Site icon Vistara News

ಐತಿಹಾಸಿಕ ಕ್ರಿಕೆಟ್​​ ಸ್ಟೇಡಿಯಮ್​ ನೆಲಸಮ ಮಾಡಲಿದೆ ಆಸ್ಟ್ರೇಲಿಯಾ

Gabba Stadium

ಬೆಂಗಳೂರು : ಆಸ್ಟ್ರೇಲಿಯಾದ ಬೃಹತ್ ನಗರ ಬ್ರಿಸ್ಬೇನ್​ನಲ್ಲಿ ನಡೆಯಲಿರುವ 2032 ರ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ‘ಗಬ್ಬಾ’ ಎಂದೂ ಕರೆಯಲ್ಪಡುವ ಐತಿಹಾಸಿಕ ಬ್ರಿಸ್ಬೇನ್ ಕ್ರಿಕೆಟ್ ಕ್ರೀಡಾಂಗಣವನ್ನು ನೆಲಸಮಗೊಳಿಸಿ ಮರುನಿರ್ಮಾಣ ಮಾಡಲು (Cricket News) ಸಜ್ಜಾಗಿದೆ. ಜುಲೈ 2021ರಲ್ಲಿ ಪ್ರತಿಸ್ಪರ್ಧಿಯೇ ಇಲ್ಲದೆ ಬ್ರಿಸ್ಬೇನ್ 2032 ಒಲಿಂಪಿಕ್ ಆತಿಥ್ಯ ಪಡೆಯಿತು. ಇದು 1956ರಲ್ಲಿ ಮೆಲ್ಬೋರ್ನ್ ಮತ್ತು 2000 ರಲ್ಲಿ ಸಿಡ್ನಿ ನಂತರ ಬೇಸಿಗೆ ಕ್ರೀಡಾಕೂಟವನ್ನು ಆಯೋಜಿಸಿದ ಮೂರನೇ ಆಸ್ಟ್ರೇಲಿಯಾದ ನಗರ ಎನಿಸಿಕೊಂಡಿದೆ.

ಕ್ವೀನ್ಸ್ ಲ್ಯಾಂಡ್ ರಾಜ್ಯದ ಉಪ ಪ್ರಧಾನಿ ಸ್ಟೀವನ್ ಮೈಲ್ಸ್ ಶುಕ್ರವಾರ ಗಬ್ಬಾ ಎಂದು ಕರೆಯಲ್ಪಡುವ ಕ್ರೀಡಾಂಗಣದ ನವೀಕರಣವನ್ನು ಘೋಷಿಸಿದ್ದಾರೆ. 2.7 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ (ಯುಎಸ್ $ 1.8 ಬಿಲಿಯನ್) ವೆಚ್ಚದಲ್ಲಿ ಈ ಸ್ಟೇಡಿಯಮ್​ ಆಧುನಿಕ ಸ್ಪರ್ಷ ಪಡೆಯಲಿದೆ.

ಈ ಯೋಜನೆಯು ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು 50,000 ಕ್ಕೆ ಹೆಚ್ಚಿಸುತ್ತದೆ. ಒಂದು ಶತಮಾನಕ್ಕೂ ಹೆಚ್ಚು ಕಾಲ ರಾಜ್ಯದ ಕ್ರಿಕೆಟ್ ಪ್ರಧಾನ ಕಚೇರಿಯಾಗಿರುವ ಗಬ್ಬಾ ಸ್ಟೇಡಿಯಮ್​ಗೆ ಹೊಸ ಅಂಡರ್​ಗ್ರೌಂಡ್​ ರೈಲು ನಿಲ್ದಾಣದೊಂದಿಗೆ ಸಂಪರ್ಕ ಪಡೆಯಲಿದೆ. ಕ್ರೀಡಾಂಗಣದ ನವೀಕರಣ ಕಾಮಗಾರಿಗಾಗಿ ಸ್ಥಳೀಯ ಪ್ರಾಥಮಿಕ ಶಾಲೆಯನ್ನು ಸ್ಥಳಾಂತರಿಸಲಾಗುತ್ತದೆ. ಕಟ್ಟಡ ನಿರ್ಮಾಣದ ಹಂತದಲ್ಲಿ ಕ್ರಿಕೆಟ್ ತಂಡಗಳು ಮತ್ತು ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ನ ಪ್ರಮುಖ ಕ್ಲಬ್ ಬ್ರಿಸ್ಬೇನ್ ಲಯನ್ಸ್ ಅನ್ನು ತಾತ್ಕಾಲಿಕವಾಗಿ ಸ್ಥಳಾಂತರವೂ ಮಾಡಲಾಗುತ್ತದೆ.

