ICC World Cup 2023| ತೆರಿಗೆ ಸಮಸ್ಯೆ; ಏಕದಿನ ವಿಶ್ವಕಪ್ ಆತಿಥ್ಯ ಕೈಜಾರುವ ಭೀತಿಯಲ್ಲಿ ಬಿಸಿಸಿಐ! - Vistara News

ಕ್ರಿಕೆಟ್

ICC World Cup 2023| ತೆರಿಗೆ ಸಮಸ್ಯೆ; ಏಕದಿನ ವಿಶ್ವಕಪ್ ಆತಿಥ್ಯ ಕೈಜಾರುವ ಭೀತಿಯಲ್ಲಿ ಬಿಸಿಸಿಐ!

ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ಸಿಗದ ಕಾರಣ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್​ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಗೆ ಸಿಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

VISTARANEWS.COM


on

ICC World Cup 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಬಿಸಿಸಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ತೆರಿಗೆ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್​ ಟೂರ್ನಿ ಇಂಗ್ಲೆಂಡ್​ಗೆ ಸ್ಥಾಳಾಂತರ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಐಸಿಸಿ ನಿಯಮ ಪ್ರಕಾರ ವಿಶ್ವ ಕಪ್​ ಆತಿಥ್ಯ ಪಡೆಯುವ ದೇಶ ಸರ್ಕಾರದಿಂದ ತೆರಿಗೆ ವಿನಾಯಿತಿ ಕೊಡಿಸಬೇಕು. ಆದರೆ ಕೇಂದ್ರ ಸರ್ಕಾರ ಶೇ.21ರಷ್ಟು ಹೆಚ್ಚುವರಿ ಶುಲ್ಕ ವಿಧಿಸುವ ನಿರ್ಧಾರದಿಂದ ಇನ್ನೂ ಹಿಂದೆ ಸರಿಯದ ಕಾರಣ ವಿಶ್ವ ಕಪ್​ ಆತಿಥ್ಯ ಬಿಸಿಸಿಐ ಕೈ ತಪ್ಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಮಧ್ಯೆ ಈ ಸಮಸ್ಯೆ ಬಗೆಹರಿಯದೇ ಹೋದರೆ 2023ರ ವಿಶ್ವ ಕಪ್​ ಆತಿಥ್ಯ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಗೆ ಸಿಗಲಿದೆ ಎಂದು ವರದಿಯಾಗಿದೆ.

2016ರ ಟಿ20 ವಿಶ್ವ ಕಪ್​ಗೆ ಭಾರತ ಆತಿಥ್ಯ ವಹಿಸಿದಾಗಲೂ ಕೇಂದ್ರ ಸರ್ಕಾರ ವಿನಾಯಿತಿ ನೀಡಿರಲಿಲ್ಲ. ಇದರಿಂದ ಬಿಸಿಸಿಐಗೆ 190 ಕೋಟಿ. ರೂ ನಷ್ಟವಾಗಿತ್ತು. ಈ ವಿಚಾರವಾಗಿ ಬಿಸಿಸಿಐ ಈಗಲೂ ಕಾನೂನು ಹೋರಾಟ ನಡೆಸುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಇದೀಗ 2023ರ ವಿಶ್ವಕಪ್​ಗೆ ತೆರಿಗೆ ವಿನಾಯಿತಿ ಸಿಗದೇ ಹೋದರೆ ಬಿಸಿಸಿಐಗೆ 950 ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಏಕ ದಿನ ವಿಶ್ವಕಪ್​ ಆತಿಥ್ಯ ವಹಿಸಿರುವ ಭಾರತ, ಈ ಮಹತ್ವದ ಕೂಟವನ್ನು ಯಶಸ್ವಿಯಾಗಿ ನಡೆಸಬೇಕಿದ್ದರೆ ತೆರಿಗೆ ಸಂಬಂಧಿತ ಸಮಸ್ಯೆಗೆ ಸಮಯೋಚಿತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಇನ್ನು ಈ ವಿಚಾರವಾಗಿ ಐಸಿಸಿಯ ಹಣಕಾಸು ಸಮಿತಿಯ ಮುಖ್ಯಸ್ಥರಾಗಿರುವ ಜಯ್​ ಶಾ ಕೇಂದ್ರ ಸರ್ಕಾರ ಮತ್ತು ಐಸಿಸಿ ನಡುವಿನ ತೆರಿಗೆ ತಿಕ್ಕಾಟಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | BCCI | ಟೀಮ್​ ಇಂಡಿಯಾ ಆಟಗಾರರ ವಾರ್ಷಿಕ ವೇತನ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ; ಸೂರ್ಯ​, ಹಾರ್ದಿಕ್​ಗೆ ಬಡ್ತಿ ಸಾಧ್ಯತೆ​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup : ಒಮನ್ ವಿರುದ್ಧ 8 ವಿಕೆಟ್​ ಜಯ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್​

