ಬೆಂಗಳೂರು: ಗುರುವಾರದಿಂದ ಕ್ರಿಕೆಟ್ನ ಮಹಾ ಸಮರ ಏಕದಿನ ವಿಶ್ವಕಪ್ ಟೂರ್ನಿ(ICC World Cup 2023) ಆರಂಭವಾಗಲಿದೆ. ಇದಕ್ಕೂ ಮುನ್ನ ಈ ಹಿಂದೆ ನಡೆದ 12 ಆವೃತ್ತಿಯ ವಿಶ್ವಕಪ್ನಲ್ಲಿ ಗೆದ್ದ ತಂಡ, ಆತಿಥ್ಯ ವಹಿಸಿಕೊಂಡ ದೇಶ, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪಡೆದ ಆಟಗಾರ ಹಾಗು ಇತರ ದಾಖಲೆಗಳ ವರದಿ ಇಲ್ಲಿದೆ.
ವಿಶ್ವಕಪ್-1 ವರ್ಷ: 1975
ಆತಿಥ್ಯ: ಇಂಗ್ಲೆಂಡ್; ಚಾಂಪಿಯನ್: ವೆಸ್ಟ್ ಇಂಡೀಸ್
ಪಂದ್ಯಶ್ರೇಷ್ಠ: ಕ್ಲೈವ್ ಲಾಯ್ಡ್
ಇದು ಚೊಚ್ಚಲ ವಿಶ್ವಕಪ್ ಟೂರ್ನಿಯಾಗಿತ್ತು. 8 ತಂಡಗಳು ಇಲ್ಲಿ ಆಡಲಿಳಿದಿದ್ದವು. ಆರಂಭಿಕ ಸ್ಪರ್ಧೆಯಾದ ಕಾರಣ ಯಾವ ತಂಡದದ ಬಲಾಬಲವೂ ಸ್ಪಷ್ಟವಾಗಿ ಅರಿವಿರಲಿಲ್ಲ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ದೈತ್ಯರೆನಿಸಿದ್ದ ಕೆರಿಬಿಯನ್ನರು ಏಕದಿನದಲ್ಲೂ ಪ್ರಾಬಲ್ಯ ಮೆರೆದರು. ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಮಣಿಸಿ ಚಾಂಪಿಯನ್ ಎನಿಸಿದರು.
ಇದನ್ನೂ ಓದಿ ICC World Cup 2023 : ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಮ್ ಪೂರ್ತಿ ಪಕ್ಷಿಗಳ ಹಿಕ್ಕೆ! ಪ್ರೇಕ್ಷಕರು ಬೇಜಾರು
ವಿಶ್ವಕಪ್-2 ವರ್ಷ: 1979
ಆತಿಥ್ಯ: ಇಂಗ್ಲೆಂಡ್; ಚಾಂಪಿಯನ್: ವೆಸ್ಟ್ ಇಂಡೀಸ್
ಪಂದ್ಯಶ್ರೇಷ್ಠ: ವಿವಿಯನ್ ರಿಚರ್ಡ್ಸ್
ದ್ವಿತೀಯ ಬಾರಿಯ ವಿಶ್ವಕಪ್ ಕೂಟ ಇಂಗ್ಲೆಂಡ್ ಆತಿಥ್ಯದಲ್ಲೇ ನಡೆಯಿತು. ಈ ಕೂಟದಲ್ಲಿ ವೆಸ್ಟ್ ಇಂಡೀಸ್ ತನ್ನ ಪರಾಕ್ರಮ ಮೆರೆದೆ ಅಜೇಯ ಅಭಿಯಾನದೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಫೈನಲ್‌ನಲ್ಲಿ ನಾಟಕೀಯ ಕುಸಿತ ಅನುಭವಿಸಿದ ಆತಿಥೇಯ ಇಂಗ್ಲೆಡ್ 92 ರನ್ನುಗಳಿಂದ ಶರಣಾಯಿತು.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಸಾಧಕರಿವರು…
ವಿಶ್ವಕಪ್-3 ವರ್ಷ: 1983
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ಭಾರತ
ಪಂದ್ಯಶ್ರೇಷ್ಠ: ಮೊಹಿಂದರ್ ಅಮರನಾಥ್
