ಬುಲವಾಯೊ: ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯಾವಳಿಯಲ್ಲಿ(ICC World Cup Qualifier) ಜಿಂಬಾಬ್ವೆ(Zimbabwe vs Oman) ತಂಡದ ಪ್ರಾಬಲ್ಯ ಮುಂದುವರಿದಿದೆ. ಗುರುವಾರ ರಾತ್ರಿ ನಡೆದ ಅತ್ಯಂತ ರೋಚಕ ಮೊದಲ ಸೂಪರ್-6(Super Sixes) ಪಂದ್ಯದಲ್ಲಿ ಒಮಾನ್ ವಿರುದ್ಧ ಆತಿಥೇಯ ಜಿಂಬಾಬ್ವೆ 14 ರನ್ನುಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೆ ನೆಗೆದಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಿಂಬಾಬ್ವೆ 7 ವಿಕೆಟ್ ನಷ್ಟಕ್ಕೆ 332 ರನ್ ಪೇರಿಸಿತು. ದೊಡ್ಡ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಒಮಾನ್ 9 ವಿಕೆಟಿಗೆ 318 ರನ್ ಬಾರಿಸಿ ವೀರೋಚಿತ ಸೋಲನುಭವಿಸಿತು. ಉಭಯ ತಂಡಗಳ ಆಟಗಾರರು ಶತಕ ಬಾರಿಸಿ ಮಿಂಚಿದ್ದು ಈ ಪಂದ್ಯದ ಪ್ರಮುಖ ಹೈಲೆಟ್ಸ್ ಆಗಿತ್ತು. ಜಿಂಬಾಬ್ವೆ ಪರ ಸೀನ್ ವಿಲಿಯಮ್ಸ್(Sean Williams) 142 ರನ್ ಬಾರಿಸಿದರೆ, ಒಮಾನ್ ತಂಡದ ಗುಜರಾತ್ ಮೂಲದ ಕಶ್ಯಪ್ ಪ್ರಜಾಪತಿ(Kashyap Prajapati) 103 ರನ್ ಬಾರಿಸಿದರು.
ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಮುನ್ನುಗ್ಗುತ್ತಿರುವ ಜಿಂಬಾಬ್ವೆ ವಿಶ್ವ ಕಪ್ಗೆ ಅರ್ಹತೆ ಪಡೆಯುವ ಎಲ್ಲ ಲಕ್ಷಣಗಳು ಎದ್ದು ತೋರುತ್ತಿವೆ. ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಅದರಲ್ಲೂ ಸೇನ್ ವಿಲಿಯಮ್ಸ್ ಮತ್ತು ಆಲ್ರೌಂಡರ್ ಸಿಕಂದರ್ ರಾಜಾ ಅವರು ಜಿದ್ದಿಗೆ ಬಿದ್ದವರಂತೆ ಪಂದ್ಯದಿಂದ ಪಂದ್ಯಕ್ಕೆ ಶ್ರೇಷ್ಠ ಪ್ರದರ್ಶನ ತೋರ್ಪಡಿಸಿಸುತ್ತಿದ್ದಾರೆ.
ಒಮಾನ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೀನ್ ವಿಲಿಯಮ್ಸನ್ 103 ಎಸೆತಗಳಿಂದ 14 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 142 ರನ್ ಬಾರಿಸಿದರು. ಈ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಿದರು. ಇದು ಈ ಟೂರ್ನಿಯಲ್ಲಿ ವಿಲಿಯಮ್ಸ್ ಸಿಡಿಸಿದ 3ನೇ ಶತಕ. ಕಳೆದ ಪಂದ್ಯದ ಗೆಲುವಿನ ಹೀರೊ ಸಿಕಂದರ್ ರಾಜಾ 42, ಲ್ಯೂಕ್ ಜೊಂಗ್ವೆ ಅಜೇಯ 43 ರನ್ ಹೊಡೆದರು. ಒಮಾನ್ ಪರ ಫಯಾಝ್ 79ಕ್ಕೆ 4 ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ IND VS ZIM | ಜಿಂಬಾಬ್ವೆಯನ್ನು ಮಣಿಸಿ ಸೆಮಿಫೈನಲ್‌ಗೇರುವ ತುಡಿತದಲ್ಲಿ ರೋಹಿತ್ ಪಡೆ
Sean Williams has been absolutely dominant in the #CWC23 Qualifier 🔥
— ICC Cricket World Cup (@cricketworldcup) June 30, 2023
📺 Highlights: https://t.co/E5mdYp9Vab pic.twitter.com/FpRSBHvKdO
ದೊಡ್ಡ ಮೊತ್ತವನ್ನು ಉತ್ತಮ ರೀತಿಯಲ್ಲೇ ಬೆನ್ನಟ್ಟಿಕೊಂಡು ಬಂದ ಒಮಾನ್ಗೆ ಕಶ್ಯಪ್ ಪ್ರಜಾಪತಿ 35ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಮಡು ಗೆಲುವು ವಿಶ್ವಾಸವೊಂದನ್ನು ಮೂಡಿಸಿದರು. ಆದರೆ ಇವರ ವಿಕೆಟ್ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. ಆಕಿಬ್ ಇಲ್ಯಾಸ್ (45) ಜತೆ 2ನೇ ವಿಕೆಟಿಗೆ 83 ರನ್ ಪೇರಿಸಿದ ಪ್ರಜಾಪತಿ ಅಂತಿಮವಾಗಿ 103 ರನ್ ಬಾರಿಸಿಸರು. ಉಳಿದಂತೆ ಅಯಾನ್ ಖಾನ್ 47 ರನ್ ಮಾಡಿದರು. ಜಿಂಬಾಬ್ವೆ ಪರ ಟೆಂಡೈ ಚಟಾರ ಮತ್ತು ಬ್ಲೆಸ್ಸಿಂಗ್ ಮುಜರಬನಿ ತಲಾ 3 ವಿಕೆಟ್ ಉರುಳಿಸಿದರು.