Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

48 ಓವರ್​ ಮುಕ್ತಾಯಕ್ಕೆ ಭಾರತ 9 ವಿಕೆಟ್​ 227 ರನ್​ ಗಳಿಸಿದೆ. ಇನ್ನು 2 ಓವರ್​ ಮಾತ್ರ ಬಾಕಿ ಉಳಿದಿದೆ.

Abhilash B C

45 ಓವರ್​ ಮುಕ್ತಾಯಕ್ಕೆ ಭಾರತ 8 ವಿಕೆಟ್​ಗೆ 214 ರನ್​ ಗಳಿಸಿದೆ. ಇನ್ನುಳಿದ 5 ಓವರ್​ನಲ್ಲಿ ಕನಿಷ್ಠ 40 ರನ್​ ಬಾರಿಸಿದರೆ ಮೊತ್ತವನ್ನು ಡಿಫೆಂಡ್ ಮಾಡಬಹುದಾಗಿದೆ.

Abhilash B C

ತೀವ್ರ ಸಂಕಷ್ಟಕ್ಕೆ ಸಿಲುಕಿದ ಭಾರತ. 8ನೇ ವಿಕೆಟ್​ ಪತನ. ಜಸ್​ಪ್ರೀತ್​ ಬುಮ್ರಾ ಅವರು ವಿಕೆಟ್​ ಕೈಚೆಲ್ಲಿದರು.

Abhilash B C

ಭಾರತ ತಂಡದ ಮತ್ತೊಂದು ವಿಕೆಟ್​ ಪತನ. ಶಮಿ ಅವರ ರೂಪದಲ್ಲಿ 7ನೇ ವಿಕೆಟ್​ ಕಳೆದುಕೊಂಡಿದೆ. ಸದ್ಯ ಮೊತ್ತ 211 ರನ್​ ಆಗಿದೆ

Abhilash B C

ಉತ್ತಮವಾಗಿ ಆಡುತ್ತಿದ್ದ ಕೆ.ಎಲ್​ ರಾಹುಲ್​ ಕೂಡ ವಿಕೆಟ್​ ಕೈಚೆಲ್ಲಿದ್ದಾರೆ. 107 ಎಸೆತ ಎದುರಿಸಿ ಕೇವಲ ಒಂದು ಬೌಂಡರಿ ಮಾತ್ರ ಬಾರಿಸಿ 66 ರನ್​ ಗಳಿಸಿದರು.

Exit mobile version