ದುಬೈ: ಐಸಿಸಿ ಪುರುಷರ ಏಕದಿನ ವಿಶ್ವ ಕಪ್ (ICC World Cup 2023)ನ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಕಳೆದ ತಿಂಗಳು ಪ್ರಕಟಿಸಿತ್ತು. ಇದೀಗ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭವಾಗಿ ನವೆಂಬರ್ 19ರ ತನಕ ನಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಕೂಟದಲ್ಲಿ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಇದೀಗ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ ನಡೆಯಲಿರುವ 10 ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು(World Cup Practice Match Schedule) ಐಸಿಸಿ(ICC) ಬಿಡುಗಡೆಗೊಳಿಸಿದೆ.
ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ನಡೆಯಲಿದೆ. 29ರಂದು ಆರಂಭಗೊಳ್ಳಲಿರುವ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಅದೇ ದಿನ ನಡೆಯುವ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿದೆ. ಲಂಕಾ ಮತ್ತು ಬಾಂಗ್ಲಾ ಪಂದ್ಯ ಗುವಾಹಟಿಯಲ್ಲಿ ನಡೆದರೆ ಪಾಕ್-ಕಿವೀಸ್ ಪಂದ್ಯ ಹೈದರಾಬಾದ್ನಲ್ಲಿ ನಡೆಯಲಿದೆ.
ಇದನ್ನೂ ಓದಿ ICC World Cup: ಬುಕ್ ಮೈ ಶೋದಲ್ಲಿ ವಿಶ್ವಕಪ್ ಟಿಕೆಟ್ ಲಭ್ಯ; ದಿನಾಂಕ ಘೋಷಿಸಿದ ಬಿಸಿಸಿಐ
ಅಭ್ಯಾಸ ಪಂದ್ಯಗಳ ವೇಳಾಪಟ್ಟಿ
ದಿನಾಂಕ | ಪಂದ್ಯ | ಸ್ಥಳ |
ಸೆಪ್ಟೆಂಬರ್ 29 | ಬಾಂಗ್ಲಾದೇಶ-ಶ್ರೀಲಂಕಾ | ಗುವಾಹಟಿ |
ಸೆಪ್ಟೆಂಬರ್ 29 | ಪಾಕಿಸ್ತಾನ-ನ್ಯೂಜಿಲ್ಯಾಂಡ್ | ಹೈದರಾಬಾದ್ |
ಸೆಪ್ಟೆಂಬರ್ 29 | ಅಫಘಾನಿಸ್ತಾನ-ದಕ್ಷಿಣ ಆಫ್ರಿಕಾ | ತಿರುವನಂತಪುರ |
ಸೆಪ್ಟೆಂಬರ್ 30 | ಆಸ್ಟ್ರೇಲಿಯಾ-ನೆದರ್ಲೆಂಡ್ | ತಿರುವನಂತಪುರ |
ಸೆಪ್ಟೆಂಬರ್ 30 | ಭಾರತ-ಇಂಗ್ಲೆಂಡ್ | ಗುವಾಹಟಿ |
ಅಕ್ಟೋಬರ್ 2 | ಇಂಗ್ಲೆಂಡ್-ಬಾಂಗ್ಲಾದೇಶ | ಗುವಾಹಟಿ |
ಅಕ್ಟೋಬರ್ 2 | ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ | ತಿರುವನಂತಪುರ |
ಅಕ್ಟೋಬರ್ 3 | ಭಾರತ-ನೆದರ್ಲೆಂಡ್ | ತಿರುವನಂತಪುರ |
ಅಕ್ಟೋಬರ್ 3 | ಅಫಘಾನಿಸ್ತಾನ-ಶ್ರೀಲಂಕಾ | ಗುವಾಹಟಿ |
ಅಕ್ಟೋಬರ್ 3 | ಪಾಕಿಸ್ತಾನ-ಆಸ್ಟ್ರೇಲಿಯಾ | ಹೈದರಾಬಾದ್ |
ಭಾರತಕ್ಕೆ ಪ್ರಯಾಣದ್ದೇ ಚಿಂತೆ
ಟೂರ್ನಿಯ ಆತಿಥೇಯ ತಂಡವಾದ ಕಾರಣ ದೇಶದ ಪ್ರಮುಖ 9 ನಗರಗಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ಆಡಲಿದೆ. ಈ ವೇಳೆ ಭಾರತ ತನ್ನ ಲೀಗ್ ಹಂತದ ಪಂದ್ಯಗಳಿಗೆ 8,400 ಕಿ.ಮೀ.ಗಳಷ್ಟು ಸಂಚಾರ ಮಾಡಬೇಕಿದೆ. ಒಂದೊಮ್ಮೆ ಭಾರತ ತಂಡ ಸೆಮಿಫೈನಲ್ ಅಥವಾ ಫೈನಲ್ ತಲುಪಿದರೆ ಆಗ ಸುಮಾರು 9,700 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ. ವೇಳಾಪಟ್ಟಿ ಪ್ರಕಾರ ಭಾರತ ಅತೀ ಹೆಚ್ಚು 9 ನಗರಗಳಲ್ಲಿ ಲೀಗ್ ಪಂದ್ಯಗಳನ್ನು ಆಡಲಿರುವ ಏಕೈಕ ತಂಡವಾಗಿದೆ. ಉಳಿದ ತಂಡಗಳು ಒಂದು ತಾಣದಲ್ಲಿ ಗರಿಷ್ಠ 2 ಪಂದ್ಯಗಳನ್ನು ಆಡಲಿವೆ. ಭದ್ರತಾ ಕಾರಣಗಳಿಂದ ಪಾಕಿಸ್ತಾನ(world cup 2023 news Pakistan) ಕೇವಲ 5 ನಗರಗಳಲ್ಲಷ್ಟೇ ಲೀಗ್ ಪಂದ್ಯಗಳನ್ನು ಆಡುತ್ತದೆ. ಅಂದರೆ ಪಾಕ್ 6,849 ಕಿ.ಮೀ. ದೂರ ಸಂಚಾರ ಮಾಡಲಿದೆ. ಒಟ್ಟಾರೆಯಾಗಿ ಭಾರತಕ್ಕೆ ಪಂದ್ಯ ಆಡುವುದಕ್ಕಿಂತ ಪ್ರಯಾಣದ್ದೇ ಹೆಚ್ಚಿನ ಚಿಂತೆಯಾಗಿದೆ.
ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ನೆದರ್ಲೆಂಡ್ಸ್ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು