ಕ್ರಿಕೆಟ್
ICC World Cup Qualifiers: ಏಕದಿನ ಕ್ರಿಕೆಟ್ನಲ್ಲಿ ದಾಖಲೆಯ ಮೊತ್ತದ ಗೆಲುವು ಕಂಡ ಜಿಂಬಾಬ್ವೆ
ವಿಶ್ವ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ(ICC World Cup Qualifiers) ಜಿಂಬಾಬ್ವೆ ತಂಡ ಯುಎಸ್ಎ(Zimbabwe vs United States) ವಿರುದ್ಧ 304 ರನ್ ಗಳ ದಾಖಲೆಯ ಗೆಲುವು ದಾಖಲಿಸಿದೆ.
ಹರಾರೆ: ಐಸಿಸಿ ವಿಶ್ವ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ(ICC World Cup Qualifiers) ಜಿಂಬಾಬ್ವೆ ತಂಡ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಮೊತ್ತದಿಂದ ಗೆದ್ದ ವಿಶ್ವದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಯುಎಸ್ಎ(Zimbabwe vs United States) ವಿರುದ್ಧ 304 ರನ್ ಗಳ ದಾಖಲೆಯ ಗೆಲುವು ದಾಖಲಿಸಿತು. ಅತ್ಯಧಿಕ ಮೊತ್ತದಿಂದ ಗೆದ್ದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ. ಇದೇ ವರ್ಷ ಶ್ರೀಲಂಕಾ ವಿರುದ್ಧ ತಿರುವನಂತಪುರಂನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್ ಅಂತರದಿಂದ ಗೆಲುವು ಸಾಧಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ತಂಡ ನಾಯಕ ಸೀನ್ ವಿಲಿಯಮ್ಸ್(Sean Williams) ಅವರ ಅಮೋಘ ಆಟದ ನೆರವಿನಿಂದ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 408 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಯುಎಸ್ಎ ಬಿಗಿ ದಾಳಿಗೆ ನಲುಗಿ 25.1 ಓವರ್ ಗಳಲ್ಲಿ 104 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರಿ ಅಂತರದ ಸೋಲಿಗೆ ಸುತ್ತಾಯಿತು.
ಜಿಂಬಾಬ್ವೆ ಪರ ಆರಂಭಿಕ ಆಟಗಾರ ಜಾಯ್ಲಾರ್ಡ್ ಗುಂಬಿ 78 ರನ್, ಇನ್ನೋಸೆಂಟ್ ಕೈಯಾ 32 ರನ್ ಗಳಿಸಿದರೆ. ಬಳಿಕ ಬಂದ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಆಟವಾಡಿ 101 ಎಸೆತಗಳಲ್ಲಿ ಬರೋಬ್ಬರಿ 174 ರನ್ ಬಾರಿಸಿದರು. ಅವರ ಈ ಮನಮೋಹಕ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 21 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ಗಳು ಒಳಗೊಂಡಿದ್ದವು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಲ್ರೌಂಡರ್ ಸಿಂಕಂದರ್ ರಾಜಾ(Sikandar Raza) 48 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ರಿಯಾನ್ ಬರ್ಲ್ 17 ಎಸೆತಗಳಲ್ಲಿ 47 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಉತ್ತಮ ಕೊಡುಗೆ ನೀಡಿದರು. ಯುಎಸ್ಎ ಪರ ಅಭಿಷೇಕ್ ಪರಾಡ್ಕರ್ 3 ವಿಕೆಟ್ ಪಡೆದರು. ಜಸ್ದೀಪ್ ಸಿಂಗ್ 2, ನೋಸ್ತುಶ್ ಕೆಂಜಿಗೆ 1 ವಿಕೆಟ್ ಉರುಳಿಸಿದರು.
