Site icon Vistara News

IPL 2023: ಅದೃಷ್ಟವಿದ್ದರೆ ಪ್ಲೇ ಆಫ್​​ ಪ್ರವೇಶ ಖಚಿತ; ರಿಲೀ ರೊಸೊ ವಿಶ್ವಾಸ

Delhi Capitals vs Royal Challengers Bangalore

ನವದೆಹಲಿ: ಆರಂಭಿಕ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಇದೀಗ ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 7 ವಿಕೆಟ್​ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ತಂಡದ ಆಟಗಾರ ರಿಲೀ ರೊಸೊ ಅದೃಷ್ಟವೊಂದಿದ್ದರೆ ತಂಡ ಪ್ಲೇ ಆಫ್​​ ಪ್ರವೇಶ ಪಡೆಯಲಿದೆ ಎಂದು ಹೇಳಿದ್ದಾರೆ.

ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್​ನ 50ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 16.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ 7 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಡೆಲ್ಲಿ ಈ ಗೆಲುವಿನಿಂದಿಗೆ ಅಂಕಪಟ್ಟಿಯಲ್ಲಿ ಕೊನೆಯಾ ಸ್ಥಾನದಿಂದ ಒಂದು ಸ್ಥಾನ ಮೇಲೇರಿದೆ.

ಪಂದ್ಯದ ಬಳಿಕ ಮಾತನಾಡಿದ ರಿಲೀ ರೊಸೊ ಅವರು ಈ ಬಾರಿಯ ಐಪಿಎಲ್​ನಲ್ಲಿ ನಮ್ಮ ತಂಡಕ್ಕೆ ಅದೃಷ್ಟ ಕೈ ಹಿಡಿದರೆ ನಾವು ಪ್ಲೇ ಆಫ್ ಪ್ರವೇಶ ಪಡೆಯಲಿದ್ದೇವೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ. “ಡೆಲ್ಲಿ ತಂಡ ಈಗ ಭಯಮುಕ್ತವಾಗಿ ಆಡುತ್ತಿದೆ. ಮತ್ತು ಅಪಾಯಕಾರಿ ತಂಡವಾಗಿ ಹೊರಹೊಮ್ಮಿದೆ. ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿ ಪ್ರಬಲ ಪೈಪೋಟಿ ನೀಡುವ ವಿಶ್ವಾಸವಿದೆ” ಎಂದು ಹೇಳಿದರು.

ಇದನ್ನೂ ಓದಿ IPL 2023: ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಲಕ್ನೋ ಸೂಪರ್​ಜೈಂಟ್ಸ್​

ಆರ್​ಸಿಬಿ ವಿರುದ್ಧ ನಮ್ಮ ತಂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದೆ. ಅದರಲ್ಲೂ ವಾರ್ನರ್ ಹಾಗೂ ಫಿಲಿಪ್​ ಸಾಲ್ಟ್ ಅಮೋಘ ಬ್ಯಾಟಿಂಗ್ ನಡೆಸಿದರು. ನಿಜಕ್ಕೂ ಇದು ನಮಗೆ ಉತ್ತಮ ಫಲಿತಾಂಶ. ಎಲ್ಲ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ ಎಂದು ರೊಸೊ ಹೇಳಿದರು.

​ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ ಫಿಲಿಪ್ ಸಾಲ್ಟ್ ಭರ್ಜರಿ 87 ರನ್ ಬಾರಿಸಿ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು. 45 ಎಸೆತಗಳಲ್ಲಿ ಅವರು 8 ಆಕರ್ಷಕ ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿದರು. ಡೇವಿಡ್ ವಾರ್ನರ್ 22, ಮಿಚೆಲ್ ಮಾರ್ಷ್ 26, ರಿಲೀ ರೊಸೊ ಅವರು ಔಟಾಗದೆ 35 ರನ್ ಗಳಿಸಿದರು.

Exit mobile version