Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

41 ಓವರ್​ ಮುಕ್ತಾಯಕ್ಕೆ ಭಾರತ 200 ರನ್​ ಪೂರ್ತಿಗೊಳಿಸಿದೆ. ಇನ್ನೂ 9 ಓವರ್​ಗಳು ಬಾಕಿ ಉಳಿದಿದೆ. ರಾಹುಲ್​ ಮತ್ತು ಸೂರ್ಯಕುಮಾರ್​ ಅಂತಿಮ ಓವರ್​ ತನಕ ಬ್ಯಾಟಿಂಗ್​ ನಡೆಸಿದರೆ ಮೊತ್ತ 250 ರನ್ ದಾಟಬಹುದು.

Abhilash B C

ಸೂರ್ಯಕುಮಾರ್​ ಯಾದವ್​ 4 ಎಸೆತ ಎದುರಿಸಿದ ಬಳಿಕ ಮೊದಲ ರನ್​ ಗಳಿಸಿದರು.

Abhilash B C

37 ಓವರ್​ ಮುಕ್ತಾಯಕ್ಕೆ ಭಾರತ ತಂಡ 5 ವಿಕೆಟ್​ ಕಳೆದುಕೊಂಡು 180 ರನ್​ ಗಳಿಸಿದೆ. ಸದ್ಯ ರನ್​ ಸರಾಸರಿ 4ರಂತೆ ಸಾಗುತ್ತಿದೆ. ರಾಹುಲ್​ ಅವರು 57 ರನ್​ ಗಳಿಸಿ ಬ್ಯಾಟಿಂಗ್​ ನೆಸುತ್ತಿದ್ದಾರೆ.

Abhilash B C

ಭಾರತ ತಂಡದ 5ನೇ ವಿಕೆಟ್​ ಪತನ ಗೊಂಡಿದ್ದು ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ರಾಹುಲ್​ ಮತ್ತು ಸೂರ್ಯಕುಮಾರ್​ ಅವರ ಆಟದ ಮೇಲೆ ತಂಡದ ಭವಿಷ್ಯ ನಿಂತಿದೆ.

Sukhesha Padibagilu

ಭಾರತ ತಂಡದ ಐದನೇ ವಿಕೆಟ್​ ಪತನ. ರವೀಂದ್ರ ಜಡೇಜಾ ಪ್ಯಾಟ್​ ಕಮಿನ್ಸ್​ ಎಸೆತಕ್ಕೆ ಔಟ್​ ಆಗಿದ್ದಾರೆ. ಅವರು 9 ರನ್ ಮಾಡಿ ಔಟ್​ ಆಗಿದ್ದಾರೆ.

Exit mobile version