Site icon Vistara News

ICC World Cup 2023 : ಆಫ್ಘನ್ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

Rashid Khan

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ (ICC World Cup 2023) 42 ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಅಫ್ಘಾನ್ ತಂಡದ ಸೆಮಿಫೈನಲ್ ಸ್ಥಾನದ ಕನಸುಗಳನ್ನು ಭಗ್ನಗೊಳಿಸಿತು. ನವೆಂಬರ್ 16 ರಂದು ನಡೆಯಲಿರುವ ಎರಡನೇ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಈಗ ಆಸ್ಟ್ರೇಲಿಯಾವನ್ನು ಎದುರಿಸಲು ಸಜ್ಜಾಗಿದೆ. ಏತನ್ಮಧ್ಯೆ, ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​​ ಪ್ರಭಾವಶಾಲಿ ಗೆಲುವು ಆ ತಂಡದ ಸೆಮಿಫೈನಲ್ ತಲುಪುವ ಅವಕಾಶಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಪ್ರಬಲ ಸವಾಲು ಎದುರಾಗಿದೆ.

ಅಫಘಾನಿಸ್ತಾನವನ್ನು ಸೋಲಿಸಿದ ಬಳಿಕ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಒಟ್ಟು ಏಳು ಪಂದ್ಯಗಳಲ್ಲಿ ಗೆದ್ದು 14 ಅಂಕಗಳನ್ನು ಪಡೆಯುವ ಮೂಲಕ 1.261 ರನ್​ ರೇಟ್​ ಹೊಂದಿದೆ. ಇದೇ ವೇಳೆ ಅಫಘಾನಿಸ್ತಾನವೂ ಆರನೇ ಸ್ಥಾನದಲ್ಲಿದೆ. 4 ಗೆಲುವಿನೊಂದಿಗೆ 8 ಅಂಕ ಗಳಿಸಿ -0.336 ನೆಟ್​ರನ್​ರೇಟ್​ ಪಡೆದುಕೊಂಡಿದೆ.

ಇದೇ ವೇಳೆ 2025ರ ಚಾಂಪಿಯನ್ಸ್ ಟ್ರೋಫಿಗೆ ನೇರ ಅರ್ಹತೆ ಪಡೆಯುವಲ್ಲಿ ಶ್ರೀಲಂಕಾ ತಂಡ ವಿಫಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಇಂಗ್ಲೆಂಡ್ ಬಲವಾದ ಚೈತನ್ಯವನ್ನು ಪ್ರದರ್ಶಿಸಿದೆ. ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿದೆ ಮತ್ತು ಪಂದ್ಯಾವಳಿಯಲ್ಲಿ ಎರಡನೇ ಗೆಲುವನ್ನು ಸಾಧಿಸಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ 2025 ರ ಅವಕಾಶವನ್ನು ಜೀವಂತವಾಗಿರಿಸಿದೆ. ಆದಾಗ್ಯೂ, ಈ ಶನಿವಾರ ಪಾಕಿಸ್ತಾನ ವಿರುದ್ಧ ಸೋತರೆ ಅವರ ಈ ಅವಕಾಶ ಅಪಾಯಕ್ಕೆ ಸಿಲುಕಬಹುದು.

ಈ ಸುದ್ದಿಯನ್ನೂ ಓದಿ: Sri Lanka Cricket Team : ಲಂಕಾ ಕ್ರಿಕೆಟ್​ ತಂಡಕ್ಕೆ ಬಹು ದೊಡ್ಡ ಸಂಕಷ್ಟ!

ಎಂಟು ಅಂಕಗಳನ್ನು ಗಳಿಸಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಕೋಲ್ಕತಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮುಂಬರುವ ಪಂದ್ಯದಲ್ಲಿ ಅವರು ಮೊದಲು ಬ್ಯಾಟಿಂಗ್ ಮಾಡಿದರೆ 287 ರನ್​ಗಳ ಅಂತರದಿಂದ ಗೆಲುವು ಸಾಧಿಸಬೇಕು ಅಥವಾ 284 ಎಸೆತಗಳು ಬಾಕಿ ಇರುವಾಗ ಚೇಸ್ ಮಾಡಿ ಗೆಲುವು ಸಾಧಿಸಬೇಕು. ನವೆಂಬರ್ 15 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಎದುರಿಸುವ ಸಾಧ್ಯತೆಯಿದೆ.

ವಿಶ್ವ ಕಪ್​ ಅಂಕಪಟ್ಟಿ ಈ ರೀತಿ ಇದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ88016+2.456
ದಕ್ಷಿಣ ಆಫ್ರಿಕಾ97214+1.261
ಆಸ್ಟ್ರೇಲಿಯಾ​86212+0.861
ನ್ಯೂಜಿಲ್ಯಾಂಡ್95410+0.743
ಪಾಕಿಸ್ತಾನ8448+0.036
ಅಫಘಾನಿಸ್ತಾನ9458-0.336
ಇಂಗ್ಲೆಂಡ್​​ 8264-0.885
ಬಾಂಗ್ಲಾದೇಶ8264-1.142
ಶ್ರೀಲಂಕಾ9274-1.419
ನೆದರ್ಲ್ಯಾಂಡ್ಸ್​​​ 8264-1.635

ವಿಶ್ವ ಕಪ್​ನ ಲೀಗ್ ಹಂತದಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಶನಿವಾರ ಬೆಳಗ್ಗೆ ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಕಾಡೆಮಿ ಸ್ಟೇಡಿಯಮ್​ನಲ್ಲಿ ಅಯೋಜನೆಗೊಂಡಿದೆ. 44ನೇ ಪಂದ್ಯ ಕೋಲ್ಕೊತಾದಲ್ಲಿ ನಡೆಯಲಿದೆ. ಅಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಲೀಗ್ ಹಂತದ ಕೊನೇ ಪಂದ್ಯ ನವೆಂಬರ್​ 11ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ನೆದರ್ಲ್ಯಾಂಡ್ಸ್ ಹಾಗೂ ಭಾರತ ಸ್ಪರ್ಧಿಸಲಿದೆ.

Exit mobile version