Site icon Vistara News

ICC World Cup: ನಾಳೆ ಭಾರತ ವಿಶ್ವಕಪ್​ ಸಂಭಾವ್ಯ ತಂಡ ಪ್ರಕಟ; ರಾಹುಲ್​ಗೆ ಅವಕಾಶ

set to be in India's preliminary 15 member World Cup squad as the first choice wicketkeeper.

ಮುಂಬಯಿ: ಬಹುನಿರೀಕ್ಷಿತ ಏಕದಿನ ವಿಶ್ವಕಪ್​ಗೆ(ICC World Cup) ಆತಿಥೇಯ ಭಾರತ ತನ್ನ 15 ಮಂದಿ ಸಂಭಾವ್ಯ(icc world cup india squad) ಆಟಗಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ ಸಂಜು ಸ್ಯಾಮ್ಸನ್(sanju samson), ಪ್ರಸಿದ್ಧ್​ ಕೃಷ್ಣ, ತಿಲಕ್​ ವರ್ಮ ಅವರಿಗೆ ಈ ತಂಡದಲ್ಲಿ ಅವಕಾಶ ಸಿಗುವುದು ಖಚಿತವಿಲ್ಲ. ಭಾನುವಾರ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಿಂದ ಫಿಟ್‌ನೆಸ್‌ ಪ್ರಮಾಣಪತ್ರ ಪಡೆದಿರುವ ಕೆ.ಎಲ್. ರಾಹುಲ್(KL Rahul) ಅವರು ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.

ಟೂರ್ನಿ ಆರಂಭಕ್ಕೆ ಒಂದು ತಿಂಗಳು ಬಾಕಿ

ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್​(ICC World Cup) ಟೂರ್ನಿ ಆರಂಭಕ್ಕೆ ಇನ್ನು ಭರ್ತಿ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಟೂರ್ನಿ ಅಕ್ಟೋಬರ್​ 5 ರಿಂದ ಆಂಭವಾಗಿ ನವೆಂಬರ್​ 19ರ ತನಕ ನಡೆಯಲಿದೆ. ಉದ್ಘಾಟನ ಮತ್ತು ಫೈನಲ್​ ಪಂದ್ಯಗಳು ಅಹಮದಾಬಾದ್​ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ನಡೆಯಲಿದೆ. ಆತಿಥೇಯ ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್​ 8ರಂದು ಆಸ್ಟ್ರೇಲಿಯಾ ಎದುರು ಆಡಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ.

ಈಗಾಗಲೇ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಸಂಭಾವ್ಯ ತಂಡಗಳ ಪಟ್ಟಿಯನ್ನು ಪ್ರಕಟಿಸಿದೆ. ಇದೀಗ ಭಾರತವೂ ಮಂಗಳವಾರ ಸಂಭಾವ್ಯ ತಂಡಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಏಷ್ಯಾಕಪ್​ಗೆ ಪ್ರಕಟಿಸಿರುವ 17 ಮಂದಿಯ ತಂಡದಲ್ಲೇ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್, ಚಹಲ್ ಸೇರಿ ಕೆಲವು ಆಟಗಾರರನ್ನು ಹೆಚ್ಚುವರಿಯಾಗಿ ಅಂದರೆ ಸ್ಟ್ಯಾಂಡ್​ ಬೈ ಆಟಗಾರರಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಆಟಗಾರರು ಪ್ರಧಾನ ತಂಡದಲ್ಲಿ ಗಾಯಳುಗಳಾಗಿ ಯಾರಾದರು ಹೊರಬಿದ್ದಾಗ ಮುಖ್ಯ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ KL Rahul : ಕೆ. ಎಲ್​ ರಾಹುಲ್ ​ಫಿಟ್​ನೆಸ್​ ಕುರಿತ ಲೇಟೆಸ್ಟ್​ ಅಪ್​ಡೇಟ್​​ ಬಹಿರಂಗ

ರಾಹುಲ್​ಗೆ ಕೀಪಿಂಗ್​ ಹೊಣೆ ಸಾಧ್ಯತೆ

ಕಾರು ಅಪಘಾತದಲ್ಲಿ ರಿಷಭ್​ ಪಂತ್​ ಅವರು ತಂಡದಿಂದ ಹೊರಗಿರುವ ಕಾರಣ ವಿಕೆಟ್​ ಕೀಪಿಂಗ್​ ಆಗಿ ರಾಹುಲ್​ ಮೊದಲ ಆಯ್ಕೆಯಾಗಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಏಷ್ಯಾ ಕಪ್ ಟೂರ್ನಿಯಲ್ಲಿ ಆಡುವ ತಂಡಕ್ಕೆ ಆಯ್ಕೆಯಾಗಿದ್ದರೂ, ಮೊದಲೆರಡು ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಸೂಪರ್​ 4ನಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಸಂಭಾವ್ಯ ವಿಶ್ವಕಪ್​ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ಮೀಸಲು ಆಟಗಾರರು: ಸಂಜು ಸ್ಯಾಮ್ಸನ್‌,ಯಜುವೇಂದ್ರ ಚಹಲ್​, ಋತುರಾಜ್​ ಗಾಯಕ್ವಾಡ್​, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ,, 

Exit mobile version