ಕ್ರಿಕೆಟ್‌ನಲ್ಲಿ ಪವಾಡವೊಂದಕ್ಕೆ ಸಾಕ್ಷಿಯಾದ ವಿಶ್ವಕಪ್ ಪಂದ್ಯಾವಳಿ ಇದಾಗಿದೆ. ಹ್ಯಾಟ್ರಿಕ್ ಹಾದಿಯಲ್ಲಿದ್ದ ವೆಸ್ಟ್ ಇಂಡೀಸ್ ತಂಡ ಸೊಕ್ಕು ಮುರಿಯುವ ಮೂಲಕ ಕಪಿಲ್‌ದೇವ್ ಡೆವಿಲ್ಸ್ ತಂಡ ಭಾರತ ಕ್ರಿಕೆಟ್ ಅಧ್ಯಾಯದಲ್ಲಿ ಹೊಸ ಇತಿಹಾಸ ಬರೆಯಿತು. ಲಾರ್ಡ್ಸ್‌ನಲ್ಲಿ 43 ರನ್ನುಗಳಿಂದ ಗೆದ್ದು ಮೊದಲ ವಿಶ್ವಕಪ್ ಎತ್ತಿ ಹಿಡಿಯಿತು.
ಇದನ್ನೂ ಓದಿ World Cup History: ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್
ವಿಶ್ವಕಪ್-4 ವರ್ಷ: 1987
ಆತಿಥ್ಯ: ಭಾರತ, ಪಾಕಿಸ್ತಾನ
ಚಾಂಪಿಯನ್: ಆಸ್ಟ್ರೇಲಿಯಾ
ಪಂದ್ಯಶ್ರೇಷ್ಠ: ಡೇವಿಡ್ ಬೂನ್
ಇದು ರಿಲಯನ್ಸ್ ಪ್ರಾಯೋಜಕತ್ವದಲ್ಲಿ ಭಾರತ-ಪಾಕಿಸ್ತಾನ ಜಂಟಿಯಾಗಿ ನಡೆದ 4ನೇ ವಿಶ್ವಕಪ್ ಕೂಟವಾಗಿತ್ತು. ಕೋಲ್ಕತಾದಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡನ್ನು ಕೇವಲ 7 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯ ಮೊದಲ ಸಲ ಕಪ್ ಎತ್ತಿ ಸಂಭ್ರಮಿಸಿತು.ಇಂಗ್ಲೆಂಡ್ ಮತ್ತೆ ಸೋಲಿನ ಸಂಕಟ ಎದುರಿಸಿತು.
ಇದನ್ನೂ ಓದಿ World Cup History: 2011ರ ವಿಶ್ವಕಪ್; ಛಲದಂಕಮಲ್ಲ ಧೋನಿ ಬಳಗ ಜಗದಂಕಮಲ್ಲ ಆಗಿದ್ದು ಹೀಗೆ…
ವಿಶ್ವಕಪ್-5 ವರ್ಷ: 1992
ಆತಿಥ್ಯ: ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್
ಚಾಂಪಿಯನ್: ಪಾಕಿಸ್ತಾನ;
ಪಂದ್ಯಶ್ರೇಷ್ಠ: ವಾಸಿಮ್ ಅಕ್ರಮ್
ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆದ ಈ ಟೂರ್ನಿ ಕಲರ್‌ಫುಲ್ ಆಗಿ ಮೂಡಿಬಂತು. ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ಆತಿಥ್ಯದ ಈ ಕೂಟ ಅನೇಕ ವೈಶಿಷ್ಟಗಳಿಗೆ ಸಾಕ್ಷಿಯಾಯಿತು. ಮೊದಲ ಬಾರಿ ವಿಶ್ವಕಪ್ನಲ್ಲಿ ಬಣ್ಣದ ಜೆರ್ಸಿ ತೊಡಲಾಯಿತು. ಮೂರನೇ ಬಾರಿ ಫೈನಲ್ ತಲುಪಿದ ಇಂಗ್ಲೆಂಡ್ ಇಮ್ರಾನ್ ಖಾನ್ ಸಾರಥ್ಯದ ಪಾಕ್ ವಿರುದ್ಧ 22 ರನ್ನುಗಳಿಂದ ಸೋಲು ಕಂಡಿತು. ಪಾಕಿಸ್ತಾನ ವಿಶ್ವ ಕ್ರಿಕೆಟಿನ ನೂತನ ಚಾಂಪಿಯನ್ ಎನಿಸಿತು.
ವಿಶ್ವಕಪ್-6 ವರ್ಷ: 1996
ಆತಿಥ್ಯ: ಭಾರತ, ಪಾಕಿಸ್ತಾನ, ಶ್ರೀಲಂಕಾ
ಚಾಂಪಿಯನ್: ಶ್ರೀಲಂಕಾ
ಪಂದ್ಯಶ್ರೇಷ್ಠ: ಅರವಿಂದ ಡಿ ಸಿಲ್ವ
ಮೊದಲ ಸಲ 3 ರಾಷ್ಟ್ರಗಳು ಆತಿಥ್ಯ ವಹಿಸಿಕೊಂಡಿತು. ಭಾರತ, ಪಾಕಿಸ್ತಾನ ಜತೆಗೆ ಶ್ರೀಲಂಕಾದಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು. ಶಾಂತಿಗಾಗಿ ವಿಲ್ಸ್ ಪ್ರಾಯೋಜಕತ್ವದಲ್ಲಿ ನಡೆದ ಟೂರ್ನಿ ಇದಾಗಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ನೂತನ ಚಾಂಪಿಯನ್ ಎನಿಸಿತು.
ಇದನ್ನೂ ಓದಿ World Cup History: ರೋಚಕ ಫೈನಲ್‌ನಲ್ಲಿ ಗೆದ್ದು ಬೀಗಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದ ವೆಸ್ಟ್ ಇಂಡೀಸ್!
ವಿಶ್ವಕಪ್-7 ವರ್ಷ: 1999
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಶೇನ್ ವಾರ್ನ್
ಮತ್ತೆ ವಿಶ್ವಕಪ್ ಟೂರ್ನಿ ಆತಿಥ್ಯ ಇಂಗ್ಲೆಂಡ್ ಪ್ರವೇಶಿಸಿತು. ಜತೆಗೆ ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್, ಹಾಲೆಂಡ್‌ನಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು. ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿದ ಆಸ್ಟ್ರೇಲಿಯಾ 2ನೇ ಸಲ ಕಪ್ ಎತ್ತಿತ್ತು.
ವಿಶ್ವಕಪ್-8 ವರ್ಷ: 2003
ಆತಿಥ್ಯ: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ರಿಕಿ ಪಾಂಟಿಂಗ್
ಮೊದಲ ಸಲ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಇದಾಗಿತ್ತು. ಸರ್ವಾಧಿಕ 14 ತಂಡಗಳು ಇಲ್ಲಿ ಪಾಲ್ಗೊಂಡವು. ಸೌರವ್ ಗಂಗೂಲಿ ಸಾರಥ್ಯದ ಭಾರತ ಅಮೋಘ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇರಿಸಿತ್ತು. ಆದರೆ ಫೈನಲ್‌ನಲ್ಲಿ ಆಸೀಸ್ ಪರಾಕ್ರಮಕ್ಕೆ ತಲೆಬಾಗಿತ್ತು.