ನಿರ್ಮಾಣ ಕಾರ್ಯವು ನಾಲ್ಕು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆಶಸ್ 2025 ಸರಣಿಯಲ್ಲಿ ಗಬ್ಬಾ ಇಂಗ್ಲೆಂಡ್​​​ ತಂಡಕ್ಕೆ ವಹಿಸಿದ ನಂತರ ಉದ್ಘಾಟನೆಯಾಗಲಿದೆ ಎಂದು ಮೈಲ್ಸ್ ಹೇಳಿದರು.

ಇದನ್ನೂ ಓದಿ : WPL 2024 : ಮಹಿಳೆಯರ ಪ್ರೀಮಿಯರ್​ ಲೀಗ್​ನ ಹರಾಜು ದಿನಾಂಕ ಪ್ರಕಟ

“ಆ ಯೋಜನಾ ಪ್ರಮಾಣೀಕರಣ ವರದಿಯು ಗಬ್ಬಾಗೆ ನಾಲ್ಕು ಸಂಭಾವ್ಯ ಆಯ್ಕೆಗಳನ್ನು ಕೊಟ್ಟಿದೆ. ನೆಲಸಮಗೊಳಿಸುವಿಕೆ ಮತ್ತು ಪುನರ್ನಿರ್ಮಾಣವು ಅತ್ಯುತ್ತಮ ಫಲಿತಾಂಶವನ್ನು ನೀಡಿದೆ. ಇದು ಉತ್ತಮ ಸಂಪರ್ಕ ಹೊಂದಿದ ಕ್ರೀಡಾಂಗಣವಾಗಿರುತ್ತದೆ ಮುಖ್ಯವಾಗಿ, ಇದು ನಾವು ನೋಡಲು ಬಯಸುವ ನವೀಕರಣವನ್ನು ಉತ್ತೇಜಿಸುತ್ತದೆ. ಇದು ನಗರದ ಅತ್ಯುತ್ತಮ ಭಾಗಗಳಲ್ಲಿ ಒಂದಾಗಲಿದೆ ಎಂದು ಮೈಲ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ವೀನ್ಸ್​ಲ್ಯಾಂಡ್​ ರಾಜ್ಯ ಸರ್ಕಾರ, ಬ್ರಿಸ್ಬೇನ್ ಮತ್ತು ಹತ್ತಿರದ ನಗರಗಳ ಮುನ್ಸಿಪಲ್ ಕೌನ್ಸಿಲ್​ಗಳ, ಆಸ್ಟ್ರೇಲಿಯಾದ ಫೆಡರಲ್ ಸರ್ಕಾರದ ಆರ್ಥಿಕ ಸಹಾಯದೊಂದಿಗೆ ಕ್ರೀಡಾಕೂಟ ಬೆಳವಣಿಗೆ ಕಾಣಲಿದೆ. ಅನಗತ್ಯ ಹೂಡಿಕೆ ತಪ್ಪಿಸುವ ಐಒಸಿಯ ಪ್ರಸ್ತುತ ಮಾನದಂಡಗಳನ್ನು ಪೂರೈಸಲು ಆತಿಥೇಯರು ಈಗಾಗಲೇ 84% ಕ್ರೀಡಾಂಗಣಗಳು ಮತ್ತು ಈವೆಂಟ್ ಸ್ಥಳಗಳನ್ನು ಹೊಂದಿದ್ದಾರೆ. ಆರಂಭದಲ್ಲಿ ಗಬ್ಬಾವನ್ನು ಮೇಲ್ದರ್ಜೆಗೇರಿಸಬೇಕಾಗಿತ್ತು.

Exit mobile version