ನವದೆಹಲಿ: ಬಿಸಿಸಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ತೆರಿಗೆ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್ ಟೂರ್ನಿ ಇಂಗ್ಲೆಂಡ್ಗೆ ಸ್ಥಾಳಾಂತರ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಐಸಿಸಿ ನಿಯಮ ಪ್ರಕಾರ ವಿಶ್ವ ಕಪ್ ಆತಿಥ್ಯ ಪಡೆಯುವ ದೇಶ ಸರ್ಕಾರದಿಂದ ತೆರಿಗೆ ವಿನಾಯಿತಿ ಕೊಡಿಸಬೇಕು. ಆದರೆ ಕೇಂದ್ರ ಸರ್ಕಾರ ಶೇ.21ರಷ್ಟು ಹೆಚ್ಚುವರಿ ಶುಲ್ಕ ವಿಧಿಸುವ ನಿರ್ಧಾರದಿಂದ ಇನ್ನೂ ಹಿಂದೆ ಸರಿಯದ ಕಾರಣ ವಿಶ್ವ ಕಪ್ ಆತಿಥ್ಯ ಬಿಸಿಸಿಐ ಕೈ ತಪ್ಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಮಧ್ಯೆ ಈ ಸಮಸ್ಯೆ ಬಗೆಹರಿಯದೇ ಹೋದರೆ 2023ರ ವಿಶ್ವ ಕಪ್ ಆತಿಥ್ಯ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಸಿಗಲಿದೆ ಎಂದು ವರದಿಯಾಗಿದೆ.
2016ರ ಟಿ20 ವಿಶ್ವ ಕಪ್ಗೆ ಭಾರತ ಆತಿಥ್ಯ ವಹಿಸಿದಾಗಲೂ ಕೇಂದ್ರ ಸರ್ಕಾರ ವಿನಾಯಿತಿ ನೀಡಿರಲಿಲ್ಲ. ಇದರಿಂದ ಬಿಸಿಸಿಐಗೆ 190 ಕೋಟಿ. ರೂ ನಷ್ಟವಾಗಿತ್ತು. ಈ ವಿಚಾರವಾಗಿ ಬಿಸಿಸಿಐ ಈಗಲೂ ಕಾನೂನು ಹೋರಾಟ ನಡೆಸುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಇದೀಗ 2023ರ ವಿಶ್ವಕಪ್ಗೆ ತೆರಿಗೆ ವಿನಾಯಿತಿ ಸಿಗದೇ ಹೋದರೆ ಬಿಸಿಸಿಐಗೆ 950 ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಏಕ ದಿನ ವಿಶ್ವಕಪ್ ಆತಿಥ್ಯ ವಹಿಸಿರುವ ಭಾರತ, ಈ ಮಹತ್ವದ ಕೂಟವನ್ನು ಯಶಸ್ವಿಯಾಗಿ ನಡೆಸಬೇಕಿದ್ದರೆ ತೆರಿಗೆ ಸಂಬಂಧಿತ ಸಮಸ್ಯೆಗೆ ಸಮಯೋಚಿತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಇನ್ನು ಈ ವಿಚಾರವಾಗಿ ಐಸಿಸಿಯ ಹಣಕಾಸು ಸಮಿತಿಯ ಮುಖ್ಯಸ್ಥರಾಗಿರುವ ಜಯ್ ಶಾ ಕೇಂದ್ರ ಸರ್ಕಾರ ಮತ್ತು ಐಸಿಸಿ ನಡುವಿನ ತೆರಿಗೆ ತಿಕ್ಕಾಟಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | BCCI | ಟೀಮ್ ಇಂಡಿಯಾ ಆಟಗಾರರ ವಾರ್ಷಿಕ ವೇತನ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ; ಸೂರ್ಯ, ಹಾರ್ದಿಕ್ಗೆ ಬಡ್ತಿ ಸಾಧ್ಯತೆ