Site icon Vistara News

IPL 2023 : ಹರ್ಷಲ್​ ಎಡವಟ್ಟು ಮಾಡದಿದ್ದರೆ ಆರ್​ಸಿಬಿಗೆ ಇತ್ತು ಇನ್ನೂ ಗೆಲುವಿನ ಚಾನ್ಸ್​!

IPL 2023

#image_title

ಬೆಂಗಳೂರು: ಲಕ್ನೊ ಸೂಪರ್​ ಜಯಂಟ್ಸ್ ವಿರುದ್ಧ ಐಪಿಎಲ್ 16ನೇ ಆವೃತ್ತಿಯ (IPL 2023) ಆರ್​ಸಿಬಿ 1 ರನ್​ನಿಂದ ಸೋತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕೊನೇ ತನಕ ಜಿದ್ದಾಜಿದ್ದಿನಿಂದ ನಡೆದ ಈ ಹೋರಾಟದಲ್ಲಿ ರಾಹುಲ್ ನೇತೃತ್ವದ ಲಕ್ನೊ ತಂಡ ಗೆಲುವು ಸಾಧಿಸಲು ಅದೃಷ್ಟವೂ ನೆರವಾಯಿತು ಎಂಬುದಕ್ಕೆ ಕೊನೇ ಓವರೇ ಸಾಕ್ಷಿ. ಕೊನೇ ಓವರ್​ನಲ್ಲಿ ಐದು ರನ್​ ಬೇಕಾಗಿದ್ದ ಲಕ್ನೊ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಆರ್​ಸಿಬಿಗೆ ಗೆಲುವಿಗೆ ಅವಕಾಶ ಸೃಷ್ಟಿಯಾಗಿತ್ತು. ಅಂತಿಮವಾಗಿ ವಿಜಯದ ಬಾಗಿಲು ಲಕ್ನೊ ತಂಡಕ್ಕೆ ತೆರೆಯಿತು. ಆದರೆ, ಹರ್ಷಲ್​ ಪಟೇಲ್​ ಮಾಡಿದ ಯಡವಟ್ಟು ಕೂಡ ಆರ್​​ಸಿಬಿ ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ. ಅದು ಹೇಗೆ ಎಂಬುದನ್ನು ನೋಡೋಣ.

213 ರನ್​ಗಳ ಚೇಸಿಂಗ್ ಮಾಡಿದ್ದ ಲಕ್ನೊ ತಂಡಕ್ಕೆ ಕೊನೇ ಓವರ್​ನ ಕೊನೇ ಎಸೆತದಲ್ಲಿ ಒಂದು ರನ್​ ಬೇಕಾಗಿತ್ತು. ಕ್ರೀಸ್​ನಲ್ಲಿ ವೇಗದ ಬೌಲರ್​ ಆವೇಶ್​ ಖಾನ್. ಅವರಿಗೆ ಬ್ಯಾಟಿಂಗ್ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ. ಹೀಗಾಗಿ ಹತ್ತಿರವೇ ಫೀಲ್ಡಿಂಗ್ ನಿಲ್ಲಿಸಿ ಅವರನ್ನು ಔಟ್​ ಮಾಡುವ ಯೋಜನೆ ಹಾಕಿಕೊಂಡಿದ್ದರು ಆರ್​​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​. ಅದರಂತೆ ಕೊನೇ ಎಸೆತ ಎಸೆಯಲು ಹರ್ಷಲ್​ ಪಟೇಲ್​ ಓಡಿ ಬರುವಾಗ ನಾನ್​ಸ್ಟ್ರೈಕ್​ ಎಂಡ್​ನಲ್ಲಿದ್ದ ರವಿ ಬಿಷ್ಣೋಯಿ ಕ್ರೀಸ್​ ಬಿಟ್ಟಿದ್ದರು. ಅದು ಹರ್ಷಲ್ ಪಟೇಲ್​ ಗಮನಕ್ಕೆ ಬಂತು. ಅವರು ತಕ್ಷಣ ಮಂಕಡಿಂಗ್ ಮಾಡಲು ಮುಂದಾದರು. ಆದರೆ, ಅವರ ಕೈಯಿಂದ ಚೆಂಡು ಬಿಟ್ಟುಕೊಳ್ಳದ ಕಾರಣ ಸಾಧ್ಯವಾಗಲಿಲ್ಲ. ಮುಂದಕ್ಕೆ ಹೋಗಿ ಮತ್ತೊಂದು ಬಾರಿ ಪ್ರಯತ್ನಿಸಿ ಔಟ್​ ಮಾಡಿದರು. ಅದರೆ, ಅದು ಅಂಪೈರ್​ ಅದನ್ನು ಪುರಸ್ಕರಿಸಲಿಲ್ಲ. ಮಂಕಡಿಂಗ್ ಈ ನ್ಯಾಯಬದ್ಧವಾಗಿತ್ತು. ಆದರೆ, ತಡವಾಗಿ ಪ್ರಯತ್ನ ಮಾಡಿ ಔಟ್​ ಮಾಡುವ ಅವಕಾಶ ಕಳೆದುಕೊಂಡರು.

