Site icon Vistara News

ICC World Cup 2023 : 287 ರನ್​ಗಳ ಅಂತರದಿಂದ ಇಂಗ್ಲೆಂಡ್​ ಸೋಲಿಸಲು ಪಾಕ್​ ರೆಡಿ!

Babar Azam

ಕೋಲ್ಕತಾ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ (ICC World Cup 2023) ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಇಂಗ್ಲೆಂಡ್ 160 ರನ್​ಗಳಿಂದ ಗೆದ್ದಿದೆ. ಈ ಗೆಲುವಿನೊಂದಿಗೆ ಆಡಿರುವ 8 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ.

ಪಾಕಿಸ್ತಾನವು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದೆ. ಬಾಬರ್ ಅಜಮ್​ ನೇತೃತ್ವದ ಭಾರತ ತಂಡ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮೆನ್ ಇನ್ ಗ್ರೀನ್ ತಂಡವು ಸೆಮಿಫೈನಲ್ ಗೆ ಪ್ರವೇಶಿಸುವ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ಈ ಅರ್ಹತೆ ಪಡೆಯಲು ಅವರ ಮುಂದಿರುವ ಸವಾಲು ಸಿಕ್ಕಾಪಟ್ಟೆ ದೊಡ್ಡದು.

ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದರೆ ಹಾಲಿ ಚಾಂಪಿಯನ್ಸ್ ತಂಡವನ್ನು 287 ರನ್ ಗಳ ಅಂತರದಿಂದ ಸೋಲಿಸಬೇಕಾಗುತ್ತದೆ. ಮೊದಲು ಬೌಲಿಂಗ್ ಮಾಡಬೇಕಾದರೆ 2 ಓವರ್ ಗಳಲ್ಲಿ 50 ರನ್ ಗಳ ಗುರಿಯನ್ನು ಬೆನ್ನಟ್ಟಬೇಕಾಗಿದೆ. ಅಂದರೆ ಮೊದಲು ಇಂಗ್ಲೆಂಡ್​ ತಂಡವನ್ನು 50 ರನ್​ಗೆ ಆಲ್​ಔಟ್ ಮಾಡಬೇಕಾಗುತ್ತದೆ. ಈ ಎರಡೂ ಸನ್ನಿವೇಶಗಳು ಹೆಚ್ಚು ಅಸಂಭವ. ಹೀಗಾಗಿ 2023 ರ ಏಕದಿನ ವಿಶ್ವ ಕಪ್​ನಲ್ಲಿ ಪಾಕಿಸ್ತಾನದ ಪ್ರಯಾಣವು ಮುಗಿದಿದೆ. ಆದಾಗ್ಯೂ, ಅವರು ಇನ್ನೂ ಕೊನೆಯ ಪಂದ್ಯದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮತ್ತು ತಮ್ಮ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಎರಡು ತಂಡಗಳು ಎದುರು ನೋಡಲಿವೆ.

ಇದನ್ನೂ ಓದಿ: Babar Azam : ಮಾಜಿಗಳಿಗೆಲ್ಲ ಒಂದೇ ಮಾತಿನಿಂದ ತಿರುಗೇಟು ಕೊಟ್ಟ ಬಾಬರ್​

ಅಗ್ರ ಎಂಟರಲ್ಲಿ ಸ್ಥಾನ ಪಡೆಯಲು ಮತ್ತು ಚಾಂಪಿಯನ್ಸ್ ಟ್ರೋಫಿ 2025 ಗೆ ಅರ್ಹತೆ ಪಡೆಯಲು ಇಂಗ್ಲೆಂಡ್​ ತಂಡಕ್ಕೆ ಕೊನೇ ಪಂದ್ಯದ ಗೆಲುವು ಸಾಕಷ್ಟು ಅಗತ್ಯವಿದೆ. ಹೀಗಾಗಿ ಈ ಸ್ಪರ್ಧೆಯು ಎರಡೂ ತಂಡಗಳ ಅಭಿಮಾನಿಗಳಿಗೆ ರೋಮಾಂಚಕ ಕ್ಷಣವಾಗಲಿದೆ.

ಆಟಗಾರರ ಸಂಯೋಜನೆ?

ತಮ್ಮ ಹಿಂದಿನ ಪಂದ್ಯಗಳನ್ನು ಗೆದ್ದ ನಂತರ, ಎರಡೂ ತಂಡಗಳು ತಮ್ಮ ಗೆಲುವಿನ ಸಂಯೋಜನೆಯಲ್ಲಿ ಬದಲಾವಣೆ ಮಾಡಲು ಸಿದ್ಧರಿಲ್ಲ ಮತ್ತು ಮುಂಬರುವ ಪಂದ್ಯದಲ್ಲಿ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಈಡನ್ ಗಾರ್ಡನ್ಸ್ ಪಿಚ್ ವರದಿ

ಈ ಮೈದಾನದಲ್ಲಿ ಆಡಿದ ಕೊನೆಯ ಐದು ಪಂದ್ಯಗಳಲ್ಲಿ ಮೂರರಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದಿವೆ. 2009ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಮೊದಲ ಇನಿಂಗ್ಸ್​​ನಲ್ಲಿ 316 ರನ್ ಬಾರಿಸಿದ್ದು ಗರಿಷ್ಠ ಮೊತ್ತ. ಮೊದಲ ಇನ್ನಿಂಗ್ಸ್​​ನಲ್ಲಿ ಇಲ್ಲಿ ಸರಾಸರಿ 245 ರನ್ ದಾಖಲಾಗಿದೆ. ಟಾಸ್ ಗೆದ್ದ ನಾಯಕ ಸ್ಥಳದ ಇತ್ತೀಚಿನ ದಾಖಲೆಗಳನ್ನು ಗಮನದಲ್ಲಿಟ್ಟುಕೊಂಡು ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

ತಂಡಗಳು:

ಇಂಗ್ಲೆಂಡ್ (ಇಂಗ್ಲೆಂಡ್): ಜಾನಿ ಬೈರ್​ಸ್ಟೋವ್​, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ಸಿ & ವಿಕೆ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಗಸ್ ಅಟ್ಕಿನ್ಸನ್, ಆದಿಲ್ ರಶೀದ್.

ಪಾಕಿಸ್ತಾನ: ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಅಘಾ ಸಲ್ಮಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರವೂಫ್.

ಇತ್ತಂಡಗಳ ಮುಖಾಮುಖಿ ದಾಖಲೆ

ನೇರ ಪ್ರಸಾರ ವಿವರಗಳು

Exit mobile version