಇದಾಗಿತ್ತು.

Abhilash B C

ಮೊದಲ ಎಸೆತದಲ್ಲೇ ವಾರ್ನರ್​ ಅವರ ವಿಕೆಟ್​ ಕೀಳುವ ಅವಕಾಶ ಕಳೆದುಕೊಂಡ ಭಾರತ

Abhilash B C

ಭಾರತದ ನೀಡಿದ 240 ರನ್​ಗಳ ಗುರಿ ಬೆನ್ನಟ್ಟುಲು ಮುಂದಾದ ಆಸ್ಟ್ರೇಲಿಯಾ. ವಾರ್ನರ್​ ಮತ್ತು ಹೆಡ್ ಅವರಿಂದ ಬ್ಯಾಟಿಂಗ್​ ಇನಿಂಗ್ಸ್​ ಆರಂಭ.

Abhilash B C

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಡು, ನೃನ್ಯ ಮತ್ತು ಲೇಸರ್​ ಶೋಗಳ ವರ್ಣರಂಜಿತ ಕಾರ್ಯಕ್ರಮ ಆರಂಭ

Abhilash B C

ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 240 ರನ್​ಗೆ ಆಲೌಟ್​ ಆಗಿದೆ. ಜವಾಬಿತ್ತ ಆಸ್ಟ್ರೇಲಿಯಾ ಗೆಲುವಿಗೆ 241 ರನ್​ ಬಾರಿಸಬೇಕಿದೆ.

Exit mobile version