ಒಂದು ವೇಳೆ ಹರ್ಷಲ್​ ಪಟೇಲ್​ ಔಟ್​ ಆಗಿದ್ದರೆ ಪಂದ್ಯ ಟೈ ಆಗುತ್ತಿತ್ತು. ಈ ವೇಳೆ ಸೂಪರ್​ ಓವರ್​ ಅವಕಾಶದ ಮೂಲಕ ಗೆಲ್ಲುವ ಅವಕಾಶವಿತ್ತು. ಇಲ್ಲಿಗೆ ಆರ್​ಸಿಬಿ ದುರದೃಷ್ಟ ಮುಗಿಯಲಿಲ್ಲ. ಹರ್ಷಲ್​ ಪಟೇಲ್ ಎಸೆದ ಕೊನೇ ಎಸೆತ ಬ್ಯಾಟರ್​ ಆವೇಶ್​ ಖಾನ್​ ಬ್ಯಾಟ್​ಗೆ ತಾಗಿರಲಿಲ್ಲ. ಆದರೆ, ಚೆಂಡನ್ನು ತಕ್ಷಣ ತೆಗೆದುಕೊಳ್ಳುವಲ್ಲಿ ವಿಕೆಟ್​ಕೀಪರ್​ ದಿನೇಶ್​ ಕಾರ್ತಿಕ್​ ಎಡವಿದರು. ಕಷ್ಟ ಪಟ್ಟು ಚೆಂಡು ಹಿಡಿದು ನಾನ್​ಸ್ಟ್ರೈಕ್​ ಕಡೆಗೆ ಎಸೆದರು. ಇಲ್ಲಿಯೂ ಒಂದು ರನ್​ಔಟ್​ ಅವಕಾಶ ಆರ್​ಸಿಬಿಗೆ ನಷ್ಟವಾಯಿತು.

ಪಂದ್ಯದ ಗತಿ ಬದಲಿಸಿದ ಸ್ಟೊಯ್ನಿಸ್​, ಪೂರನ್​

213 ರನ್‌ ಗುರಿ ಹಿಂಬಾಲಿಸಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಕೇವಲ 23 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಆರ್‌ಸಿಬಿ ಗೆಲವು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಸ್ಟೋಯ್ನಿಸ್‌ ಕೇವಲ 30 ಎಸೆತಗಳಲ್ಲಿ 65 ರನ್‌ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ದರು.

ಇದನ್ನೂ ಓದಿ : IPL 2023: ಆರ್​ಸಿಬಿ ವಿರುದ್ಧ ಲಕ್ನೋಗೆ ಗೆಲುವು; ಯಾವ ತಂಡಕ್ಕೆ ಎಷ್ಟು ಅಂಕ?​ ಅಂಕಪಟ್ಟಿ ಹೇಗಿದೆ?

ಸ್ಟೋಯ್ನಿಸ್‌ ಬಳಿಕ ನಿಕೋಲಸ್‌ ಪೂರನ್‌ ಆರ್‌ಸಿಬಿ ಬೌಲರ್‌ಗಳ ಎದುರು ಸ್ಪೋಟಕ ಬ್ಯಾಟ್‌ ಮಾಡಿದರು. ಇವರು ಕೇವಲ 19 ಎಸೆತಗಳಲ್ಲಿ 62 ರನ್‌ ಗಳಿಸಿ ಲಖನೌ ಸೂಪರ್‌ ಜಯಂಟ್ಸ್‌ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, ಲಖನೌ ತಂಡದ ಗೆಲುವಿನ ಸನಿಹದಲ್ಲಿ ನಿಕೋಲಸ್‌ ಪೂರನ್ ಅವರು ಡೀಪ್‌ ಸ್ಕೈರ್‌ ಲೆಗ್‌ನಲ್ಲಿ ಕ್ಯಾಚಿತ್ತರು. ಆದರೂ ಅಂತಿಮ ಓವರ್‌ನಲ್ಲಿ ಹೈ-ಡ್ರಾಮಾದ ಹೊರತಾಗಿಯೂ ಲಖನೌ ಸೂಪರ್‌ ಜಯಂಟ್ಸ್‌ ಗೆಲುವು ತನ್ನದಾಗಿಸಿಕೊಂಡಿತು.

Exit mobile version