ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್ (PSL) ಫೈನಲ್(PSL Final) ಪಂದ್ಯದ ವೇಳೆ ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್ ರೂಮ್ ನಲ್ಲಿ ಸಿಗರೇಟ್ ಸೇದುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಪಾಕಿಸ್ತಾನ್ ಸ್ಮೋಕಿಂಗ್ ಲೀಗ್ʼ(Pakistan Smoking League) ಎಂದು ಹಲವರು ಕಮೆಂಟ್ ಮಾಡಿದ್ದಾರೆ.
PAKISTAN "SMOKING" LEAGUE 🚬🔥🔥#HBLPSL9 #HBLPSLFinal pic.twitter.com/pwpaj4bLh8
— Farid Khan (@_FaridKhan) March 18, 2024
ಇಸ್ಲಾಮಾಬಾದ್ ಯುನೈಟೆಡ್ ತಂಡದ ಆಲ್ರೌಂಡರ್ ಆಟಗಾರನಾಗಿರುವ ಇಮಾದ್ ವಾಸಿಂ ಅವರು ಫೈನಲ್ ಪಂದ್ಯದಲ್ಲಿ 4 ಓವರ್ ಎಸೆದು ಕೇವಲ 23 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರಬಹಿಸಿದ್ದರು. ಗೆಲುವಿನ ಹೀರೊ ಎನಿಸಿದ್ದ ಅವರು ಈ ಒಂದು ಘಟನೆಯಿಂದ ನೆಟ್ಟಗರ ಪಾಲಿಗೆ ವಿಲನ್ ಆಗಿದ್ದಾರೆ. ಡ್ರೆಸಿಂಗ್ ರೂಮ್ನಲ್ಲಿ ರಾಜಾರೋಷವಾಗಿ ಸಿಗರೇಟ್ ಸೇದಿರುವ ಬಗ್ಗೆ ಪಾಕ್ ತಂಡದ ಹಲವು ಹಾಲಿ ಮತ್ತು ಮಾಜಿ ಆಟಗಾರರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2024: ರೋಹಿತ್ ಬ್ಯಾಟಿಂಗ್ ಅಭ್ಯಾಸದ ವಿಡಿಯೊ ಹಂಚಿಕೊಂಡ ಮುಂಬೈ ಇಂಡಿಯನ್ಸ್
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೊಹಮ್ಮದ್ ರಿಜ್ವಾನ್ ಸಾರಥ್ಯದ ಮುಲ್ತಾನ್ ಸುಲ್ತಾನ್ 9 ವಿಕೆಟ್ ವಿಕೆಟ್ಗೆ 159 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ 8 ವಿಕೆಟ್ಗೆ 163 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆದರೆ ಈ ಗೆಲುವಿಗಾಗಿ ಅಂತಿಮ ಎಸೆತದ ವರೆಗೂ ಹೋರಾಟ ನಡೆಸಿತು. ತಂಡದ ಪರ ಮಾರ್ಟಿನ್ ಗಪ್ಟಿಲ್(50) ಅರ್ಧಶತಕ ಬಾರಿಸಿ ಮಿಂಚಿದರು. ಅಜಂ ಖಾನ್(30) ಬಾರಿಸಿದರು. ಇಮಾದ್ ವಾಸಿಂ ಅಜೇಯ 19 ರನ್ ಹೊಡೆದರು.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲೂ ನಡೆದಿತ್ತು
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಅಫಫ್ಘಾನಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಶಹಜಾದ್ ಮೈದಾನದಲ್ಲಿ ಸಿಗರೇಟ್ ಸೇದಿ ಶಿಕ್ಷೆಗೂ ಗುರಿಯಾಗಿದ್ದರು. ಜತೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದಲೂ ಛೀಮಾರಿಗೊಳಗಾಗಿದ್ದರು.
ಮಳೆಯ ಕಾರಣ ಪಂದ್ಯ ಆರಂಭ ತಡವಾಗಿತ್ತು. ಈ ವೇಳೆ ಮೈದಾನದಕ್ಕೆ ಇತರೆ ಆಟಗಾರರ ಜತೆ ಆಗಮಿಸಿದ್ದ ಶಹಜಾದ್ ಸಿಗರೇಟ್ ಸೇದಿದ್ದರು. ಈ ಫೋಟೋ ಹಲವು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗಿತ್ತು. ಮೈದಾನದಲ್ಲಿ ಧೂಮಪಾನ ಮಾಡುವ ಮೂಲಕ ಬಿಸಿಬಿ ನೀತಿ ಸಂಹಿತೆ ಆರ್ಟಿಕಲ್ 2.20 ಅನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿತ್ತು. ಶಹಜಾದ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಅವರ ಈ ವರ್ತನೆಗೆ ಒಂದು ಡಿಮೆರಿಟ್ ಅಂಕವನ್ನು ಸೇರಿಸಲಾಗಿತ್ತು.