ಇದನ್ನೂ ಓದಿ ICC World Cup Qualifiers: ಕೈಲ್ ಫಿಲಿಪ್ ಬೌಲಿಂಗ್ಗೆ ನಿಷೇಧ ವಿಧಿಸಿದ ಐಸಿಸಿ
ಏಕದಿನದಲ್ಲಿ ಅತ್ಯಧಿಕ ರನ್ ಅಂತರದಿಂದ ಗೆದ್ದ ತಂಡಗಳು
ಭಾರತ vs ಶ್ರೀಲಂಕಾ (ಭಾರತದ ಗೆಲುವಿನ ಅಂತರ 317 ರನ್) ತಿರುವನಂತಪುರಂ, 2023
ಜಿಂಬಾಬ್ವೆ vs ಯುಎಸ್ಎ(ಜಿಂಬಾಬ್ವೆಯ ಗೆಲುವಿನ ಅಂತರ 304 ರನ್) ಹರಾರೆ, 2023
ನ್ಯೂಜಿಲ್ಯಾಂಡ್ vs ಐರ್ಲೆಂಡ್(ನ್ಯೂಜಿಲ್ಯಾಂಡ್ ಗೆಲುವಿನ ಅಂತರ 290 ರನ್) ಅಬರ್ಡೀನ್, 2008
ಆಸ್ಟ್ರೇಲಿಯಾ vs ಅಫಘಾನಿಸ್ತಾನ(ಆಸ್ಟ್ರೇಲಿಯಾ ಗೆಲುವಿನ ಅಂತರ 275 ರನ್) ಪರ್ತ್, 2015
ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ(ದಕ್ಷಿಣ ಆಫ್ರಿಕಾ ಗೆಲುವಿನ ಅಂತರ 272) ಬೆನೋನಿ, 2010
ಕ್ರಿಕೆಟ್
‘ಎಂದಿಗೂ ಬದಲಾಗಬೇಡ’ ನವೀನ್ ಉಲ್ ಹಕ್ಗೆ ಜನ್ಮದಿನದ ಶುಭಾಶಯ ಕೋರಿದ ಗಂಭೀರ್; ಹಾರೈಕೆ ಹಿಂದಿದೆ ನರಿ ಬುದ್ಧಿ
ಐಪಿಎಲ್ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಗೌತಮ್ ಗಂಭೀರ್ ಬರೆದುಕೊಂಡಿದ್ದಾರೆ.
ಮುಂಬಯಿ: ವಿರಾಟ್ ಕೊಹ್ಲಿಯ(virat kohli) ಬದ್ಧ ಎದುರಾಳಿ ಅಫಘಾನಿಸ್ತಾನ ತಂಡದ ವೇಗಿ ನವೀನ್ ಉಲ್ ಹಕ್ (Naveen-ul-Haq) 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕರು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರ ಹಾರೈಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ವಿರಾಟ್ ಕೊಹ್ಲಿ ಅವರನ್ನು ಒಂದಲ್ಲ ಒಂದು ವಿಚಾರವಾಗಿ ಕೆಣಕುವ ಮತ್ತು ಅಪಹಾಸ್ಯ ಮಾಡುವ ಗಂಭೀರ್ ಈ ಬಾರಿಯೂ ಇದೇ ಕೀಳುಮಟ್ಟದ ಪ್ರವೃತ್ತಿಯನ್ನು ತೋರಿದ್ದಾರೆ. ಐಪಿಎಲ್ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಹರಸಿ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ ಜತೆ ಕಿರಿಕ್
ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ಗೌತಮ್ ಗಂಭಿರ್ ಅವರು ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ(virat kohli and naveen ul haq) ಜತೆ ಮೈದಾನದಲ್ಲೇ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತದದ ವರೆಗೂ ಹೋಗಿದ್ದರು. ಅತ್ತ ನವೀನ್ ಕೂಡ ಕೊಹ್ಲಿಯನ್ನು ಪದೇಪದೆ ಕೆಣಕಿ ಅಗೌರವದಿಂದ ನಡೆದುಕೊಂಡಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ಗಂಭೀರ್ ಮತ್ತು ನವೀನ್ ಅವರನ್ನು ಕಂಡಾಗಲೆಲ್ಲಾ ಕೊಹ್ಲಿಯ ಹೆಸರನ್ನು ಜೋರಾಗಿ ಕರೆದು ಕೆಣಕುತ್ತಿದ್ದಾರೆ.
ಏಷ್ಯಾಕಪ್ನಲ್ಲಿಯೂ ಕೊಹ್ಲಿಯನ್ನು ಕೆಣಕಿದ್ದ ಗಂಭೀರ್
ಕಳೆದ ವಾರ ಮುಕ್ತಾಯ ಕಂಡ ಏಷ್ಯಾಕಪ್ ಟೂರ್ನಿಯಲ್ಲಿಯೂ ಕೊಹ್ಲಿಯನ್ನು ಗಂಭೀರ್ ಅಪಹಾಸ್ಯ ಮಾಡಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಕೊಹ್ಲಿ, ಶಾಹೀನ್ ಅಫ್ರಿದಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ವೇಳೆ ಲೈವ್ ಕಾಮೆಂಟ್ರಿಯಲ್ಲೇ ಟೀಕಿಸಿದ್ದರು. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ “ಈ ಎಸೆತಕ್ಕೆ ಬ್ಯಾಟ್ ಬೀಸುವ ಅಗತ್ಯವೇ ಇರಲಿಲ್ಲ. ವಿಕೆಟ್ನ ಮುಂದೆ ಕೂಡ ಈ ಚೆಂಡು ಇರಲಿಲ್ಲ. ಸಂಪೂರ್ಣವಾಗಿ ವಿಕೆಟ್ ನಿಂದ ಚೆಂಡು ಹೊರ ಭಾಗದಲ್ಲಿತ್ತು. ವಿಶ್ವದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿರುವ ಶಾಹೀನ್ ಅಫ್ರಿದಿ ಅವರಂತ ಬೌಲರ್ಗಳ ಮುಂದೆ ಶ್ರೇಷ್ಠ ಬ್ಯಾಟರ್ ಈ ಎಸೆತಕ್ಕೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬುದನ್ನು ತಿಳಿದಿರಬೇಕು” ಎಂದು ಹೇಳುವ ಮೂಲಕ ಗಂಭೀರ್ ಅವರು ಕೊಹ್ಲಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದರು.
ಇದನ್ನೂ ಓದಿ IND vs PAK : ಭಾರತದ ಕ್ರಿಕೆಟಿಗರು ಪಾಕಿಸ್ತಾನದವರ ಕೈ ಕುಲುಕುವುದು ಸರಿಯಲ್ಲ; ಗಂಭೀರ್ ಹೀಗೆ ಹೇಳಿದ್ಯಾಕೆ?
ಇದಾದ ಬಳಿಕ ಪಾಕ್ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದನ್ನು ಗಂಭೀರ್ ಟೀಕಿಸಿದ್ದರು. 94 ಎಸೆತದಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 122 ರನ್ ಗಳಿಸಿದ್ದರು. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಈ ಎಲ್ಲ ಕಾರಣದಿಂದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಆದರೆ ಗಂಭೀರ್ ಈ ಪ್ರಶಸ್ತಿಗೆ ಕೊಹ್ಲಿ ಅರ್ಹನಲ್ಲ ಎಂದು ಹೇಳಿದ್ದರು.
ಕ್ರಿಕೆಟ್
Sara vs Gill: ಶುಭಮನ್ ಗಿಲ್ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್
ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ವೆಲ್ ಪ್ಲೇ ಶುಭಮನ್ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ.
ಮುಂಬಯಿ: ಸಚಿನ್ ತೆಂಡೂಲ್ಕರ್(sachin tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಟೀಮ್ ಇಂಡಿಯಾದ ಸ್ಟಾರ್ ಯುವ ಆಟಗಾರ ಶುಭಮನ್ ಗಿಲ್ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship) ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೇ ಕಾರಣಕ್ಕೆ ಇವರಿಬ್ಬರನ್ನು ನೆಟ್ಟಿಗರು ಹಲವು ಬಾರಿ ಟ್ರೋಲ್ ಕೂಡ ಮಾಡಿದ್ದಾರೆ. ಆದರೆ ಗಿಲ್ ಮತ್ತು ಸಾರಾ ತಮ್ಮ ಪ್ರೀತಿ ಮತ್ತು ಡೇಟಿಂಗ್ ವಿಚಾರವಾಗಿ ಇದುವರೆಗೂ ಎಲ್ಲಯೂ ತುಟಿಬಿಚ್ಚಿಲ್ಲ. ಎಷ್ಟೇ ರೂಮರ್ಸ್ ಹಬ್ಬಿದರೂ ತಮ್ಮ ಪಾಡಿಗೆ ತಾವು ಸುಮ್ಮನಿದ್ದರು. ಇದೀಗ ಸಾರಾ ಅವರು ಮಾಡಿರುವ ಟ್ವೀಟ್ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ.