T20 World Cup :ಟಿ20 ವಿಶ್ವಕಪ್​ ಪಂದ್ಯವೊಂದನ್ನು 100 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳು (101 ಎಸೆತಗಳು) ಬಾಕಿ ಇರುವಾಗಲೇ ಗೆದ್ದ ಮೊದಲ ಟೆಸ್ಟ್ ಆಡುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಬೇಗನೆ ಪಂದ್ಯವನ್ನು ಮುಗಿಸಲು ನಿರ್ಧರಿಸಿದ ಬಳಿಕ ಇಂಗ್ಲೆಂಡ್ ಕೇವಲ 3.1 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ ಜಯ ಶಾಲಿಯಾಯಿತು.

VISTARANEWS.COM


on

T20 World Cup
Koo

ಬೆಂಗಳೂರು: ಟಿ 20 ವಿಶ್ವಕಪ್ 2024 ರ (T20 World Cup) ಗ್ರೂಪ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಎದುರಾಳಿ ಒಮನ್​ ತಂಡವನ್ನು ಕೇವಲ 47 ರನ್​ಗಳಿಗೆ ಆಲೌಟ್ ಮಾಡಿತು ಮತ್ತು ನಂತರ 101 ಎಸೆತಗಳು ಮತ್ತು 8 ವಿಕೆಟ್​ಗಳು ಬಾಕಿ ಇರುವಾಗ ಗುರಿಯನ್ನು ಬೆನ್ನಟ್ಟಿತು. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆದಿಲ್ ರಶೀದ್ 4 ವಿಕೆಟ್ ಪಡೆದರೆ, ಮಾರ್ಕ್ ವುಡ್ ಹಾಗೂ ಜೋಫ್ರಾ ಆರ್ಚರ್ ತಲಾ 3 ವಿಕೆಟ್ ಪಡೆದರು. ಅಂದ ಹಾಗೆ ಈ ಫಲಿತಾಂಶ ಇಂಗ್ಲೆಂಡ್ ಪಾಲಿಗೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಲು ನೆರವಾಯಿತು.

ಟಿ20 ವಿಶ್ವಕಪ್​ ಪಂದ್ಯವೊಂದನ್ನು 100 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳು (101 ಎಸೆತಗಳು) ಬಾಕಿ ಇರುವಾಗಲೇ ಗೆದ್ದ ಮೊದಲ ಟೆಸ್ಟ್ ಆಡುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಜೋಸ್ ಬಟ್ಲರ್ ಮತ್ತು ಫಿಲ್ ಸಾಲ್ಟ್ ಬೇಗನೆ ಪಂದ್ಯವನ್ನು ಮುಗಿಸಲು ನಿರ್ಧರಿಸಿದ ಬಳಿಕ ಇಂಗ್ಲೆಂಡ್ ಕೇವಲ 3.1 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ ಜಯ ಶಾಲಿಯಾಯಿತು.

ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ತಂಡಗಳ ಗ್ರೂಪ್ ಸಿ ಟೇಬಲ್​​ನಲ್ಲಿ ಆಸ್ಟ್ರೇಲಿಯಾ ಮತ್ತು ಎರಡನೇ ಸ್ಥಾನದಲ್ಲಿರುವ ಸ್ಕಾಟ್ಲೆಂಡ್ ನಂತರ ಮೂರನೇ ಸ್ಥಾನಕ್ಕೆ ಏರಿತು. ಎಲ್ಲಕ್ಕಿಂತ ಮುಖ್ಯವಾಗಿ, ಇಂಗ್ಲೆಂಡ್​​ನ ನೆಟ್ ರನ್ ರೇಟ್ ಸ್ಕಾಟ್ಲೆಂಡ್​​ಗಿಂತ ಅಧಿಕವಾಗಿದೆ. ಇಂಗ್ಲೆಂಡ್​​ನ ನೆಟ್ ರನ್ ರೇಟ್ +3.018 ಕ್ಕೆ ಏರಿತು. ಆದಾಗ್ಯೂ, ಅವರ ಸೂಪರ್​ 8 ಅವಕಾಶಗಳು ಇಕ್ಕಟ್ಟಿನಲ್ಲಿದೆ.

ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಒಮಾನ್ ಮತ್ತು ನಮೀಬಿಯಾವನ್ನು ಸೋಲಿಸಿದ ಸ್ಕಾಟ್ಲೆಂಡ್ ತಂಡ 3 ಪಂದ್ಯಗಳಲ್ಲಿ 5 ಅಂಕಗಳನ್ನು ಹೊಂದಿದೆ. ಇಂಗ್ಲೆಂಡ್​ ಸೂಪರ್​ ಹಂತಕ್ಕೇರಲು ಸ್ಕಾಟ್ಲೆಂಡ್ ಗ್ರೂಪ್ ಬಿಯ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಬೇಕು ಹಾಗೂ ಇಂಗ್ಲೆಂಡ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಬೇಕಾಗುತ್ತದೆ. ಆಂಟಿಗುವಾದಲ್ಲಿ ನಮೀಬಿಯಾ ವಿರುದ್ಧದ ಇಂಗ್ಲೆಂಡ್ ಪಂದ್ಯಕ್ಕೂ ಮುನ್ನ ಸ್ಕಾಟ್ಲೆಂಡ್ ಶನಿವಾರ ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಇಂಗ್ಲೆಂಡ್-ಒಮಾನ್ ಪಂದ್ಯದ ವಿವರಣೆ ಹೀಗಿದೆ

ಜೋಸ್ ಬಟ್ಲರ್ ಕೇವಲ 8 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರು. ಅವರ ಇನಿಂಗ್ಸ್​​ನಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಅವರು ಇಂಗ್ಲೆಂಡ್ ತಂಡಕ್ಕೆ ಕೇವಲ 3.1 ಓವರ್​ಗಳಲ್ಲಿ ಮೊತ್ತವನ್ನು ಬೆನ್ನಟ್ಟಲು ಸಹಾಯ ಮಾಡಿದರು. ಫಿಲ್ ಸಾಲ್ಟ್ 2 ಸಿಕ್ಸರ್ ಸಮೇತ 12 ರನ್ ಗಳಿಸಿದರು. ಸಾಲ್ಟ್ ಕೇವಲ 3 ಎಸೆತಗಳಲ್ಲಿ ಎರಡು ಸಿಕ್ಸರ್​​ ಬಾರಿಸಿದರು ಮತ್ತು ನಂತರ ಬಿಲಾಲ್ ಖಾನ್ ಎಸೆದ ಮೊದಲ ಓವರ್​ನ ಮೂರನೇ ಎಸೆತದಲ್ಲಿ ಔಟಾದರು.

ಇಂಗ್ಲೆಂಡ್ ನಂತರದಲ್ಲಿ ಬಂದ ವಿಲ್ ಜಾಕ್ಸ್ ಅವರನ್ನು 5 ರನ್ ಗಳಿಗೆ ಕಳೆದುಕೊಂಡಿತು. ಆರ್​ಸಿಬಿಯ ಬ್ಯಾಟ್ಸ್ಮನ್ ಅಬ್ಬರಿಸಲು ಯತ್ನಿಸಿದರೂ ಕಲೀಮುಲ್ಲಾ ಎಸೆತಕ್ಕೆ ಔಟಾದರು. ಆದರೆ, ಒಮಾನ್ ತಂಡವು ಉತ್ಸಾಹಭರಿತ ಇಂಗ್ಲೆಂಡ್ ವಿರುದ್ಧ ಸಂಪೂರ್ಣವಾಗಿ ಶರಣಾಯಿತು. ಜಾನಿ ಬೈರ್ಸ್ಟೋವ್ ಅಜೇಯ 8 ರನ್ ಬಾರಿದರು.

