Site icon Vistara News

ICC World Cup 2023: ವಿಶ್ವ ಕಪ್​ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಇಂಗ್ಲೆಂಡ್​ ಎದುರಾಳಿ

rohit sharma jos buttler

ದುಬೈ: ಐಸಿಸಿ ಪುರುಷರ ಏಕದಿನ ವಿಶ್ವ ಕಪ್​ (ICC World Cup 2023)ವೇಳಾಪಟ್ಟಿ ಪ್ರಕಟಗೊಂಡ ಬೆನಲ್ಲೇ ಇದೀಗ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ವಿಶ್ವ ಕಪ್​ ಟೂರ್ನಿ ಅಕ್ಟೋಬರ್​ 5 ರಿಂದ ಆರಂಭವಾಗಿ ನವೆಂಬರ್​ 19ರ ತನಕ ನಡೆಯಲಿದೆ. ರೌಂಡ್​ ರಾಬಿನ್​ ಮಾದರಿಯಲ್ಲಿ ನಡೆಯುವ ಈ ಕೂಟದಲ್ಲಿ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಇದೀಗ ಸೆಪ್ಟೆಂಬರ್​ 29 ರಿಂದ ಅಕ್ಟೋಬರ್​ 3ರವರೆಗೆ ನಡೆಯಲಿರುವ 10 ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು(World Cup Practice Match Schedule) ಐಸಿಸಿ(ICC) ಬಿಡುಗಡೆಗೊಳಿಸಿದೆ. ಈ ಅಭ್ಯಾಸ ಪಂದ್ಯದಲ್ಲಿ ಎಲ್ಲ ತಂಡಗಳು ಎರಡು ಪಂದ್ಯಗಳನ್ನು ಆಡಲಿವೆ. ಆತಿಥೇಯ ಭಾರತ(IND vs ENG) ತಂಡ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

ದಿನಾಂಕಪಂದ್ಯಸ್ಥಳ
ಸೆಪ್ಟೆಂಬರ್​ 29ಪಾಕಿಸ್ತಾನ-ನ್ಯೂಜಿಲ್ಯಾಂಡ್ಹೈದರಾಬಾದ್
ಸೆಪ್ಟೆಂಬರ್​ 29ದಕ್ಷಿಣ ಆಫ್ರಿಕಾ-ಅಫಘಾನಿಸ್ತಾನತಿರುವನಂತಪುರ
ಸೆಪ್ಟೆಂಬರ್​ 29ಬಾಂಗ್ಲಾದೇಶ-ಅರ್ಹತಾ ತಂಡಗುವಾಹಟಿ
ಸೆಪ್ಟೆಂಬರ್​ 30ಭಾರತ-ಇಂಗ್ಲೆಂಡ್ಗುವಾಹಟಿ
ಸೆಪ್ಟೆಂಬರ್​ 30ಆಸ್ಟ್ರೇಲಿಯಾ-ಅರ್ಹತಾ ತಂಡಹೈದರಾಬಾದ್
ಅಕ್ಟೋಬರ್​ 2ಇಂಗ್ಲೆಂಡ್​-ಬಾಂಗ್ಲಾದೇಶಗುವಾಹಟಿ
ಅಕ್ಟೋಬರ್​ 2ನ್ಯೂಜಿಲ್ಯಾಂಡ್​-ದಕ್ಷಿಣ ಆಫ್ರಿಕಾತಿರುವನಂತಪುರ
ಅಕ್ಟೋಬರ್​ 3ಭಾರತ-ಅರ್ಹತಾ ತಂಡತಿರುವನಂತಪುರ
ಅಕ್ಟೋಬರ್​ 3ಪಾಕಿಸ್ತಾನ-ಆಸ್ಟ್ರೇಲಿಯಾಹೈದರಾಬಾದ್
ಅಕ್ಟೋಬರ್​ 3ಅಫಘಾನಿಸ್ತಾನ-ಅರ್ಹತಾ ತಂಡಗುವಾಹಟಿ