“ವೆಲ್ ಪ್ಲೇ ಶುಭಮನ್ ಗಿಲ್”
ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಶುಭಮನ್ ಗಿಲ್ 63 ಎಸೆತ ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಪ್ರದರ್ಶನಕ್ಕೆ ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ವೆಲ್ ಪ್ಲೇ ಶುಭಮನ್ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ. ಇಬರಿಬ್ಬರ ಮಧ್ಯೆ ಪ್ರೇಮಾಂಕುರ ಇರುವುದು ಪಕ್ಕಾ ಎಂದಿದ್ದಾರೆ.
Well played #ShubmanGill 👏 & Team india 🇮🇳 #INDvAUS
— Sara Tendulkar (@imsaratendulkar) September 22, 2023
ಶುಭಮನ್ ಗಿಲ್ ಅವರು ಆಡುವ ವೇಳೆ ಹಲವು ಬಾರಿ ಪ್ರೇಕ್ಷಕರು ಸಾರಾ, ಸಾರಾ… ಎಂದು ಕೂಗಿದ್ದರು. ಈ ಸಾರಾ ಯಾರೆಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದ್ದರೂ ಇದಕ್ಕೆ ಯಾವುದೇ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಕೆಲವರು ಗಿಲ್ ಸಚಿನ್ ತೆಂಡೂಲ್ಕರ್ ಪುತ್ರಿ ಜತೆ ಅಂದುಕೊಂಡಿದ್ದರೆ, ಇನ್ನೂ ಕೆಲವರು ನಟಿ ಸಾರಾ ಅಲಿ ಖಾನ್ ಎಂದುಕೊಂಡಿದ್ದರು. ಆದರೆ ಈಗ ನೆಟ್ಟಿಗರಿಗೆ ಒಂದು ಹಂತದ ಕ್ಲ್ಯಾರಿಟಿ ಸಿಕ್ಕಿದ್ದು ಸಚಿನ್ ಪುತ್ರಿ ಸಾರಾ ಅವರರೇ ಗಿಲ್ ಪ್ರೇಯಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದ ಟೀಮ್ ಇಂಡಿಯಾ ಆಟಗಾರ
ಭಾರತಕ್ಕೆ 5 ವಿಕೆಟ್ ಜಯ
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು.
ಕ್ರಿಕೆಟ್
IND vs AUS: ಆಸೀಸ್ಗೆ ಬೀಳಲಿ ಸರಣಿ ಸೋಲಿನ ಏಟು
ಭಾನುವಾರ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ(India vs Australia, 2nd ODI) ಭಾರತ ತಂಡ ಗೆದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ.
ಇಂದೋರ್: ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತ ತವರಿನಲ್ಲೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಒಂದನ್ನು ಗೆದ್ದಿರುವ ಕನ್ನಡಿಗ ಕೆ.ಎಲ್ ರಾಹುಲ್ ಪಡೆ ಮತ್ತೊಂದು ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಭಾನುವಾರ ನಡೆಯುವ ಇತ್ತಂಡಗಳ ಮುಖಾಮುಖಿಯಲ್ಲಿ(India vs Australia, 2nd ODI) ಭಾರತ ತಂಡ ಗೆದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆಲುವು ದಾಖಲಿಸಿದೆ.