ಇಂಗ್ಲೆಂಡ್ ಭರ್ಜರಿ ಗೆಲುವು


ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅಧಿಕ ಎಸೆತಗಳು ಉಳಿದಿರುವಂತೆ (101 ಎಸೆತ) ಗೆಲುವು ದಾಖಲಿಸಿದ ಜಂಟಿ ಆರನೇ ತಂಡವಾಯಿತು ಇಂಗ್ಲೆಂಡ್​. ಫೆಬ್ರವರಿ 2023 ರಲ್ಲಿ ಕೇವಲ 2 ಎಸೆತಗಳಲ್ಲಿ 11 ರನ್​ಗಳನ್ನು ಬೆನ್ನಟ್ಟಿದ ಐಲ್ ಆಫ್ ಮ್ಯಾನ್ ವಿರುದ್ಧದ ಸ್ಪೇನ್ ಈ ವಿಚಾರದಲ್ಲಿ ವಿಶ್ವ ದಾಖಲೆ ಹೊಂದಿದೆ. ಸ್ಪೇನ್​ 118 ಎಸೆತ ಬಾಕಿ ಇರುವಂತೆಯೇ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: Anushka Sharma: ಕೊಹ್ಲಿಯಂತೆ ತಾಳ್ಮೆ ಕಳೆದುಕೊಂಡ ಪತ್ನಿ ಅನುಷ್ಕಾ; ವಿಡಿಯೊ ವೈರಲ್​

2014ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ 5 ಓವರ್​ಗಳಲ್ಲಿ 40 ರನ್​ಗಳನ್ನು ಚೇಸ್ ಮಾಡಿದಾಗ ಟಿ20ಐ ಕ್ರಿಕೆಟ್​​ನಲ್ಲಿ ಉಳಿದಿರುವ ಎಸೆತಗಳ ವಿಷಯದಲ್ಲಿ ಟೆಸ್ಟ್ ಆಡುವ ರಾಷ್ಟ್ರದ ಅತಿದೊಡ್ಡ ಗೆಲುವಿನ ದಾಖಲೆ ಮಾಡಿತ್ತು.

ಒಮಾನ್ 47 ರನ್ ಗಳಿಗೆ ಆಲೌಟ್ ಆಗಿದ್ದು ಹೇಗೆ?

ಒಮಾನ್ ಬ್ಯಾಟರ್​ಗಳು ಇಂಗ್ಲೆಂಡ್​​ನ ಬೌಲಿಂಗ್ ದಾಳಿಯ ಗುಣಮಟ್ಟಕ್ಕೆ ಸರಿಸಾಟಿಯಾಗಲಿಲ್ಲ. ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಜೋಡಿಯ ವೇಗಕ್ಕೆ ತತ್ತರಿಸಿದ ಒಮಾನ್ 4 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತು. ಒಮಾನ್ ನಿರಂತರವಾಗಿ 150 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗದ ಬೌಲಿಂಗ್​ ಎದುರಿಸುವ ಸಾಮರ್ಥ್ಯ ಹೊಂದಿಲ್ಲ.

ಪುರುಷರ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಒಮಾನ್ ಗಳಿಸಿದ 47 ರನ್ ನಾಲ್ಕನೇ ಕನಿಷ್ಠ ಮೊತ್ತ. ಅಲ್ಲದೇ ವಿಶ್ವ ಕಪ್​ನಲ್ಲಿ ಪಂದ್ಯಾವಳಿಯಲ್ಲಿ ಅವರ ಕನಿಷ್ಠ ಮೊತ್ತವಾಗಿದೆ. ಇದು ಪುರುಷರ ಟಿ 20 ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ತಂಡವೊಂದು ಗಳಿಸಿದ ಕನಿಷ್ಠ ರನ್​ ಕೂಡ ಹೌದು.

ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ ಎರಡು ವಿಕೆಟ್ ಪಡೆದರೆ, ಓಮನ್ ಆರಂಭಿಕ ಆಟಗಾರರಾದ ಪ್ರತೀಕ್ ಅಠಾವಳೆ, ಪ್ರಜಾಪತಿ ಕಶ್ಯಪ್, ನಾಯಕ ಅಕಿಬ್ ಇಲ್ಯಾಸ್ ಮತ್ತು ಜೀಶಾನ್ ಮಕ್ಸೂದ್ ಸೇರಿದಂತೆ ಎಲ್ಲರೂ ಒಂದಂಕಿಮೊತ್ತಕ್ಕೆ ಔಟಾದರು.

