ಅಹಮದಾಬಾದ್: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ಆಸ್ಟ್ರೇಲಿಯಾ(India vs Australia Final) ನಡುವಣ ವಿಶ್ವಕಪ್ ಫೈನಲ್ ಪಂದ್ಯದ ಅಂಪೈರ್ಗಳ(World Cup 2023 final Umpires) ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಫೈನಲ್ ಹಣಾಹಣಿಯಲ್ಲಿ ಆನ್ ಫೀಲ್ಡ್ ಅಂಪೈರ್ ಗಳಾಗಿ ರಿಚರ್ಡ್ ಇಲ್ಲಿಂಗ್ವರ್ತ್(Richard Illingworth) ಮತ್ತು ರಿಚರ್ಡ್ ಕೆಟಲ್‌ಬರೋ(Richard Kettleborough) ಅವರು ಕಾರ್ಯ ನಿರ್ವಹಿಸಲಿದ್ದಾರೆ ಆದರೆ ಈ ಪಟ್ಟಿಯನ್ನು ಕಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಡುಕವೊಂದು ಶುರುವಾಗಿದೆ.
ವೆಸ್ಟ್ ಇಂಡೀಸ್ನ ಜೋಯೆಲ್ ವಿಲ್ಸನ್ ಅವರು ಮೂರನೇ ಅಂಪೈರ್ ಆಗಿ, ನ್ಯೂಜಿಲ್ಯಾಂಡ್ನ ಕ್ರಿಸ್ಟೋಫರ್ ಗ್ಯಾಫ್ನಿ ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ಆ್ಯಂಡ್ರ್ಯೂ ಪೈಕ್ರಾಫ್ಟ್ ಅವರು ಮ್ಯಾಚ್ ರೆಫ್ರಿಯಾಗಿ ನೆಮಕಗೊಂಡಿದ್ದಾರೆ. ಅಚ್ಚರಿ ಎಂದರೆ ಅನುಭವಿ, ಲಂಕಾದ ಮಾಜಿ ಆಟಗಾರ ಹಾಗೂ 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಆಗಿದ್ದ ಕುಮಾರ ಧರ್ಮಸೇನಾ ಅವರಿಗೆ ಅವಕಾಶ ಸಿಗಲಿಲ್ಲ. ಕಳೆದ ಸೆಮಿಫೈನಲ್ ಪಂದ್ಯದಿಂದಲೂ ಅವರನ್ನು ದೂರವಿಡಲಾಗಿತ್ತು.
ಇದನ್ನೂ ಓದಿ ಈ ಬಾರಿಯ ವಿಶ್ವಕಪ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಟೀಮ್ ಇಂಡಿಯಾ ಸಾಧಕರಿವರು…
Match officials announced for the #CWC23 final on November 19 👀#INDvAUShttps://t.co/xhu8Ln6Ymf
— ICC (@ICC) November 17, 2023
ಅಂಪೈರ್ಗಳ ಪಟ್ಟಿ
ಫೀಲ್ಡ್ ಅಂಪೈರ್: ರಿಚರ್ಡ್ ಇಲ್ಲಿಂಗ್ ವರ್ತ್ ಮತ್ತು ರಿಚರ್ಡ್ ಕೆಟಲ್‌ಬರೋ
ಮೂರನೇ ಅಂಪೈರ್: ಜೋಯಲ್ ವಿಲ್ಸನ್
ನಾಲ್ಕನೇ ಅಂಪೈರ್: ಕ್ರಿಸ್ ಗಫಾನಿ
ಮ್ಯಾಚ್ ರೆಫರಿ: ಆಂಡಿ ಪೈಕ್ರಾಫ್ಟ್
ಟೀಮ್ ಇಂಡಿಯಾ ಅಭಿಮಾನಿಗಳ ಚಿಂತೆಗೆ ಕಾರಣವೇನು?