ಕಳಪೆ ಫೀಲ್ಡಿಂಗ್ಗೆ ಬೇಕಿದೆ ತುರ್ತು ಚೇತರಿಕೆ
ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯಲ್ಲಿಯೂ ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ನಿಜಕ್ಕೂ ಮೆಚ್ಚಲೇ ಬೇಕು. ಆದರೆ ಮೊದಲ ಪಂದ್ಯದಂತೇ ಈ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ ನಡೆಸಿದರೆ ಕೈ ಸುಟ್ಟುಕೊಳ್ಳುವುದು ಖಚಿತ. ನಾಯಕ ರಾಹುಲ್ ಸೇರಿ ಎಲ್ಲ ಆಟಗಾರರು ಮಿಸ್ ಪೀಲ್ಡಿಂಗ್, ರನೌಟ್, ಕ್ಯಾಚ್ ಕೈಚೆಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಇದಲ್ಲದೇ ವಿಶ್ವಕಪ್ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಕಳಪೆ ಫೀಲ್ಡಿಂಗ್ ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಅದರಲ್ಲೂ ರಾಹುಲ್ ಅವರನ್ನು ವಿಶ್ವಕಪ್ ಟೂರ್ನಿಯಲ್ಲಿ ಪ್ರಧಾನ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ ಆದರೆ ಅವರ ಕಳಪೆ ಕೇತ್ರರಕ್ಷಣೆ ನೋಡುವಾಗ ಟೀಮ್ ಮ್ಯಾನೆಜ್ಮೆಂಟ್ಗೆ ತಲೆ ನೋವು ತಂದಿದೆ. ದ್ವಿತೀಯ ಪಂದ್ಯದಲ್ಲಿ ಎಲ್ಲ ತಪ್ಪುಗಳನ್ನು ಸರಿಪಡಿಸಲೇ ಬೇಕಾದ ಒತ್ತಡ ರಾಹುಲ್ ಮುಂದಿದೆ.
ಆಸೀಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ
ಅನುಭವಿಗಳಿಂದಲೇ ಕೂಡಿದ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಪಂದ್ಯದಲ್ಲಿ ಸೋಲು ಎದುರಾದ ಕಾರಣ ಸರಣಿಯನ್ನು ಜೀವಂತವಿರಿಸಬೇಕಿದ್ದರೆ, ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಸ್ಥಿತಿ ಎದುರಾಗಿದೆ. ಮಿಚೆಲ್ ಮಾರ್ಷ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್ಗಳು ಮೊದಲ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದರು. ಬೌಲಿಂಗ್ನಲ್ಲಿ ಮಾತ್ರ ಹೇಳುವಷ್ಟರ ಮಟ್ಟಿಗೆ ಪ್ರದರ್ಶನ ಕಂಡುಬರಲಿಲ್ಲ. ಸರಣಿಯನ್ನು ಸಮಬಲಕ್ಕೆ ತರುವ ನಿಟ್ಟಿನಲ್ಲಿ ಆಸೀಸ್ ಈ ಪಂದ್ಯಕ್ಕೆ ಕೆಲ ಆಟಗಾರರನ್ನು ಬದಲಾಯಿಸುವ ಸಾಧ್ಯತೆ ಇದೆ. ಮಿಚೆಲ್ ಸ್ಟಾರ್ಕ್ ತಂಡ ಸೇರಿದರೂ ಅಚ್ಚರಿಯಿಲ್ಲ.
ಇದನ್ನೂ ಓದಿ IND vs AUS 2nd ODI: ಭಾರತ-ಆಸೀಸ್ ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಸಿಡಿಯ ಬೇಕಿದೆ ಅಯ್ಯರ್
ಬೆನ್ನು ನೋವಿನಿಂದ ಚೇತರಿಕೆ ಕಂಡು ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಶ್ರೇಯಸ್ ಅಯ್ಯರ್ಗೆ ಏಷ್ಯಾಕಪ್ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲೇ ಅವರು ಗಾಯಗೊಂಡು ಬಳಿಕದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆಸೀಸ್ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದರೂ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ನಡೆಸಿ ಸಂಪೂರ್ಣ ವಿಫಲರಾದರು. ಒಂದೊಮ್ಮೆ ದ್ವಿತೀಯ ಪಂದ್ಯದಲ್ಲಿಯೂ ಅವರು ಇದೇ ಪ್ರದರ್ಶನವನ್ನು ತೋರ್ಪಡಿಸಿದರೆ ವಿಶ್ವಕಪ್ ತಂಡದ ಆಡುವ ಬಳಗದಿಂದ ಹೊರಗುಳಿಯುವುದು ಖಚಿತ. ಈ ನಿಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ. ಜತೆಗೆ ಶಾರ್ದೂಲ್ ಠಾಕೂರ್ ಕೂಡ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.
ಕ್ರಿಕೆಟ್
IND vs AUS 2nd ODI: ಭಾರತ-ಆಸೀಸ್ ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಒಟ್ಟು 6 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ 4 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಿಸಿದರೆ, 2 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದು ಬೀಗಿದೆ.