Continue Reading

ಕ್ರೀಡೆ

Rohit Sharma: ನ್ಯೂಯಾರ್ಕ್‌ ಪಿಚ್‌ನಲ್ಲಿ ಆಡುವುದು ಸುಲಭವಲ್ಲ ಎಂದ ರೋಹಿತ್​

Rohit Sharma: ಅಮೆರಿಕ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ರೋಹಿತ್​, ನಾವು ಮೂರು ಪಂದ್ಯಗಳನ್ನು ಗೆದ್ದಿರಬಹುದು ಆದರೆ ಈ ಪಂದ್ಯ ಗೆಲ್ಲಲು ನಾವು ಪಟ್ಟ ಕಷ್ಟ ನಮ್ಮ ತಂಡದ ಆಟಗಾರರಿಗೆ ಮಾತ್ರ ಗೊತ್ತು. ಇಲ್ಲಿ ಯಾವ ತಂಡ ಗೆಲ್ಲಬಹುದು ಎನ್ನುವುದನ್ನು ಊಹಿಸಲು ಕೂಡ ಅಸಾಧ್ಯ. ನಮ್ಮ ತಂಡದ ಗೆಲುವು ಅಷ್ಟು ಸುಲಭವಾಗಿರಲಿಲ್ಲ” ಎಂದು ಹೇಳಿದರು.

VISTARANEWS.COM


on

Rohit Sharma
Koo

ನ್ಯೂಯಾರ್ಕ್​: ಸತತ ಮೂರು ಗೆಲುವು ಸಾಧಿಸಿ ಸೂಪರ್​-8 ಪ್ರವೇಶ ಪಡೆದಿದ್ದರೂ ಕೂಡ ಟೀಮ್​ ಇಂಡಿಯಾದ(Team India) ನಾಯಕ ರೋಹಿತ್​ ಶರ್ಮ(Rohit Sharma) ಅವರು ನ್ಯೂಯಾರ್ಕ್​ನಲ್ಲಿ ಆಡಿದ್ದು ನಿಜಕ್ಕೂ ಸವಾಲಿನಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಅಮೆರಿಕ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ರೋಹಿತ್​, ನಾವು ಮೂರು ಪಂದ್ಯಗಳನ್ನು ಗೆದ್ದಿರಬಹುದು ಆದರೆ ಈ ಪಂದ್ಯ ಗೆಲ್ಲಲು ನಾವು ಪಟ್ಟ ಕಷ್ಟ ನಮ್ಮ ತಂಡದ ಆಟಗಾರರಿಗೆ ಮಾತ್ರ ಗೊತ್ತು. ಇಲ್ಲಿ ಯಾವ ತಂಡ ಗೆಲ್ಲಬಹುದು ಎನ್ನುವುದನ್ನು ಊಹಿಸಲು ಕೂಡ ಅಸಾಧ್ಯ. ನಮ್ಮ ತಂಡದ ಗೆಲುವು ಅಷ್ಟು ಸುಲಭವಾಗಿರಲಿಲ್ಲ” ಎಂದು ಹೇಳಿದರು.

ರೋಹಿತ್​ ಅವರು ಈ ಹಿಂದೆಯೇ ನಸೌ ಪಿಚ್​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಪಿಚ್​ ಮತ್ತು ಮೈದಾನ ಕ್ರಿಕೆಟ್​ ಆಡಲು ಸೂಕ್ತವಾಗಿಲ್ಲ. ಆಟಗಾರರು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಿದ್ದರು. ಭಾರತ ಸೂಪರ್​-8 ಹಂತದ ಪಂದ್ಯಗಳನ್ನು ಕೂಡ ಇಲ್ಲೇ ಆಡಲಿದೆ. ಇದು ಭಾರತಕ್ಕೆ ದೊಡ್ಡ ಚಿಂತೆಗೀಡು ಮಾಡಿದೆ. ಸೂಪರ್​-8 ಹಂತದಲ್ಲಿ ಬಲಿಷ್ಠ ತಂಡಗಳ ಸವಾಲು ಎದುರಾಗಲಿದೆ.

ಇದನ್ನೂ ಓದಿ Rajal Arora: ಟೀಮ್​ ಇಂಡಿಯಾ ಜತೆಗಿರುವ ಏಕೈಕ ಮಹಿಳಾ ಸಿಬ್ಬಂದಿ ಯಾರು? ಇವರ ಕೆಲಸವೇನು?

