Site icon Vistara News

ICC World Cup 2023: ಪಾಕ್‌ ಸೋಲಿನ ಗಾಯಕ್ಕೆ ‘ಟ್ರೋಲ್‌’ ಬರೆ ಎಳೆದ ಭಾರತೀಯರು; ನೋಡಿ

Babar Azam

ICC World Cup 2023: Indians Troll Pakistan With Savage Memes As South Africa Win

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಹಾಗೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡವು ಸೋಲನುಭವಿಸುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಿಂದಲೇ (ICC World Cup 2023) ಬಹುತೇಕ ಹೊರಬಿದ್ದಂತಾಗಿದೆ. ಆಡಿರುವ ಆರು ಪಂದ್ಯಗಳಲ್ಲಿ ಸೋತು, ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲುಕಿರುವ, ಗೆದ್ದರೂ ರನ್‌ರೇಟ್‌ ಮುಲಾಜಿಗೆ ಬಿದ್ದಿರುವ ಪಾಕಿಸ್ತಾನ ತಂಡದ (Pakistan Cricket Team) ವಿರುದ್ಧ ಆ ದೇಶದ ಕ್ರಿಕೆಟ್‌ ದಿಗ್ಗಜರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಪಾಕ್‌ ತಂಡ ಸೋತರೆ, ಭಾರತೀಯರು ಸುಮ್ಮನಿರುತ್ತಾರೆಯೇ? ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡ ಪಾಕಿಸ್ತಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌, ಟ್ರೋಲ್‌ಗಳ ಮೂಲಕವೇ ತಿರುಗೇಟು ನೀಡಿದ್ದಾರೆ. ಇದು ಬಾಬರ್‌ ಅಜಂ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ಶುಭಮನ್‌ ಗಿಲ್‌ ಅವರು ಕುಣಿಯುತ್ತಿರುವ, ಬಾಬರ್‌ ಅಜಂಗೆ ಪಾಕ್‌ ಮಾಜಿ ಆಟಗಾರರು ಕಪಾಳಮೋಕ್ಷ ಮಾಡುವ, ಬಾಬರ್‌ ಅಜಂ ತೆಗೆದುಕೊಂಡ ನಿರ್ಧಾರಗಳನ್ನು ಗೇಲಿ ಮಾಡುವುದು ಸೇರಿ ಹಲವು ರೀತಿಯ ಮೀಮ್‌ಗಳು, ವಿಡಿಯೊಗಳು ವೈರಲ್‌ ಆಗಿವೆ.

ಚೆನ್ನೈನ ಎಂ ಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್​ ಮಾಡಿ 46. 4 ಓವರ್​ಗಳಲ್ಲಿ 270 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ತಂಡ 47.2 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 271 ರನ್ ಬಾರಿಸಿ ಗೆಲುವು ಸಾಧಿಸಿತು. ಕೊನೆಯಲ್ಲಿ ಕೇಶವ್‌ ಮಹಾರಾಜ್‌ ಅವರು ಬೌಂಡರಿ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ತಂದಿತ್ತರು.

ಇದನ್ನೂ ಓದಿ: ICC World Cup 2023: ವಿಶ್ವಕಪ್‌ನಿಂದಲೇ ಪಾಕಿಸ್ತಾನ ಔಟ್; ಹೀಗಿದೆ ಸೆಮೀಸ್‌ ಲೆಕ್ಕಾಚಾರ

ಪಾಕ್‌ ಮುಂದಿನ ಲೆಕ್ಕಾಚಾರ ಏನು?

ಆರಂಭಿಕ ಪಂದ್ಯಗಳನ್ನು ಗೆದ್ದು, ಸತತ ನಾಲ್ಕು ಪಂದ್ಯ ಗೆದ್ದಿರುವ ಪಾಕಿಸ್ತಾನವು ಟೂರ್ನಿಯಿಂದ ಬಹುತೇಕ ಔಟ್‌ ಆಗಿದೆ. ಕಳಪೆ ರನ್‌ರೇಟ್‌ ಹೊಂದಿರುವ ಬಾಬರ್‌ ಅಜಂ ತಂಡವು ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಒಂದು ಪಂದ್ಯ ಸೋತರೂ ಪಾಕ್‌ ವಿಮಾನ ಹತ್ತಬೇಕಾಗುತ್ತದೆ. ಅಲ್ಲದೆ, ನಾಲ್ಕು ತಂಡಗಳು 12 ಅಂಕ ಗಳಿಸಿ, ಪಾಕ್‌ ಮೂರೂ ಪಂದ್ಯ ಗೆದ್ದರೂ ಮನೆಗೆ ಹೋಗಬೇಕಾಗುತ್ತದೆ. ಇನ್ನು ಉಳಿದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನವು ಇಂಗ್ಲೆಂಡ್‌ ಹಾಗೂ ನ್ಯೂಜಿಲ್ಯಾಂಡ್‌ ತಂಡಗಳನ್ನು ಎದುರಿಸಲಿದೆ.

ಬಗೆದಷ್ಟೂ ಬರುತ್ತಿವೆ ಟ್ರೋಲ್‌ಗಳು

ಹ್ಯಾರಿಸ್‌ ರೌಫ್‌ಗೆ ಟ್ರೋಲ್‌ಪಡೆ ಟಾಂಗ್‌

ಇದನ್ನೂ ಓದಿ: ICC World Cup 2023 : ದ. ಆಫ್ರಿಕಾದ ʼಮಹಾರಾಜʼನಿಗೆ ತಲೆ ಬಾಗಿದ ಪಾಕಿಸ್ತಾನಕ್ಕೆ ಮತ್ತೊಂದು ಸೋಲು

Exit mobile version