Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Abhilash B C

ವಿರಾಟ್​ ಕೊಹ್ಲಿ ಮತ್ತು ಕೆ. ಎಲ್​ ರಾಹುಲ್​ ಅವರು ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ದೊಡ್ಡ ಹೊಡೆತಗಳನ್ನು ಬಾರಿಸದೆ. ಓಟಗಳ ಮೂಲಕವೇ ಹೆಚ್ಚು ರನ್​ ಗಳಿಸಿಸುತ್ತಿದ್ದಾರೆ. ಈ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ

Abhilash B C

20 ಓವರ್​ಗೆ ಮೂರು ವಿಕೆಟ್​ ಕಳೆದುಕೊಂಡು 115 ರನ್​ ಗಳಿಸಿದ ಭಾರತ.

Sukhesha Padibagilu

ಭಾರತ ತಂಡ 100 ರನ್​ಗಳ ಗಡಿ ದಾಟಿದೆ. 15.4 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಮೂರಂಕಿ ಮೊತ್ತವನ್ನು ಭಾರತ ತಲುಪಿದೆ. ರೋಹಿತ್ ಶರ್ಮಾ, ಶ್ರೇಯಸ್​ ಅಯ್ಯರ್ ಹಾಗೂ ಶುಭ್​ಮನ್ ಗಿಲ್ ಔಟಾಗಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಇನಿಂಗ್ಸ್​ಮುಂದುವರಿಸಿದ್ದಾರೆ. ಭಾರತ ತಂಡ 6. 31 ಸರಾಸರಿಯಂತೆ ರನ್​ ಬಾರಿಸುತ್ತಿದೆ.

Sukhesha Padibagilu

ಭಾರತ ತಂಡದ ಮೂರನೇ ವಿಕೆಟ್​ ಉರುಳಿದೆ. ಶ್ರೇಯಸ್ ಅಯ್ಯರ್​ 4 ರನ್ ಬಾರಿಸಿ ಔಟಾಗಿದ್ದಾರೆ. ಇದರಿಂದ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. 81 ರನ್​ಗೆ 3 ವಿಕೆಟ್​ ಕಳೆದುಕೊಂಡಿದೆ.

Sukhesha Padibagilu

ಭಾರತ ತಂಡದ ಎರಡನೇ ವಿಕೆಟ್ ಕಳೆದುಕೊಂಡಿದೆ. ರೋಹಿತ್​ ಶರ್ಮಾ 47 ರನ್ ಬಾರಿಸಿದ ಔಟಾಗಿದ್ದಾರೆ. ಮ್ಯಾಕ್ಸ್​ವೆಲ್​ ಎಸೆತಕ್ಕೆ ದೊಡ್ಡ ಸಿಕ್ಸರ್​ ಬಾರಿಸಲು ಮುಂದಾದ ರೋಹಿತ್​​ ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಿದ್ದಾರೆ. ಅವರು 3 ರನ್​ಗಳಿಂದ ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

Exit mobile version