Site icon Vistara News

ICC World Cup 2023 : ಚಾಂಪಿಯನ್​ ಇಂಗ್ಲೆಂಡ್ ವಿರುದ್ಧ ದ. ಆಫ್ರಿಕಾಗೆ ದಾಖಲೆಯ 229 ರನ್ ಜಯ

South Africa Cricket team

ಮುಂಬಯಿ: ಏಕಮುಖವಾಗಿ ಸಾಗಿದ ವಿಶ್ವ ಕಪ್​ ಟೂರ್ನಿಯ (ICC World Cup 2023) 20ನೇ ಪಂದ್ಯದಲ್ಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ದಾಖಲೆಯ 229 ರನ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಭರ್ಜರಿ ರನ್​ರೇಟ್​ ಗಳಿಸುವ ಮೂಲಕ ಪ್ಲೇಆಫ್​ ಹಂತದೆಡೆಗೆ ಮುನ್ನಡೆಯುತ್ತಿದೆ. ಅತ್ತ ಜೋಸ್​ ಬಟ್ಲರ್ ನೇತೃತ್ವದ ಆಂಗ್ಲರ ಪಡೆಯ ಸೆಮಿಫೈನಲ್​ ಪ್ರವೇಶದ ಅವಕಾಶ ಕ್ಷೀಣಗೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​​ಗಳು ಹಾಗೂ ಬೌಲರ್​ಗಳು ಪಂದ್ಯದುದ್ದಕ್ಕೂ ಇಂಗ್ಲೆಂಡ್ ತಂಡದ ಮೇಲೆ ಸವಾರಿ ಮಾಡಿತು. ಇದು ಇಂಗ್ಲೆಂಡ್​ ತಂಡದ ಪಾಲಿಗೆ ವಿಶ್ವ ಕಪ್​ನಲ್ಲಿ ಅತ್ಯಂತ ದೊಡ್ಡ ಅಂತರದ ಸೋಲು. ಅದೇ ರೀತಿ ವಿಶ್ವ ಕಪ್​ ಇತಿಹಾಸದಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಅಂತರದ ಸೋಲಾಗಿದೆ.

ಮುಂಬಯಿಯ ವಾಖೆಂಡೆ ಸ್ಟೇಡಿಯಮ್​ನಲ್ಲಿ ಇದು ಹಾಲಿ ಆವೃತ್ತಿಯ ವಿಶ್ವ ಕಪ್​ನ ಮೊದಲ ಪಂದ್ಯವಾಗಿದೆ. ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 50 ಓವರ್​ಗಳಲ್ಲಿ ಏಳು ವಿಕೆಟ್​ಗೆ 399 ರನ್​ ಬಾರಿಸಿತು. ಪ್ರತಿಯಾಗಿ ಆಡಿದ ಇಂಗ್ಲೆಂಡ್ ತಂಡ ಯಾವುದೇ ರೀತಿಯಲ್ಲಿ ಪ್ರತಿರೋಧ ತೋರದೇ 22 ಓವರ್​ಗಳಲ್ಲಿ 170 ರನ್​ಗಳಿಗೆ ಆಲ್​ಔಟ್ ಆಯಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟುವ ಗುರಿ ಪಡೆದ ಇಂಗ್ಲೆಂಡ್ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ತಂಡದ ಯಾವುದೇ ಬ್ಯಾಟರ್​ಗಳು ಪ್ರತಿರೋಧ ನೀಡುವ ಗೋಜಿಗೆ ಹೋಗಲಿಲ್ಲ. ಗೆರಾಲ್ಡ್​ ಕೊಯೆಟ್ಜಿ (3 ವಿಕೆಟ್​), ಲುಂಗಿ ಎನ್​ಗಿಡಿ (2 ವಿಕೆಟ್​), ಮಾರ್ಕೊ ಜೆನ್ಸನ್​ (2 ವಿಕೆಟ್​​) ಹಾಗೂ ಕೇಶವ್​ ಮಹಾರಾಜ್ (1 ವಿಕೆಟ್​) ಅವರ ಮಾರಕ ದಾಳಿಗೆ ತತ್ತರಿಸಿತು. ಆರಂಭಿಕ ಬ್ಯಾಟರ್​ಗಳಾದ ಜಾನಿ ಬೈರ್ಸ್ಟೋವ್​ (10 ರನ್​), ಮಲಾನ್​ (6 ರನ್​) ಬೇಗನೇ ವಿಕೆಟ್​ ಒಪ್ಪಿಸಿದರು. ಜೋ ರೂಟ್​ 2 ರನ್​ಗೆ ಔಟಾದರೆ, ತಂಡಕ್ಕೆ ಮರಳಿದ ಬೆನ್​ಸ್ಟೋಕ್ಸ್​ ಕೊಡುಗೆ 5 ರನ್​. ಹ್ಯಾರಿ ಬ್ರೂಕ್​ 17 ರನ್ ಬಾರಿಸಿ ಔಟಾದರೆ, ನಾಯಕ ಬಟ್ಲರ್​ 15 ರನ್​ ಹೊಡೆದ ಪೆವಿಲಿಯನ್ ಸೇರಿಕೊಂಡರು.