ನ್ಯೂಯಾರ್ಕ್‌ ಪಿಚ್‌ ವಿರುದ್ಧ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಐಸಿಸಿಗೆ ಅನಧಿಕೃತ ದೂರು ಕೂಡ ನೀಡಿದೆ. ಅಪಾಯಕಾರಿ ಪಿಚ್‌ನಲ್ಲಿ ರೋಹಿತ್​ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಇದು ಮಾತ್ರವದಲ್ಲದೆ ಹಲವು ಆಟಗಾರರ ಬ್ಯಾಟ್​ ಕೂಡ ಮುರಿದಿತ್ತು. ಚೆಂಡು ಯಾವ ರೀತಿ ಪುಡಿದೇಳುತ್ತದೆ ಎನ್ನುವುದನ್ನು ಬ್ಯಾಟರ್​ಗಳಿಗೆ ಊಹಿಸಲು ಸಾಧ್ಯವಾಗುತ್ತಿಲ್ಲ. ಇದುವರೆಗೂ ಇಲ್ಲಿ ನಡೆದ ಪಂದ್ಯಗಳಲ್ಲಿ ಕನಿಷ್ಠ 120ರ ಗಡಿ ಕೂಡ ದಾಟಿಲ್ಲ.

ಅಡಿಲೇಡ್‌ ಓವಲ್‌ ನ ಗ್ರೌಂಡ್ಸ್‌ಮ್ಯಾನ್‌ ಡೇಮಿಯನ್‌ ಹ್ಯೂಗ್‌ ಅವರ ಉಸ್ತುವಾರಿಯಲ್ಲಿ ಇಲ್ಲಿನ ಟ್ರ್ಯಾಕ್‌ ನಿರ್ಮಾಣಗೊಂಡರೂ ಇದು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅನಿರೀಕ್ಷಿತ ಬೌನ್ಸ್‌ ಬ್ಯಾಟರ್‌ಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಸೂಪರ್​-8ಗೆ ಲಗ್ಗೆಯಿಟ್ಟ ಭಾರತ


ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

Continue Reading

ಕ್ರೀಡೆ

Rajal Arora: ಟೀಮ್​ ಇಂಡಿಯಾ ಜತೆಗಿರುವ ಏಕೈಕ ಮಹಿಳಾ ಸಿಬ್ಬಂದಿ ಯಾರು? ಇವರ ಕೆಲಸವೇನು?

Rajal Arora: ಕೆಎಲ್ ರಾಹುಲ್ ಅವರ ಪತ್ನಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ರಾಜಲ್​ ಅರೋರಾ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರಿಬ್ಬರೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಶಾಂತ್ ಶರ್ಮಾ ಪತ್ನಿ ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.

VISTARANEWS.COM


on

Rajal Arora
Koo

ನ್ಯೂಯಾರ್ಕ್​: ಟೀಮ್​ ಇಂಡಿಯಾ ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವು ಸಾಧಿಸಿ ಈಗಾಗಲೇ ಸೂಪರ್​-8 ಹಂತಕ್ಕೇರಿದೆ. ಆದರೆ, ಟೀಮ್​ ಇಂಡಿಯಾ(Team India) ಕೋಚಿಂಗ್​ ಸಿಬ್ಬಂದಿಗಳ ಜತೆ ಮಹಿಳಾ ಅಧಿಕಾರಿಯೊಬ್ಬರು ಕೂಡ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿ. ಈಕೆ ಯಾರು? ಇವರಿಗೆ ಟೀಮ್​ ಇಂಡಿಯಾದಲ್ಲಿ ಏನು ಕೆಲಸ? ಎನ್ನುವ ವಿಚಾರ ತಿಳಿದುಕೊಳ್ಳಲು ತಿಳಿದುಕೊಳ್ಳವ ತವಕದಲ್ಲಿದ್ದಾರೆ.


ಹೌದು, ಇವರ ಹೆಸರು ರಾಜಲ್​ ಅರೋರಾ. ಈಕೆ ಭಾರತೀಯ ಕ್ರಿಕೆಟ್ ತಂಡದ ಸಾಮಾಜಿಕ ಮಾಧ್ಯಮ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಣೆಯ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಷನ್ಸ್‌ನಿಂದ ಪದವಿಯನ್ನು ಪೂರ್ಣಗೊಳಿಸಿ. ಕಂಟೆಂಟ್ ರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅರೋರಾ, 2015ರಲ್ಲಿ ಬಿಸಿಸಿಐಗೆ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕರಾಗಿ ಸೇರಿಕೊಂಡರು. ಅಂದಿನಿಂದ ಇಂದಿನವರೆಗೆ ಭಾರತ ತಂಡ ಎಲ್ಲೇ ಸರಣಿ ಆಡಲು ಪ್ರವಾಸ ಕೈಗೊಂಡಾಗ ತಂಡದ ಜತೆ ಪ್ರಮಾಣಿಸುತ್ತಾರೆ. ಆಟಗಾರರು ಅಭ್ಯಾಸ ನಡೆಸುವ ಸುದ್ದಿಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮದ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.


