ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್ ಫೈನಲ್ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.
ಕನ್ನಡಿಗ ಕೆ.ಎಲ್ ರಾಹುಲ್ ಅವರು ಅರ್ಧಶತಕ ಪೂರ್ತಿಗೊಳಿಸಿದ್ದಾರೆ. ಸದ್ಯ ತಂಡ 35 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಮತ್ತೊಂದು ಅರ್ಧ ಶತಕ ಬಾರಿಸಿದ್ದಾರೆ. ಅವರು ನಿಧಾನವಾಗಿ ಆಡಿ 86 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದಾರೆ. ಅವರ ರನ್ ಇನಿಂಗ್ಸ್ ಭಾರತ ತಂಡದ ಪಾಲಿಗೆ ಅಮೂಲ್ಯ.
150 ರನ್ ಗಡಿ ದಾಟಿದ ಭಾರತ. 29.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ ಈ ರನ್ ಪೇರಿಸಿದೆ.
ಉತ್ತಮವಾಗಿ ಇನಿಂಗ್ಸ್ ಕಟ್ಟುತ್ತಿದ್ದ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ. ಪ್ಯಾಟ್ ಕಮಿನ್ಸ್ ಎಸೆತಕ್ಕೆ ಅವರು ಇನ್ಸೈಡ್ ಎಜ್ ಆಗಿ ಬೌಲ್ಡ್ ಆಗಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ಗೆ ಇದು ಎರಡನೇ ವಿಕೆಟ್. ಅವರು ಶ್ರೇಯಸ್ ಅಯ್ಯರ್ ಅವರನ್ನು 4 ರನ್ಗಳಿಗೆ ಔಟ್ ಮಾಡಿದ್ದರು. ಕೊಹ್ಲಿ 54 ರನ್ ಬಾರಿಸಿದ್ದರು.
25 ಓವರ್ಗಳ ಮುಕ್ತಾಯ. ಭಾರತ ತಂಡಕ್ಕೆ 3 ವಿಕೆಟ್ಗೆ 131 ರನ್… ವಿರಾಟ್ ಕೊಹ್ಲಿ 49 ರನ್ ಹಾಗೂ ರಾಹುಲ್ 25 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.