ಇದನ್ನೂ ಓದಿ ICC World Cup 2023: ಏಕದಿನ ವಿಶ್ವ ಕಪ್​ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ; ಬೆಂಗಳೂರಿನಲ್ಲೂ ಇದೆ ಪ್ರಮುಖ ಪಂದ್ಯ

ಟೂರ್ನಿಯ ಆತಿಥೇಯ ತಂಡವಾದ ಕಾರಣ ದೇಶದ ಪ್ರಮುಖ 9 ನಗರಗಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ಆಡಲಿದೆ. ಈ ವೇಳೆ ಭಾರತ ತನ್ನ ಲೀಗ್​ ಹಂತದ ಪಂದ್ಯಗಳಿಗೆ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಿದೆ. ಒಂದೊಮ್ಮೆ ಭಾರತ ತಂಡ ಸೆಮಿಫೈನಲ್‌ ಅಥವಾ ಫೈನಲ್‌ ತಲುಪಿದರೆ ಆಗ ಸುಮಾರು 9,700 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ. ವೇಳಾಪಟ್ಟಿ ಪ್ರಕಾರ ಭಾರತ ಅತೀ ಹೆಚ್ಚು 9 ನಗರಗಳಲ್ಲಿ ಲೀಗ್‌ ಪಂದ್ಯಗಳನ್ನು ಆಡಲಿರುವ ಏಕೈಕ ತಂಡವಾಗಿದೆ. ಉಳಿದ ತಂಡಗಳು ಒಂದು ತಾಣದಲ್ಲಿ ಗರಿಷ್ಠ 2 ಪಂದ್ಯಗಳನ್ನು ಆಡಲಿವೆ. ಭದ್ರತಾ ಕಾರಣಗಳಿಂದ ಪಾಕಿಸ್ತಾನ(world cup 2023 news Pakistan) ಕೇವಲ 5 ನಗರಗಳಲ್ಲಷ್ಟೇ ಲೀಗ್‌ ಪಂದ್ಯಗಳನ್ನು ಆಡುತ್ತದೆ. ಅಂದರೆ ಪಾಕ್​ 6,849 ಕಿ.ಮೀ. ದೂರ ಸಂಚಾರ ಮಾಡಲಿದೆ. ಒಟ್ಟಾರೆಯಾಗಿ ಭಾರತಕ್ಕೆ ಪಂದ್ಯ ಆಡುವುದಕ್ಕಿಂತ ಪ್ರಯಾಣದ್ದೇ ಹೆಚ್ಚಿನ ಚಿಂತೆಯಾಗಿದೆ.

ಇದನ್ನೂ ಓದಿ ಇವರ ಒಪ್ಪಿಗೆ ಸಿಕ್ಕರೆ ಮಾತ್ರ ಭಾರತ-ಪಾಕ್ ವಿಶ್ವಕಪ್​​ ಪಂದ್ಯ ಸಾಧ್ಯ!

ಈಗಾಗಲೇ 8 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​, ಬಾಂಗ್ಲಾದೇಶ, ಇಂಗ್ಲೆಂಡ್​,ಅಫಘಾನಿಸ್ತಾನ ತಂಡಗಳು ನೇರವಾಗಿ ಅರ್ಹತೆ(world cup 2023 qualifiers) ಪಡೆದುಕೊಂಡಿದೆ. ಇನ್ನುಳಿದ 2 ಸ್ಥಾನಗಳಿಗೆ 10 ತಂಡಗಳು ಅರ್ಹತಾ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದು ಸೂಪರ್​ ಸಿಕ್ಸ್ ಪಂದ್ಯಗಳು ಇಂದಿನಿಂದ(ಗುರುವಾರ) ಆರಂಭಗೊಳ್ಳಲಿದೆ.

ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಕ್ವಾಲಿಫೈಯರ್ 2- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ಕ್ವಾಲಿಫೈಯರ್ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Exit mobile version