ಫೈನಲ್ ಪಂದ್ಯಕ್ಕೆ ರಿಚರ್ಡ್ ಕೆಟಲ್‌ಬರೋ(Richard Kettleborough) ಅಂಪೈರ್ ಆಗದಿರುವುದೇ ಭಾರತದ ಕ್ರಿಕೆಟ್ ಅಭಿಮಾನಗಳ ಚಿಂತೆ ಮತ್ತು ಆತಂಕಕ್ಕೆ ಕಾರಣ. ಹೌದು, ಐಸಿಸಿ ಕೂಟಗಳಲ್ಲಿ ರಿಚರ್ಡ್ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ರಿಚರ್ಡ್ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ. ಇದೀಗ ಭಾರತ ಮತ್ತು ಆಸೀಸ್ ವಿರುದ್ಧದ ಫೈನಲ್ ಪಂದ್ಯಕ್ಕೂ ಅವರ ಹೆಸರು ಕಂಡುಬಂದಿದೆ. ಹೀಗಾಗಿ ಭಾರತ ತಂಡಕ್ಕ ಕಂಡವೊಂದು ಎದುರಾಗಿದೆ ಎನ್ನುವುದು ಅಭಿಮಾನಿಗಳ ಚಿಂತೆಗೆ ಕಾರಣ.
ಇದನ್ನೂ ಓದಿ David Warner : ವಿಶ್ವಕಪ್ ಸೆಮಿ ಫೈನಲ್ ವೇಳೆ ವಿಶೇಷ ದಾಖಲೆ ಬರೆದ ಡೇವಿಡ್ ವಾರ್ನರ್
ಭಾರತ ಸೋತ ವಿವರ ಇಲ್ಲಿದೆ
2014 ರಿಂದ ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್‌ಗೆ ಅವರು ಸಿಗದಿರುವುದು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸಂತಸ ತಂದಿತ್ತು. ಆದರೆ ಫೈನಲ್ಗೆ ಸಿಕ್ಕಿರುವುದು ಕೊಂಚ ಆತಂಕ ಸೃಷ್ಟಿಸುವಂತೆ ಮಾಡಿದೆ.
ಬೇಸರಗೊಂಡಿದ್ದ ಕೆಟಲ್‌ಬರೋ
2019ರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಕೊವೀಸ್ ವಿರುದ್ಧ ಧೋನಿ ಸ್ಟ್ರೈಕ್ನಲ್ಲಿರುವವರೆಗೆ ಭಾರತಕ್ಕೆ ಗೆಲುವ ಖಚಿತ ಎಂದು ಎಲ್ಲ ಭಾರತೀಯರು ನಂಬಿದ್ದರು. ಆದರೆ ಎರಡು ರನ್ ಓಡುವಾಗ ಮಾರ್ಟಿನ್ ಗಪ್ಟಿಲ್ ಅವರ ಡೈರೆಕ್ಟ್ ಥ್ರೋ ಧೋನಿಯನ್ನು ರನೌಟ್ ಮಾಡಿತು. ಅಲ್ಲಿಗೆ ಭಾರತದ ಫೈನಲ್ ಕನಸು ಕಮರಿ ಹೋಯಿತು. ಧೋನಿಯ ರನೌಟ್ ಕಂಡು ಫೀಲ್ಡ್ ಅಂಪೈರ್ ಕೆಟಲ್‌ಬರೋ ಕೂಡ ಬೇಸರಗೊಂಡರು. ಈ ದೃಶ್ಯವನ್ನು ಐಸಿಸಿ ತನ್ನ ಅಧಿಕೃತ ಟ್ವೀಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಇದನ್ನೂ ಓದಿ ವಿಶ್ವಕಪ್ ಗೆಲ್ಲಲು ಪ್ರಯತ್ನಿಸಬೇಡಿ, ಆದರೆ…? ಭಾರತೀಯ ತಂಡಕ್ಕೆ ಸದ್ಗುರು ಸಲಹೆ ಏನು?
WHAT A MOMENT OF BRILLIANCE!
— ICC (@ICC) July 10, 2019
Martin Guptill was 🔛🎯 to run out MS Dhoni and help send New Zealand to their second consecutive @cricketworldcup final! #CWC19 pic.twitter.com/i84pTIrYbk