ಭಾರತ ತಂಡದ ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ ಬಿಸಿಸಿಐನ ಆಂತರಿಕ ದೂರು ಸಮಿತಿಯ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಆಟಗಾರರ ದುರ್ವರ್ತನೆಯ ವಿರುದ್ಧದ ದೂರುಗಳನ್ನು ಅವರು ಮೇಲ್ವಿಚಾರಣೆ ಮಾಡುತ್ತಾರೆ.


ಅರೋರಾ ಅವರು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದಾರೆ. ಪ್ರತಿ ಸರಣಿಗೂ ಮುನ್ನ ಆಟಗಾರರು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಅರೋರಾ ಪ್ರಮುಖ ಪಾತ್ರ ವಹಿಸುತ್ತಾರೆ. ತಂಡದ ಸದಸ್ಯರಿಗೆ ಅಗತ್ಯವಿರುವಂತೆ ಸಹಾಯ ಮಾಡುವಲ್ಲಿ ಸಹಾಯಕ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ. ಐಪಿಎಲ್​ನಲ್ಲಿಯೂ ಇವರು ಬಿಸಿಸಿಐ ಪರ ಕಾರ್ಯನಿರ್ವಹಿಸುತ್ತಾರೆ.

ಇದನ್ನೂ ಓದಿ IND vs USA: ಕೊಹ್ಲಿಯ ವಿಕೆಟ್​ ಪತನ ಕಂಡು ದಂಗಾದ ರೋಹಿತ್​ ಶರ್ಮ; ವಿಡಿಯೊ ವೈರಲ್​


ಕೆಎಲ್ ರಾಹುಲ್ ಅವರ ಪತ್ನಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ರಾಜಲ್​ ಅರೋರಾ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರಿಬ್ಬರೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಶಾಂತ್ ಶರ್ಮಾ ಪತ್ನಿ ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.


ಸೂಪರ್​-8ಗೆ ಲಗ್ಗೆಯಿಟ್ಟ ಭಾರತ


ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

Continue Reading

ಕ್ರೀಡೆ

IND vs USA: ಕೊಹ್ಲಿಯ ವಿಕೆಟ್​ ಪತನ ಕಂಡು ದಂಗಾದ ರೋಹಿತ್​ ಶರ್ಮ; ವಿಡಿಯೊ ವೈರಲ್​

IND vs USA: 2012ರಿಂದ ಟಿ20 ವಿಶ್ವಕಪ್​ ಆಡಲು ಆರಂಭಿಸಿದ ವಿರಾಟ್​ ಒಮ್ಮೆಯೂ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿರಲಿಲ್ಲ. ಕನಿಷ್ಠ ಒಂದು ರನ್​ ಆದರೂ ಗಳಿಸಿದ್ದರು.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡಿದ್ದನ್ನು ನೋಡಿ ನಾನ್​ ಸ್ಟ್ರೈಕ್​ನಲ್ಲಿ ನಾಯಕ ರೋಹಿತ್​ ಶರ್ಮ(Rohit Sharma) ಒಂದು ಕ್ಷಣ ದಂಗಾದರು. ಈ ವಿಡಿಯೊ ವೈರಲ್​ ಆಗಿದೆ. ಭಾರತೀಯ ಮೂಲದ, ಅಂಡರ್​-19 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಪರ ಆಡಿದ್ದ ಎಡಗೈ ವೇಗಿ ಸೌರಭ್ ನೇತ್ರವಲ್ಕರ್ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ ವಿಕೆಟ್​ ಪತನಗೊಂಡಿತು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ನೇತ್ರವಲ್ಕರ್ ತಾವೆಸೆದ ಮೊದಲ ಎಸೆತದಲ್ಲೇ ಮೊಹಮ್ಮದ್​ ರಿಜ್ವಾನ್​ ವಿಕೆಟ್​ ಕಿತ್ತಿದ್ದರು. 2 ವಿಕೆಟ್​ ಪತನದ ವಿಡಿಯೊವನ್ನು ಕೊಲಾಜ್​ ಮಾಡಿ ಐಸಿಸಿ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ.

ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಡಕ್(Virat Kohli Golden Duck)​ ಆಗುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಗೋಲ್ಡನ್​ ಡಕ್​ ಆಗ ಅವಮಾನಕ್ಕೆ ಸಿಲುಕಿದರು. 2012ರಿಂದ ಟಿ20 ವಿಶ್ವಕಪ್​ ಆಡಲು ಆರಂಭಿಸಿದ ವಿರಾಟ್​ ಒಮ್ಮೆಯೂ ಗೋಲ್ಡನ್​ ಡಕ್​ ಸಂಕಟಕ್ಕೆ ಸಿಲುಕಿರಲಿಲ್ಲ. ಕನಿಷ್ಠ ಒಂದು ರನ್​ ಆದರೂ ಗಳಿಸಿದ್ದರು. ಕೊಹ್ಲಿ ಒಟ್ಟು 28 ಟಿ20 ವಿಶ್ವಕಪ್​ ಇನಿಂಗ್ಸ್​ ಆಡಿ 1146 ರನ್​ ಬಾರಿಸಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್​ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್​ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿಯ ಮೇಲೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ಭಾರೀ ನಿರೀಕ್ಷೆ ಇಡಲಾಗಿತ್ತು. ಆದರೆ ಕೊಹ್ಲಿ ಕಳಪೆ ಬ್ಯಾಟಿಂಗ್​ ಮೂಲಕ ಈ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. 1, 4,0 ಇದು ಕೊಹ್ಲಿಯ ಈ ಬಾರಿಯ ಸ್ಕೋರ್​ ಆಗಿದೆ.

ಇದನ್ನೂ ಓದಿ IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್​ ಬಾಲ್​ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್​ ಕಂಡಿರುವುದು. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರನ್ನು ಎಂದಿನಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಿಸುವುದು ಸೂಕ್ತ ಎನ್ನುವಂತಿದೆ.

Continue Reading
Advertisement
Wild Elephant
ಪ್ರಮುಖ ಸುದ್ದಿ6 mins ago

Wild Elephant : ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚರಿಸುವವರಿಗೆ ಎಚ್ಚರಿಕೆ; ಆಗಾಗ ಕಾಣಿಸಿಕೊಳ್ಳುತ್ತಿದೆ ಒಂಟಿ ಸಲಗ

Araku Valley Tour
ಪ್ರವಾಸ26 mins ago

Araku Valley Tour: ಆಂಧ್ರಪ್ರದೇಶದ ಅರಕು ವ್ಯಾಲಿ; ಹಲವು ಅದ್ಭುತಗಳ ಸಂಗಮ

T20 World Cup
ಪ್ರಮುಖ ಸುದ್ದಿ34 mins ago

T20 World Cup : ಒಮನ್ ವಿರುದ್ಧ 8 ವಿಕೆಟ್​ ಜಯ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್​

Junk Food Side Effects
ಆರೋಗ್ಯ47 mins ago

Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

Narendra Modi
ಪ್ರಮುಖ ಸುದ್ದಿ58 mins ago

Narendra Modi: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಯ ಅಪುಲಿಯಾಗೆ ತಲುಪಿದ ಪ್ರಧಾನಿ ಮೋದಿ

karnataka weather Forecast
ಮಳೆ1 hour ago

Karnataka Weather : ಬೆಂಗಳೂರಲ್ಲಿ ಮುಂದುವರಿಯಲಿದೆ ಭರ್ಜರಿ ಮಳೆ; ಈ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Amith Shah
ಪ್ರಮುಖ ಸುದ್ದಿ1 hour ago

Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

Leg Cramps At Night
ಆರೋಗ್ಯ2 hours ago

Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

Dina Bhavishya
ಭವಿಷ್ಯ3 hours ago

Dina Bhavishya: ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ

Jammu Kashmir
ದೇಶ8 hours ago

Jammu Kashmir: ಕಾಶ್ಮೀರದಲ್ಲಿ ಮತ್ತೊಂದು ದುರಂತ; ಸೇನಾ ವಾಹನ ಕಣಿವೆಗೆ ಬಿದ್ದು ಯೋಧ ಸಾವು, ನಾಲ್ವರಿಗೆ ಗಾಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