ಇವರ ಕಳಪೆ ಆಟದಿಂದಾಗಿ ಇಂಗ್ಲೆಂಡ್ ತಂಡ 100 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡಿತು. ಆದರೆ, 8 ವಿಕೆಟ್​ಗೆ ಮಾರ್ಕ್ ವುಡ್​ (43) ಹಾಗೂ ಗಸ್​ ಅಟ್ಕಿನ್ಸನ್​ (35) 70 ರನ್​ಗಳ ಜತೆಯಾಡುವ ಮೂಲಕ ಸ್ವಲ್ಪ ಮರ್ಯಾದೆ ಉಳಿಸಿದರು. ಇವರಿಬ್ಬರೇ ಇಂಗ್ಲೆಂಡ್​ ತಂಡದ ದೊಡ್ಡ ಮೊತ್ತದ ಬ್ಯಾಟರ್​ಗಳು. ಕೊನೇ ಬ್ಯಾಟರ್​ ರೀಸ್​ ಟಾಪ್ಲೆ ಗಾಯದ ಸಮಸ್ಯೆಯಿಂದಾಗಿ ಬ್ಯಾಟಿಂಗ್ ಮಾಡಲಿಲ್ಲ.

ದ. ಆಫ್ರಿಕಾ ಭರ್ಜರಿ ಬ್ಯಾಟಿಂಗ್

ಅದಕ್ಕಿಂದ ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ವಿಶ್ವಾಸದಲ್ಲಿ ಆಡಿತು. ಕ್ವಿಂಟನ್​ ಡಿ ಕಾಕ್​ ಕೇವಲ 4 ರನ್​ಗಳಿಗೆ ಔಟಾಗುವ ಮೂಲಕ ತಂಡದ ನಾಲ್ಕು ರನ್​ಗಳಿಗೆ ತಂಡ ಮೊದಲ ವಿಕೆಟ್​ ಕಳೆದುಕೊಂಡಿತು. ಆದರೆ, ರೀಜಾ ಹೆಂಡ್ರಿಕ್ಸ್​ (85) ಹಾಗೂ ವ್ಯಾನ್​ ಡೆರ್ ಡಸ್ಸೆನ್​ (60) ಎರಡನೇ ವಿಕೆಟ್​ಗೆ 121 ರನ್​ಗಳ ಜತೆಯಾಟವಾಡಿದರು. ನಾಯಕ ಏಡೆನ್ ಮಾರ್ಕ್ರಮ್​ (42) ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಮಿಲ್ಲರ್​ 5 ರನ್​ಗೆ ವಿಕೆಟ್​ ಕಳೆದುಕೊಂಡರೂ ತಂಡ ಮೊತ್ತ 5 ವಿಕೆಟ್​ 243 ಆಗಿತ್ತು.

ಇದನ್ನೂ ಓದಿ :
ICC World Cup 2023 : ಶ್ರೀಲಂಕಾ ತಂಡಕ್ಕೆ ಮೊದಲ ಜಯ, ನೆದರ್ಲ್ಯಾಂಡ್ಸ್​ಗೆ 5 ವಿಕೆಟ್​ ಸೋಲು
ICC World Cup 2023 : ಬಾಂಗ್ಲಾ ಹುಲಿಯ ಹೊಟ್ಟೆ ಸೀಳಿದ ಭಾರತೀಯ ಅಭಿಮಾನಿಗಳು!
Ravindra Jadeja : ಬೆಸ್ಟ್​ ಫೀಲ್ಡರ್​​ ರವೀಂದ್ರ ಜಡೇಜಾಗೂ ಗಾಯದ ಸಮಸ್ಯೆ

ಕ್ಲಾಸೆನ್​ ಕ್ಲಾಸ್ ಆಟ

ಆರನೇ ವಿಕೆಟ್​ಗೆ ಜತೆಯಾದ ಹೆನ್ರಿಚ್ ಕ್ಲಾಸೆನ್​ (109 ರನ್​) ಹಾಗೂ ಮಾರ್ಕೊ ಜೆನ್ಸನ್ (ಅಜೇಯ 75 ರನ್​) 151 ರನ್​ಗಳ ಜತೆಯಾಟವಾಡಿದರು. ಅಂತಿಮ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕ್ಲಾಸೆನ್ 62 ಎಸೆತಗಳಿಗೆ ಶತಕ ಬಾರಿಸಿದ್ದು, 67 ಎಸೆತಗಳಿಗೆ 12 ಫೊರ್ ಹಾಗೂ 4 ಸಿಕ್ಸರ್​ಗಳ ನೆರವಿನಿಂದ 109 ರನ್ ಪೇರಿಸಿದರು. ಜೆನ್ಸನ್​ 42 ಎಸೆತಕ್ಕೆ 3 ಫೋರ್​ ಹಾಗೂ 6 ಸಿಕ್ಸರ್ ಬಾರಿಸಿ 75 ರನ್ ಬಾರಿಸಿದರು. ಕೊನೇ 10 ಓವರ್​ಗಳಲ್ಲಿ ದ. ಆಫ್ರಿಕಾ ತಂಡ 143 ರನ್​ ಬಾರಿಸಿ ಮಿಂಚಿತು. 399 ರನ್​ಗಳು ಇಂಗ್ಲೆಂಡ್ ವಿರುದ್ಧ ಏಕ ದಿನ ಕ್ರಿಕೆಟ್​ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಮೊತ್ತವಾಗಿದೆ.

Exit mobile version