ಇಂದೋರ್: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಆಸೀಸ್ ವಿರುದ್ಧ ದ್ವಿತೀಯ(IND vs AUS 2nd ODI) ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಈ ಪಂದ್ಯ ಭಾನುವಾರ ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ(Holkar Cricket Stadium) ನಡೆಯಲಿದೆ. ರಿಪೋರ್ಟ್(Pitch Report) ಮತ್ತು ಸಂಭಾವ್ಯ ತಂಡಗಳ(Probable Playing XIs) ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬ್ಯಾಟರ್‌ಗಳಿಗೆ ಸರ್ಗ. ಇಲ್ಲಿನ ಬಾಂಡರಿ ಗೆರೆಗಳು ಹತ್ತಿರವಾಗಿದ್ದು, ಅಲ್ಲದೆ ಹೆಚ್ಚು ಬೌನ್ಸರ್ಗಳು ಇರದ ಕಾರಣ ಬ್ಯಾಟರ್‌ಗಳಿಗೆ ಹೆಚ್ಚಿನ ರನ್ಗಳಿಸಲು ಸಾಧ್ಯವಾಗಲಿದೆ. ಹೀಗಾಗಿ ಈ ಮೇಲಾಟ ದೊಡ್ಡ ಮೊತ್ತದಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ. ಇಲ್ಲಿ ಕೊನೆಯ ಬಾರಿ ಆಡಿದ ಏಕದಿನ ಪಂದ್ಯದಲ್ಲಿ ಗಿಲ್ ಮತ್ತು ರೋಹಿತ್ ಶರ್ಮ ಅವರು ಶತಕ ಬಾರಿಸಿ ಮಿಂಚಿದ್ದರು.
ಈ ಮೈದಾನದಲ್ಲಿ ಒಟ್ಟು 6 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ 4 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯಿಸಿದರೆ, 2 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದು ಬೀಗಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಅಧಿಕವಾಗಿದೆ. 320 ಇಲ್ಲಿನ ಮೊದಲ ಬ್ಯಾಟಿಂಗ್ ಸರಾಸರಿ ಮೊತ್ತವಾಗಿದೆ. 267 ದ್ವಿತೀಯ ಬ್ಯಾಟಿಂಗ್ ಸರಾಸರಿ ಮೊತ್ತವಾಗಿದೆ.
ಇದನ್ನೂ ಓದಿ Varanasi Stadium: ಮೋದಿಗೆ ಟೀಮ್ ಇಂಡಿಯಾ ಜೆರ್ಸಿ ನೀಡಿ ಗೌರವಿಸಿದ ಸಚಿನ್ ತೆಂಡೂಲ್ಕರ್
ಹವಾಮಾನ ವರದಿ
ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಕ್ಕೆ ಮಳೆ ಸಣ್ಣ ಪ್ರಮಾಣದಲ್ಲಿ ಅಡ್ಡಿಪಡಿಸಿತ್ತು. ಭಾನುವಾರ ಇಂದೋರ್‌ನಲ್ಲಿ ನಡೆಯುವ ದ್ವಿತೀಯ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಇದ್ದರೂ ಮೋಡ ಕವಿದ ವಾತಾವರಣವ ಇದರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾತ್ರಿಯ ವೇಳೆ ಇಬ್ಬನಿ ಸಮಸ್ಯೆ ಇರುವುದರಿಂದ ಬ್ಯಾಟಿಂಗ್ ನಡೆಸಲು ಕೂಡ ಇಲ್ಲಿ ಕಷ್ಟಕರ.
ಬಲಾಬಲ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 147 ಬಾರಿ ಮುಖಾಮುಖಿಯಾಗಿವೆ. ಆಸ್ಟ್ರೇಲಿಯಾ 82 ಪಂದ್ಯಗಳಲ್ಲಿ ಗೆದ್ದರೆ, ಭಾರತ 55 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಒಂದು ಗೆಲುವು ಕಳೆದ ಪಂದ್ಯದಲ್ಲಿ ದಾಖಲಾದ ಗೆಲುವಾಗಿದೆ. 10 ಪಂದ್ಯಗಳು ಫಲಿತಾಂಶ ಕಂಡಿಲ್ಲ.
ಸಂಭಾವ್ಯ ತಂಡ
ಭಾರತ: ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ
-
ಕರ್ನಾಟಕ23 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!