ವಿಶ್ವಕಪ್-9 ವರ್ಷ: 2007
ಆತಿಥ್ಯ: ವೆಸ್ಟ್ ಇಂಡೀಸ್
ಚಾಂಪಿಯನ್: ಆಸ್ಟ್ರೇಲಿಯಾ
ಪಂದ್ಯಶ್ರೇಷ್ಠ: ಆ್ಯಡಂ ಗಿಲ್‌ಕ್ರಿಸ್ಟ್
ಇದು ವಿಶ್ವಕಪ್ ಇತಿಹಾಸದ ದುರಂತಮಯ ಕೂಟ. ಬಲಿಷ್ಠ ತಂಡವಾಗಿದ್ದ ಹಾಗೂ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲೇ ನಿರ್ಗಮಿಸಿದವು. ಆಸ್ಟ್ರೇಲಿಯಾ ಮತ್ತೆ ಫೈನಲ್‌ಗೆ ಲಗ್ಗೆ ಇರಿಸಿತು. ಮಳೆಪೀಡಿತ ಪ್ರಶಸ್ತಿ ಸಮರದಲ್ಲಿ ಶ್ರೀಲಂಕಾವನ್ನು ಡಿ-ಎಲ್ ನಿಯಮದನ್ವಯ ಸೋಲಿಸಿ ಹ್ಯಾಟ್ರಿಕ್ ಕಪ್ ಗೆದ್ದ ಸಾಧನೆ ಮಾಡಿತ್ತು.
ವಿಶ್ವಕಪ್-10 ವರ್ಷ: 2011
ಆತಿಥ್ಯ: ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ
ಚಾಂಪಿಯನ್: ಭಾರತ
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ
ಏಷ್ಯಾದ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆದ ಪಂದ್ಯಾವಳಿ ಇದಾಗಿತ್ತು. 2007ರ ಟಿ20 ವಿಶ್ವಕಪ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಕಣಕ್ಕಿಳಿದ ಭಾರತ ತಂಡ 2ನೇ ಸಲ ಕಪ್ ಎತ್ತಿ 28 ವರ್ಷಗಳ ಬಳಿಕ ವಿಶ್ವಕಪ್ ತನ್ನದಾಗಿಸಿಕೊಂಡಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಉರುಳಿಸಿ ಟ್ರೋಫಿಯನ್ನು ಕ್ರಿಕೆಟ್ ದೇವರಿಗೆ ಅರ್ಪಿಸಿತು.
ವಿಶ್ವಕಪ್-11 ವರ್ಷ: 2015
ಆತಿಥ್ಯ: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್
ಚಾಂಪಿಯನ್: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಜೇಮ್ಸ್ ಫಾಕ್ನರ್
ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ 2ನೇ ಸಲ ಜಂಟಿಯಾಗಿ ಆಯೋಜಿಸಿದ ಈ ಪಂದ್ಯಾವಳಿಯಲ್ಲಿ ಈ ಎರಡು ತಂಡಗಳೇ ಫೈನಲ್‌ಗೆ ಲಗ್ಗೆ ಇರಿಸಿದವು. ಕಿವೀಸ್‌ಗೆ ಮೊದಲ ಪ್ರಶಸ್ತಿ ಸಮರವಾಗಿತ್ತು. ಆದರೆ ಆಸೀಸ್‌ಗೆ ಸಡ್ಡು ಹೊಡೆಯಲು ವಿಫಲವಾಯಿತು. ಕ್ಲಾರ್ಕ್ ಪಡೆ 7 ವಿಕೆಟ್‌ಗಳಿಂದ ಗೆದ್ದಿತು.
ವಿಶ್ವಕಪ್-12 ವರ್ಷ 2019
ಆತಿಥ್ಯ: ಇಂಗ್ಲೆಂಡ್
ಚಾಂಪಿಯನ್: ಇಂಗ್ಲೆಂಡ್
ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್
5ನೇ ಬಾರಿ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿಕೊಂಡಿತ್ತು. 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದ್ದ ಭಾರತ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಧೋನಿ ಅವರು ಮಾರ್ಟಿನ್ ಗಪ್ಟಿಲ್ ರನೌಟ್ಗೆ ಸಿಲುಕುವ ಮೂಲಕ ಭಾರದ ಫೈನಲ್ ಕನಸು ಕಮರಿ ಹೋಗಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿತ್ತು. ಪಂದ್ಯ ಟೈಗೊಂಡು ಬಳಿಕ ಸೂಪರ್ ಓವರ್ ಕೂಟ ಟೈಗೊಂಡು ಕೊನೆಗೆ ಬೌಂಡರಿ ಆಧಾರದಲ್ಲಿ ಕೊನೆಗೂ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿತ್ತು.